ಮೈಸೂರು:ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ ಸರಿಯಾದ ಯೋಜನೆ ಮಾಡದೇ ಇದ್ದುದ್ದರಿಂದ ಕರೊನಾ ಪಾಸಿಟಿವ್ ರೇಟ್ ಹೆಚ್ಚಾಗಿರುವುದು ಬೇಸರ ತಂದಿದೆ ಎಂದು ಸಂಸದ ಪ್ರತಾಪ್​ ಸಿಂಹ ಮತ್ತೊಮ್ಮೆ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮೈಸೂರು ಅನ್​ಲಾಕ್​ ವಿಚಾರವಾಗಿ ಮಾತನಾಡಿದ ಪ್ರತಾಪ್​ ಸಿಂಹ, ನಾನು‌ ಒಂದು ತಿಂಗಳ ಹಿಂದೆಯೇ ಹೇಳಿದ್ದೆ. ಮೈಸೂರಿನಲ್ಲಿ ಪರಿಸ್ಥಿತಿ ಸರಿಯಿಲ್ಲ ಅನ್ನೊದನ್ನು ಮನದಟ್ಟು ಮಾಡಿದ್ದೆ. ನನಗೆ ಕೊಟ್ಟಿದ್ದ ಆಕ್ಸಿಜನ್ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದೆ. ಅದರ ನಡುವೆಯೂ ಮೈಸೂರಿನ ಪರಿಸ್ಥಿತಿ ಸರಿಯಿಲ್ಲ ಎಂದು ಅನ್ಸಿತ್ತು. ಮೈಸೂರಿನ ಪಾಸಿಟಿವ್ ರೇಟ್ ಇಡೀ ರಾಜ್ಯದಲ್ಲೇ ಹೆಚ್ಚಿತ್ತು. ಮೇ ತಿಂಗಳಲ್ಲೇ ಶೇ. 28 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇತ್ತು. ಇದು ಸರಿಹೋಗಬೇಕು ಅಂತಲೇ ಇಡೀ ಆಡಳಿತ ವ್ಯವಸ್ಥೆ ಹಳ್ಳಿ ಕಡೆ ಹೋಗಬೇಕು ಎಂದಿದ್ದೆ. ಇವತ್ತು‌ ಮಾಧ್ಯಮದವರಿಗೂ ಅದು ಅರಿವಾಗಿದೆ ಎಂದರು.
ಮೈಸೂರಿನಲ್ಲಿ ಮೇ ತಿಂಗಳು ಒಂದರಲ್ಲೇ ಸಾವಿರಕ್ಕಿಂತ ಹೆಚ್ಚು ಜನ ಬಲಿಯಾಗಿದ್ದಾರೆ. ಗ್ರಾಮಾಂತರ ಭಾಗದಿಂದ ಕ್ರಿಟಿಕಲ್ ಕಂಡೀಷನ್ ಇರುವವರು ಇಲ್ಲಿ ಬಂದು ತೀರಿಕೊಳ್ತಿದ್ದಾರೆ. ಸರಿಯಾದ ಯೋಜನೆ ಮಾಡದೆ ಪಾಸಿಟಿವ್ ರೇಟ್ ಹೆಚ್ಚಾಗಿರೋದು ಬೇಸರ ತಂದಿದೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ಕಿಡಿ ಕಾರಿದರು.
ಈಗಲೂ ಶೇ. 10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದೆ. ಅದನ್ನು ಸರಿಪಡಿಸಬೇಕಿದೆ. ಕಳೆದ 10 ದಿನಗಳಿಂದ ಸಮರೋಪಾದಿಯಲ್ಲಿ ಕೆಲಸ ಮಾಡ್ತಿದ್ದೀವಿ. ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಇದೆಲ್ಲದರ ಬಗ್ಗೆ ಅರಿವಿದೆ. ಎಲ್ಲಾ ಅಧಿಕಾರಿಗಳನ್ನೂ ಜತೆಗೆ ತೆಗೆದುಕೊಂಡು ಕೆಲಸ ಮಾಡ್ತಿದ್ದಾರೆ. ಶೀಘ್ರದಲ್ಲೇ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಮಾಡುತ್ತೇವೆ. ಎಲ್ಲಾ ವಲಯಕ್ಕೆ ಅನುಕೂಲ ಆಗಲು ಅನ್​ಲಾಕ್​ ಮಾಡುವಂತೆ ಕೆಲಸ‌ ಮಾಡ್ತೇವೆ ಎಂದು ಪ್ರತಾಪ್​ ಸಿಂಹ ಹೇಳಿದರು.(ದಿಗ್ವಿಜಯ ನ್ಯೂಸ್​)
ಲವರ್​ ಜತೆಗೂಡಿ ಗಂಡನ ಕೊಲೆ: ಭಯಾನಕ ರಸಹ್ಯ ಬಿಚ್ಚಿಟ್ಟ ಪತ್ನಿಯ ಗೂಗಲ್​ ಸರ್ಚ್​ ಹಿಸ್ಟರಿ!

VIDEO| ಬ್ಯೂಟಿಗೆ ಬೋಲ್ಡ್​ ಆದ ಕಾಮೆಂಟೇಟರ್​: ಜೂಮ್​ ಮಾಡಿದ ಜಾಗದ ಬಗ್ಗೆ ನೆಟ್ಟಿಗರ ತೀವ್ರ ಆಕ್ಷೇಪ! ​

ಹಿಂದುಳಿದ ಸಮುದಾಯಗಳ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ NEET ಮಾರಕ: ನಟ ಸೂರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
