ಮೈಸೂರು:ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದಲೇ ಸಾವರ್ಕರ್ ಅವರು ವೀರ ಸಾವರ್ಕರ್ ಎಂದು ಕರೆಸಿ ಕೊಂಡರು. ಆದರೆ, ರಾಜ್ಯದಲ್ಲಿ ಸಾವರ್ಕರ್ ವಿರುದ್ಧ ಅಪ್ರಚಾರ ನಡೆಯುತ್ತಿದೆ. ಚಿಲ್ಲರೆ ರಾಜಕಾರಣಕ್ಕಾಗಿ ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಹೇಳಿದರು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಇಂದು (ಆ.23) ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶೇಷ ಇತಿಹಾಸವಿದೆ. ಮೈಸೂರಿನಂಥ ಪುಣ್ಯ ಭೂಮಿಯಲ್ಲಿ ಸಾವರ್ಕರ್ ರಥ ಯಾತ್ರೆಗೆ ಚಾಲನೆ ನೀಡುತ್ತಿರುವುದು ನನ್ನ ಸೌಭಾಗ್ಯ. ದೇಶ ಮಹತ್ವದ ಕಾಲಘಟ್ಟದಲ್ಲಿದೆ. ವಿಶ್ವಗುರು ಆಗುವತ್ತ ದೇಶ ಸಾಗುತ್ತಿದೆ. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಸಾವರ್ಕರ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದರು.
ಇಂದಿರಾಗಾಂಧಿ ಅವರಿಂದ ಸಾವರ್ಕರ್ ಅವರು ವೀರ ಸಾವರ್ಕರ್ ಎಂದು ಕರೆಸಿ ಕೊಂಡರು. ಆದರೆ, ರಾಜ್ಯದಲ್ಲಿ ಸಾವರ್ಕರ್ ವಿರುದ್ಧ ಅಪ್ರಚಾರ ನಡೆಯುತ್ತಿದೆ. ಚಿಲ್ಲರೆ ರಾಜಕಾರಣಕ್ಕಾಗಿ ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ. ಶರಣರ ಗುಣವನ್ನು ಮರಣದಲ್ಲಿ ಕಾಣಾ ಎಂಬ ಮಾತಿನಂತೆ ಸಾವರ್ಕರ್ ಗುಣ ಅವರ ಮರಣದ ನಂತರ ಎಲ್ಲರಿಗೂ ಗೊತ್ತಾಗಿದೆ. ಸಾವರ್ಕರ್ ಯುವ ಜನರಿಗೆ ಸದಾ ಪ್ರೇರಣೆ ಎಂದು ಹೇಳಿದರು.
ಸಾವರ್ಕರ್ ಭಾರತೀಯ ಮಾತೆಯ ಹೆಮ್ಮೆಯ ಪುತ್ರ. ಸ್ವಾತಂತ್ರ್ಯ ಹೋರಾಟದ ಜೊತೆಗೆ ಹಿಂದೂ ಧರ್ಮದ ಸುಧಾರಣೆಗೆ ತೊಡಗಿಸಿ ಕೊಂಡಿದ್ದವರು ಸಾವರ್ಕರ್. ಭಾರತ ಮಾತ್ರವಲ್ಲ, ಜಗತ್ತಿನ ಯಾವುದೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅಂತಾ ವೀರ ಹೋರಾಟಗರ ಸಿಗಲ್ಲ. ಸಾವರ್ಕರ್ ಚಿಂತನೆಗಳನ್ನು ಮನೆ ಮನೆಗಳಿಗೆ ತಲುಪಿಸಬೇಕು. ಯುವಕರಿಗೆ ಸಾವರ್ಕರ್ ಚರಿತ್ರೆ ಗೊತ್ತಿಲ್ಲ. ಹೀಗಾಗಿ ಕೆಲವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾವರ್ಕರ್ ರಥಯಾತ್ರೆ ಬರೀ ರಥಯಾತ್ರೆಯಲ್ಲ ಯುವಕರಲ್ಲಿ ದೇಶ ಪ್ರೇಮ ಮೂಡಿಸುವ ಯಾತ್ರೆ ಇದು. ದೇಶದೊಳಗಿನ ವಿದ್ರೋಹಿಗಳ ಎಚ್ಚರಿಕೆ ನೀಡುವ ರಥಯಾತ್ರೆ ಇದು. ದುಷ್ಟ ಸಂಹಾರಕ್ಕಾಗಿ ಆಂಜನೇಯ ವೀರಾಂಜನೇಯ ಸಾವರ್ಕರ್ ರಥಯಾತ್ರೆ ಮಾಡಬೇಕು ಎಂದು ಕರೆ ನೀಡಿದರು.(ದಿಗ್ವಿಜಯ ನ್ಯೂಸ್​)
ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!

ಗೋವಾ ಪ್ರವಾಸದಲ್ಲಿದ್ದ ಬಿಜೆಪಿ ನಾಯಕಿ, ಟಿಕ್​ಟಾಕ್​ ಸ್ಟಾರ್​ ಸೊನಾಲಿ ಪೋಗಟ್​ ಹೃದಯಾಘಾತದಿಂದ ನಿಧನ

ಪ್ರೇಯಸಿ ಹೇಳಿದ ಆ ಒಂದು ಮಾತಿಗೆ 139 ಕೆಜಿ ದೇಹದ ತೂಕವನ್ನು 69ಕ್ಕೆ ಇಳಿಸಿದ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 15 =
Remember me
