ಮೈಸೂರು:ವ್ಹೀಲಿಂಗ್​ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು(26) ಹತ್ಯೆಯಾದ ಯುವಕ. ಹತ್ತು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಗ್ರಾಮದಲ್ಲಿ ಚಿಕ್ಕರಸ್ತೆ ಇದೆ.‌ ಮಕ್ಕಳು ಓಡಾಡುತ್ತಿರುತ್ತಾರೆ. ಹೀಗಾಗಿ ವ್ಹೀಲಿಂಗ್​​ ಮಾಡದಂತೆ ಸಿದ್ದರಾಜ್​ ಬುದ್ಧಿ ಹೇಳಿದ್ದ.
ಇದೇ ವಿಚಾರವಾಗಿ ಎರಡು ದಿನದ ಹಿಂದೆ ಆರೋಪಿಗಳಾದ ಸುಭಾಷ್, ಚಂದನ್, ಪುನೀತ್, ವಿನಯ್, ಮಹೇಂದ್ರ ಹಾಗೂ ರವಿ ಎಂಬುವವರು ಸಿದ್ದರಾಜು ಜತೆಯಲ್ಲಿ ಜಗಳಕ್ಕೆ ಇಳಿದಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ:30 ವರ್ಷಗಳಲ್ಲಿ 3 ಕಿ.ಮೀ. ಉದ್ದದ ಕಾಲುವೆ ಅಗೆದು ಗ್ರಾಮಕ್ಕೆ ನೀರು ಹರಿಸಿದ ಆಧುನಿಕ ಭಗೀರಥ!
ದೂರು ನೀಡಿದ ಕೋಪಕ್ಕೆ ಶನಿವಾರ ರಾತ್ರಿ ಗುಂಪು ಕಟ್ಟಿಗೊಂಡ ಬಂದ ಯುವಕರು ಏಕಾಏಕಿ ಸಿದ್ದರಾಜು ಮೇಲೆ ದಾಳಿ ನಡೆಸಿದ್ದಾರೆ. ಕಣ್ಣಿಗೆ ಕಾರದಪುಡಿ ಎರಚಿ, ದೊಣ್ಣೆ ಹಾಗೂ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಗಲಾಟೆ ತಡೆಯಲು ಹೋದ ಮೃತ ಯುವಕನ ಚಿಕ್ಕಪನ ಮೇಲು ಹಲ್ಲೆ ಮಾಡಿದ್ದಾರೆ. ಘಟನೆ ನಂತರ ಯುವಕರ ಗುಂಪು ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ವಿಮಾ ಹಣ ಪಡೆಯಲು ಕೈಯನ್ನೇ ತುಂಡರಿಸಿಕೊಂಡಳು! ಆದರೆ ಆದದ್ದೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
