ಮೈಸೂರು:ಮಾವನ ಮೇಲಿನ ಮುನಿಸಿಗೆ ಗಂಡನಿಗೆ ಪತ್ರ ಬರೆದು ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಬ್ಬಾಳ ಪೊಲೀಸ್ ಬಡಾವಣೆಯಲ್ಲಿ ನಡೆದಿದೆ.
ಚೈತ್ರಾ (25) ಆತ್ಮಹತ್ಯೆ ಮಾಡಿಕೊಂಡವರು. 5 ತಿಂಗಳ ಹಿಂದೆ ಮೋಹನ್ ಆರಾಧ್ಯ‌ ಎಂಬವರನ್ನು ಮದುವೆಯಾಗಿದ್ದ ಚೈತ್ರಾ, 3 ತಿಂಗಳ ಗರ್ಭಿಣಿಯಾಗಿದ್ದರು. ಪತಿ ಮೋಹನ್​ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ.
ಇದನ್ನೂ ಓದಿರಿ:ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್‌- ಮರ್ಡರ್‌! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ
ಮದುವೆಯಾದ ದಿನದಿಂದ ಮಾವ ಸರಿಯಾಗಿ ಮಾತನಾಡಿಸಿಲ್ಲ ಎಂದು ಆರೋಪಿಸಿರುವ ಚೈತ್ರಾ, ನನ್ನ ಜತೆಗೆ ನನ್ನ ತಂದೆ ಹಾಗೂ ತಾಯಿಗೂ ಮಾವನಿಂದ ಗೌರವ ಸಿಕ್ಕಿಲ್ಲ. ತವರು ಮನೆಗೆ ಹೋಗುವ ವೇಳೆ ಕೂಡ ಅವಮಾನ ಮಾಡಿದ್ದಾರೆ. ನಿಮ್ಮ ಅಪ್ಪನೇ ನನಗೆ ಹೀಗಾಗಲು ಕಾರಣ ಎಂದು ಚೈತ್ರಾ ದೂರಿದ್ದಾರೆ.

ತನ್ನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದು ನಿಮ್ಮ ತಂದೆ ಹೇಳಿದ್ದರು. ಆದರೆ ನಮ್ಮ ಮನೆಯವರ ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ. ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಕಾರಣ ಎಂದು ಮಾವ ಮಲ್ಲಾರಾಧ್ಯ ಮೇಲೆ ಆರೋಪಿಸಿ ಪತ್ರ ಬರೆದು ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿರಿ:ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?
ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಚೊಚ್ಚಲ ಹೆರಿಗೆಯಲ್ಲೇ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

ಮಗಳ ನೋಡಲು ಬಂದ ತಾಯಿಗೆ ಕಾದಿತ್ತು ಶಾಕ್​: ಮದ್ವೆಯಾದ ಕೆಲವೇ ದಿನಗಳಲ್ಲಿ ಅತ್ತೆ-ಸೊಸೆ ನಿಗೂಢ ಸಾವು!

VIDEO| ಒಂದು ಟ್ರ್ಯಾಕ್ಟರ್​ಗೆ ಕಬ್ಬು ತುಂಬಿದ 12 ಟ್ರೈಲರ್ ಹಾಕಿ ಎಳೆದ ಭೂಪರಿಗೆ ಶಾಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + 3 =
Remember me
