ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಸಲುವಾಗಿ ಇಂದು ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ ಆಗಿದ್ದಾರೆ. ಈ ಮೂಲಕ ಈ ಸಲದ ಅಧ್ಯಕ್ಷ ಸ್ಥಾನ ವಿತರಕರ ವಲಯದ ಪಾಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಎನ್‍.ಎಂ. ಸುರೇಶ್‍, ವಿ.ಹೆಚ್.ಸುರೇಶ್ (ಮಾರ್ಸ್ ಸುರೇಶ್‍), ಎ. ಗಣೇಶ್‍ ಮತ್ತು ಶಿಲ್ಪಾ ಶ್ರೀನಿವಾಸ್‍ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಒಟ್ಟು 1599 ಮತಗಳಿದ್ದು, ಆ ಪೈಕಿ 967 ಮತಗಳು ಚಲಾವಣೆಗೊಂಡಿವೆ. ನಾಲ್ವರಲ್ಲಿ ಎನ್​.ಎಂ. ಸುರೇಶ್ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ, 120 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಎನ್​.ಎಂ. ಸುರೇಶ್ 337 ವೋಟುಗಳನ್ನು ಪಡೆದಿದ್ದು, ಇವರಿಗೆ ತೀವ್ರ ಪೈಪೋಟಿ ನೀಡಿದ್ದ ಶಿಲ್ಪಾ ಶ್ರೀನಿವಾಸ್ 217 ಮತಗಳನ್ನು ಗಳಿಸಿದ್ದಾರೆ. ಎ. ಗಣೇಶ್ 204, ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಧ್ಯಕ್ಷ:ಎನ್​.ಎಂ. ಸುರೇಶ್
ಉಪಾಧ್ಯಕ್ಷರು:ಪ್ರಮೀಳಾ ಜೋಷಾಯ್ -ನಿರ್ಮಾಪಕರ ವಲಯ, ಜಿ. ವೆಂಕಟೇಶ್-ವಿತರಕರ ವಲಯ, ನರಸಿಂಹುಲು -ಪ್ರದರ್ಶಕರ ವಲಯ.
ಗೌರವ ಕಾರ್ಯದರ್ಶಿ:ಬಾ.ಮ.ಗಿರೀಶ್ -ನಿರ್ಮಾಪಕರ ವಲಯ, ಸುಬ್ರಮಣಿ ವಿ.(ಕರಿಸುಬ್ಬು)-ವಿತರಕರ ವಲಯ, ಸುಂದರ್ ರಾಜು ಆರ್.- ಪ್ರದರ್ಶಕರ ವಲಯ
ಖಜಾಂಚಿ:ಜಯಸಿಂಹ ಮುಸರಿ
ಚೈತ್ರಾ ಕುಂದಾಪುರ & ಟೀಂ​ ಇಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್​ಗೆ ಎಂಟ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
