ಬೆಂಗಳೂರು:ನಾನು ಬಿಜೆಪಿಗೆ ಸೇರಲು ಅಭಿವೃದ್ಧಿಯೇ ಕಾರಣ. ದೇಶದ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಕೊಳ್ಳೇಗಾಲ ಶಾಸಕ ಎನ್​. ಮಹೇಶ್​ ಹೇಳಿದರು.
ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಬಿಜೆಪಿ ಸೇರಿದ ಬಳಿಕ ಶಾಸಕ‌ ಎನ್.ಮಹೇಶ್ ಮಾತನಾಡಿದರು. ನಾನು ಬಿಜೆಪಿಯನ್ನು ಸೇರುತ್ತಿದ್ದೇನೆ. ಅದಕ್ಕೆ ಕಾರಣ ಅಭಿವೃದ್ಧಿ. ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಅಂಬೇಡ್ಕರ್ ಎಂದು ಹೇಳಿದರು.
ಏಳು ಬೀಳುಗಳನ್ನು ಕಂಡು ರಾಷ್ಟ್ರ ಇಂದು ಅಭಿವೃದ್ಧಿ ಕಡೆಗೆ ಸಾಗುತ್ತಿದೆ. ಅಭಿವೃದ್ಧಿಯತ್ತ ಬಿಜೆಪಿ ಕೊಂಡೊಯ್ಯುತ್ತಿದೆ. ನನಗೆ ಆತ್ಮಸ್ಥೈರ್ಯ ತುಂಬಿದವರು ಮಾಜಿ ಸಿಎಂ ಯಡಿಯೂರಪ್ಪ. ಬೊಮ್ಮಾಯಿ ಅವರು 12 ವರ್ಷಗಳ ಪರಿಚಯದವರು. ರಾಷ್ಟ್ರಾಧ್ಯಕ್ಷ ನಳಿನ್​ ಕುಮಾರ್​ ಕಟೀಲರನ್ನ ದೆಹಲಿಯಲ್ಲಿ ಭೇಟಿ ಮಾಡಿದ್ದೆ. ಅವರಿಂದ ಈ ಕಾರ್ಯಕ್ರಮದಲ್ಲಿದ್ದಾರೆ ಎಂದು ತಿಳಿಸಿದರು.
ಮೈಸೂರಲ್ಲಿ ವಿಜಯಣ್ಣ ಪಕ್ಷ ಸಂಘಟಿಸ್ತಿದ್ದಾರೆ. ಅವರು ನನಗೆ ಮತ್ತೊಂದು ಶಕ್ತಿ. ಹೀಗಾಗಿ ನಾನು ಬಿಜೆಪಿ ಸೇರ್ಪಡೆಯಾಗ್ತಿದ್ದೇನೆ ಎಂದು ಬಿಜೆಪಿ ಸೇರ್ಪಡೆಯಾದ ಮಹೇಶ್ ಹೇಳಿಕೆ ನೀಡಿದರು.
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆ
ಕಂಕಣ ಭಾಗ್ಯಕ್ಕೆ ಕರೊನಾ ಬ್ರೇಕ್! 27 ಜೋಡಿಗಳ ವಿವಾಹ ಮುಂದೂಡಿಕೆ
ಕಣ್ಣು ಕುಕ್ಕುವಂತಿದೆ ಶಾಸಕ ಜಮೀರ್‌ ಬಂಗಲೆ! ಅರೇಬಿಯನ್‌ ಶೈಲಿಯ ಅರಮನೆಗೆ ಚಿನ್ನದ ಲೇಪನ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 3 =
Remember me
