ಚಾಮರಾಜನಗರ:ಉತ್ತರ ಪ್ರದೇಶ ಕೊಲೆಗಡುಕರ ರಾಜ್ಯವೆಂದು ಉಚ್ಛಾಟಿತ ಬಿಎಸ್​ಪಿ ಶಾಸಕ ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಥರಸ್​ನ ಸಂತ್ರಸ್ತೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ಜಾಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಎನ್​ಕೌಂಟರ್ ಮಾಡುವಂತೆ ಮಹೇಶ್ ಒತ್ತಾಯಿಸಿದ್ದಾರೆ.
ಆಂಧ್ರ ಪ್ರದೇಶ ರೀತಿಯಲ್ಲೇ ಇವರಿಗೆ ಎನ್​ಕೌಂಟರ್ ಮಾಡಿ ಶಿಕ್ಷೆ ನೀಡಬೇಕು. ಈ ಘಟನೆಯನ್ನು ಇಡೀ ದೇಶ ನೋಡಬೇಕು. ಉತ್ತರ ಪ್ರದೇಶ ಕೊಲೆಗಡುಕ‌ರ ರಾಜ್ಯ. ಕೊಲೆಗಡುಕರು ತಪ್ಪಿಸಿಕೊಳ್ಳಲು ರಾಜ್ಯಭಾರ ನಡೆಸುತ್ತಿರುವವರೇ ಸಹಾಯ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ:ಗೌರಮ್ಮ ವಾಕ್ಸಮರಕ್ಕೆ ಬೆಚ್ಚಿದ ಕಾಂಗ್ರೆಸ್​: ಡಿ.ಕೆ. ರವಿ ಪತ್ನಿ ಕುಸುಮಾ ಆಸೆಗೆ ತಣ್ಣೀರು ಸಾಧ್ಯತೆ!?
ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲಿ ಸಂಪೂರ್ಣ ವಿಫಲವಾಗಿದೆ. ಯುಪಿಯಲ್ಲಿ ಕಳೆದ ಒಂದು ವಾರದಲ್ಲಿ ಮೂವರು ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಯಾಗಿದೆ. ಎನ್​ಕೌಂಟರ್ ಶಿಕ್ಷೆಯಿಂದ ಕೊಲೆಗಡುಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪನೆಯಾಗುತ್ತೆ ಎಂದರು.
ಉತ್ತರ ಪ್ರದೇಶದ ದಲಿತ ಹೆಣ್ಣು ಮಕ್ಕಳನ್ನು ಅಲ್ಲಿನ ಠಾಕೂರು ಮತ್ತು ಜಾಟರ್​ಗಳೂ ಫ್ರೀ ಪ್ರಾಡಕ್ಟ್ ಎಂದು ತಿಳಿದುಕೊಂಡಿದ್ದಾರೆ. ಇದನ್ನು ನಿಯಂತ್ರಿಸಬೇಕು. ಇಲ್ಲವಾದರೆ ಯುಪಿ ರಾಜಕಾರಣ ಉಲ್ಟಾ ಆಗುತ್ತದೆ ಎಂದು ಮಹೇಶ್ ಎಚ್ಚರಿಸಿದರು.(ದಿಗ್ವಿಜಯ ನ್ಯೂಸ್​)
ಹಾಥರಸ್​ ಪ್ರಕರಣ: ಯುಪಿ ಪೊಲೀಸರ ದೌರ್ಜನ್ಯ ಬಿಚ್ಚಿಟ್ಟ ಸಂತ್ರಸ್ತೆ ಕುಟುಂಬದ ಸದಸ್ಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
