ರಾಜ್ಯ ರಾಜಧಾನಿಯ ನಿವಾಸಿಗಳ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶನಿವಾರ ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್​ಇನ್ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು. ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಫೋನ್-ಇನ್ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಕರೆ ಮಾಡಿದ ಹಲವು ಮಂದಿ ತಾವು ವಾಸಿಸುವ ಸ್ಥಳಗಳಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ನಡೆಯದಿರುವುದು, ನಿವೇಶನ ಖಾತೆ ಬದಲಾವಣೆ ಸಮಸ್ಯೆ, ಬೀದಿ ದೀಪಗಳಿಲ್ಲದಿರುವುದು ಸೇರಿ ಹಲವು ಕುಂದು-ಕೊರತೆಗಳನ್ನು ಗಮನಕ್ಕೆ ತಂದರು.
ಸಾರ್ವಜನಿಕರ ಸಮಸ್ಯೆಗಳಿಗೆ ಆಯುಕ್ತರ ಉತ್ತರ
ಕಟ್ಟಡ ನಿರ್ವಣಕ್ಕೆ ನಕ್ಷೆ ಮಂಜೂರಾತಿಗೆ ದಾಖಲೆಗಳನ್ನು ಆನ್​ಲೈನ್ ಮೂಲಕ ಅಪ್​ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನ್ನು ಸಂರ್ಪಸಿದರೂ ಪ್ರಯೋಜನವಾಗಿಲ್ಲ.
| ಸುಮಂತ್ ಬೆಂಗಳೂರು.
ಆನ್​ಲೈನ್​ನಲ್ಲಿ ಇದುವರೆಗೆ ಇಂತಹ 179 ದಾಖಲೆಗಳನ್ನು ಅಪ್ರೂವಲ್ ಮಾಡಿದ್ದೇವೆ. ಬೇರೆ ಕಡೆಯೂ ಇಂತಹ ಸಮಸ್ಯೆಗಳಿರಬಹುದು. ಬಿಬಿಎಂಪಿ ಅಧಿಕಾರಿಗಳು ನಿಮ್ಮನ್ನು ಸಂರ್ಪಸಿ ಸಮಸ್ಯೆ ಬಗೆಹರಿಸುತ್ತಾರೆ. ಮುಂದಿನ ವಾರದೊಳಗೆ ಇಂತಹ ಸಮಸ್ಯೆಗಳು ಬಗೆಹರಿಯಲಿವೆ. ಯಾವುದೇ ನಾಗರಿಕ ತಮ್ಮ ಕೆಲಸಕ್ಕಾಗಿ ಕಚೇರಿಗೆ ಅಲೆಯಬಾರದು. ಬಿಬಿಎಂಪಿ ಅಧಿಕಾರಿಗಳಿಗೂ ನಿಮಗೂ ಸಂಪರ್ಕವೇ ಇರಬಾರದು. ಪ್ಲಾ್ಯನ್ ಅವರೇ ಅಪ್​ಲೋಡ್ ಮಾಡಬೇಕು. ಶುಲ್ಕಗಳನ್ನೂ ಆನ್​ಲೈನ್​ನಲ್ಲೇ ಪಾವತಿಸಬೇಕು. ಮನೆಯಲ್ಲಿದ್ದುಕೊಂಡೇ ಸಾರ್ವಜನಿಕರ ಕೆಲಸ ಆಗಬೇಕು ಎಂಬ ಉದ್ದೇಶದಿಂದ ಇಂತಹ ಯೋಜನೆ ಜಾರಿಗೆ ತರಲಾಗಿದೆ.
ಹಗದೂರು ವಾರ್ಡ್​ನಲ್ಲಿ ಸ್ಯಾನಿಟರಿಗೆ ಸಂಬಂಧಿಸಿದ ಕಾಮಗಾರಿ 1 ತಿಂಗಳಿಂದ ನಿಂತಿದೆ. ಮಳೆ ಬಂದರೆ ರಸ್ತೆಯಲ್ಲಿ ಓಡಾಡಲು ಸಮಸ್ಯೆಗಳಾಗುತ್ತಿವೆ. ಕಾವೇರಿ ನೀರು ಸಂಪರ್ಕಕ್ಕೆ ಒಪ್ಪಿಗೆ ಸಿಕ್ಕಿದರೂ ಕಾಮಗಾರಿ ನಡೆದಿಲ್ಲ ಏಕೆ ?
| ನಾಗರಾಜ್ ಶಾಸ್ತ್ರಿ ಮಹದೇವಪುರ
ನಗರದಲ್ಲಿ 3 ಸಾವಿರ ಕಿ.ಮೀ. ರಸ್ತೆಗಳನ್ನು ಅಗೆದು ಬಿಡಬ್ಲ್ಯುಎಸ್​ಎಸ್​ಬಿನಿಂದ ಕಾವೇರಿ ನೀರಿಗೆ ಪೈಪ್ ಅಳವಡಿಸಿದರೆ, ಅದೇ ಭಾಗದ ಮತ್ತೊಂದು ಕಡೆ ಒಳಚರಂಡಿಗಾಗಿ ಪೈಪ್ ಅಳವಡಿಕೆಯಾಗುತ್ತಿದೆ. ಈ ಬಗ್ಗೆ ಬಿಡಬ್ಲ್ಯುಎಸ್​ಎಸ್​ಬಿ ಜತೆ ರ್ಚಚಿಸುತ್ತೇವೆ. ಈ ಎರಡೂ ಕಾಮಗಾರಿ ನಡೆದ ಬಳಿಕ ರಸ್ತೆ ಮಾಡಲು ಸಾಧ್ಯವಾಗುತ್ತದೆ. ಈ ಕುರಿತು ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಪ್ರತಿ ವಾರ್ಡ್​ನ ಸಮಸ್ಯೆಗಳನ್ನು ವಾರ್ಡ್​ಗಳಲ್ಲೇ ಬಗೆಹರಿಸಬೇಕು ಎಂಬ ಉದ್ದೇಶದಿಂದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ವಾರ್ಡ್ ಸಮಿತಿ ರಚಿಸಿ ತಿಂಗಳಿಗೆ 2 ಸಭೆ ನಡೆಸುತ್ತೇವೆ. ವಾರ್ಡ್ ಸಂಘಗಳು, ಸ್ಥಳೀಯರು ಸಭೆಯಲ್ಲಿ ಭಾಗವಹಿಸಬಹುದು.
ಅಂಜನಾನಗರದ ಹೇರೋಹಳ್ಳಿ ವಾರ್ಡ್​ನಲ್ಲಿರುವ ಎರಡು ಪಾರ್ಕ್​ಗಳು 10 ವರ್ಷಗಳಿಂದ ಅಭಿವೃದ್ಧಿಯಾಗಿಲ್ಲ. ಈಸ್ಟ್​ವೆಸ್ಟ್, ಮುದ್ದಿನಪಾಳ್ಯ ಮುಖ್ಯರಸ್ತೆಗಳು ಡಾಂಬರೀಕರಣವಾದ 2 ತಿಂಗಳೊಳಗೆ ಹಾಳಾಗಿವೆ. ಫುಟ್​ಪಾತ್ ಅಂಗಡಿಗಳಿಂದ ಪಾದಚಾರಿಗಳಿಗೆ ಓಡಾಡಲು ಆಗುತ್ತಿಲ್ಲ.
| ವೇಣುಗೋಪಾಲ್ ಅಂಜನಾನಗರ
ತ್ವರಿತವಾಗಿ ಪಾರ್ಕ್ ಅಭಿವೃದ್ಧಿಪಡಿಸಲು ನಮ್ಮಲ್ಲಿ ಅನುದಾನಗಳಿವೆ. ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕಳಪೆ ಕಾಮಗಾರಿಯಿಂದ ರಸ್ತೆಗಳು ಹಾನಿಯಾಗಿರಬಹುದು. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್​ಗಳ ವಿರುದ್ಧ ಕ್ರಮ ಕೈಗೊಂಡು ರಸ್ತೆ ಸರಿಪಡಿಸುತ್ತೇವೆ. ಫುಟ್​ಪಾತ್ ಒತ್ತುವರಿ ಮಾಡಿ ಅಂಗಡಿ ಇಟ್ಟಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
ನಮ್ಮ ಅತ್ತೆಯವರ ಆಸ್ತಿ ಗಿಫ್ಟ್ ಡೀಡ್ ಆಗಿ ನನ್ನ ಪತ್ನಿಗೆ ಬಂದಿದೆ. ಅದರ ಖಾತೆ ಬದಲಾಯಿಸಲು ಬಿಬಿಎಂಪಿಗೆ ಅಪ್ಲೈ ಮಾಡಿದ್ದು, ಅದಕ್ಕೆ ಉತ್ತರ ಪತ್ರ ಕೊಟ್ಟು ಸುಮ್ಮನಾಗಿದ್ದು, ಖಾತೆ ಬದಲಾವಣೆಯಾಗಿಲ್ಲ.
| ರಾಘವ್ ಶ್ರೀನಗರ
ಹೊಸದಾಗಿ 15ದಿನದೊಳಗೆ ಡಿಜಿಟಲೈಸ್ ಖಾತಾ ಮಾಡುತ್ತಿದ್ದೇವೆ. ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆ ವೇಳೆ ನಿಮ್ಮ ಸಮಸ್ಯೆಯನ್ನು ಸರಿಪಡಿಸಬಹುದು. ಈ ಸೇವೆ ಜಾರಿಗೆ ಬಂದಾಗ ಈ ಕುರಿತು ದಿನಪತ್ರಿಕೆ ಹಾಗೂ ವೆಬ್​ಸೈಟ್​ಗಳಲ್ಲಿ ಮಾಹಿತಿ ನೀಡುತ್ತೇವೆ. ಇದಾದ ನಂತರ ಆನ್​ಲೈನ್​ನಲ್ಲಿ ನಿಮ್ಮಜಾಗದ ಬಗ್ಗೆ ಅಪ್​ಲೋಡ್ ಮಾಡಬಹುದು.
ವಿಲ್ಸನ್ ಗಾರ್ಡನ್​ನ ಬಿಟಿಎಸ್ ರಸ್ತೆ ಕಾಮಗಾರಿ, ಒಳಚರಂಡಿ ಕಾಮಗಾರಿ ಮುಗಿದಿದೆ. ಆದರೆ, ಮಳೆ ಬಂದರೆ ಚರಂಡಿ ನೀರು ತುಂಬಿ ರಸ್ತೆಗೆ ಬರುತ್ತದೆ. ಇಲ್ಲಿ ಸಾಕಷ್ಟು ಕುಟುಂಬಗಳು ಇದರಿಂದ ಸಮಸ್ಯೆ ಅನುಭವಿಸುತ್ತಿದೆ.
| ಲತಾ, ಬಿಟಿಎಸ್ ಮುಖ್ಯರಸ್ತೆ
ವಿಲ್ಸನ್ ಗಾರ್ಡನ್ ಒಳಚರಂಡಿ ವ್ಯವಸ್ಥೆ ಬಗ್ಗೆ ಬಿಡಬ್ಲ್ಯೂಎಸ್​ಎಸ್​ಬಿ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇವೆ. ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ.
ಎಸಿಎಸ್ ಲೇಔಟ್​ನಲ್ಲಿ ಲಾಕ್​ಡೌನ್ ಜಾರಿಗೆ ಮುನ್ನ ಆರಂಭಿಸಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಳಚರಂಡಿ, ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಜನರಿಗೆ ಓಡಾಡಲು ಕಷ್ಟವಾಗುತ್ತಿದೆ. ನಮ್ಮ ಸಮಸ್ಯೆ ಬಗೆಹರಿಸುವಿರಾ ?
| ಪೂರ್ಣಿಮಾ ಕಲ್ಮಠ್ ಕುಂದಲಹಳ್ಳಿ
ರಸ್ತೆಗೆ ಡಾಂಬರು ಹಾಕುವುದು ಸೇರಿ ಎಲ್ಲ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳ ಬಳಿ ಈ ಕುರಿತು ರ್ಚಚಿಸುತ್ತೇನೆ.
ಸಿಟಿ ಮಾರುಕಟ್ಟೆ ಬಳಿಯ ಮಳವಳ್ಳಿ ರಾಮರಾವ್ ರಸ್ತೆಯಲ್ಲಿ ಲಾಕ್​ಡೌನ್​ಗಿಂತ ಮುನ್ನ ನಮ್ಮ ಅಂಗಡಿ ಮುಂದೆ ಪೈಪ್​ಲೈನ್ ಅಳವಡಿಸಲು ಅಗೆದಿದ್ದಾರೆ. ಇದಾದ ಬಳಿಕ ಅರ್ಧಕ್ಕೆ ಕಾಮಗಾರಿ ಮೊಟಕುಗೊಳಿಸಿದ್ದು, ಮಳೆ ಬಂದರೆ ಇಲ್ಲಿ ನೀರು ತುಂಬಿ ಓಡಾಡಲು ಸಮಸ್ಯೆಯಾಗುತ್ತಿದೆ. ಬಿಬಿಎಂಪಿಗೆ ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲ.
| ನಾಗರಾಜ್ ಸಿಟಿ ಮಾರುಕಟ್ಟೆ
2 ದಿನದಲ್ಲಿ ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ನಂತರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಅರ್ಧಕ್ಕೆ ನಿಂತ ಕೆಲಸ ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತೇವೆ.
ಕೆಂಪಾಪುರದ ಸುತ್ತ 15-20 ಲೇಔಟ್​ಗಳಿದ್ದು, ಅಂಚೆ ಕಚೇರಿಯಿಲ್ಲ. ಕಾಫಿಬೋರ್ಡ್ ಲೇಔಟ್ ಮುಖ್ಯರಸ್ತೆ ಬಳಿ ಬಿಬಿಎಂಪಿ ಕಟ್ಟಡ ಇದೆ. ಇದರಲ್ಲಿ ನೆಲ ಮಹಡಿ ಖಾಲಿಯಿದ್ದು, ಈ ಜಾಗದಲ್ಲಿ ಅಂಚೆ ಕಚೇರಿ ನಿರ್ವಿುಸಲು ಅವಕಾಶ ಮಾಡಿಕೊಡುವಿರೇ?
| ಮಾರ್ಕಂಡೇಯ ನಿವೃತ್ತ ಉದ್ಯೋಗಿ
ಕಾಫಿಬೋರ್ಡ್ ಲೇಔಟ್​ನ ಬಿಬಿಎಂಪಿ ಕಟ್ಟಡದಲ್ಲಿ ಜಾಗ ಖಾಲಿಯಿದ್ದರೆ ಅಂಚೆ ಕಚೇರಿ ನಿರ್ವಿುಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಮೆಜೆಸ್ಟಿಕ್ ಸೇರಿ ನಗರದ ಹಲವೆಡೆ ಫುಟ್​ಪಾತ್​ನಲ್ಲಿ ಅಂಗಡಿಮುಗಟ್ಟು ಗಳಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿವೆ. ನಗರದ ಅಂಗಡಿಗಳ ಹೆಚ್ಚಿನ ನಾಮಫಲಕಗಳು ಆಂಗ್ಲಭಾಷೆಯಲ್ಲಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲವೇ ?
| ಸಂಪತ್ ಕೆಂಗೇರಿ
ಮೆಜೆಸ್ಟಿಕ್ ಸೇರಿ ಹಲವೆಡೆ ಫುಟ್​ಪಾತ್​ನಲ್ಲಿ ನಿರ್ವಿುಸಿರುವ ಅಂಗಡಿ-ಮುಂಗಟ್ಟು ತೆರವುಗೊಳಿಸಿದರೂ ಪ್ರಯೋಜನವಾಗುತ್ತಿಲ್ಲ. ಮಾರ್ಷಲ್​ಗಳನ್ನು ನಿಯೋಜಿಸಿ ಕ್ರಮ ಕೈಗೊಳ್ಳಲು ಚಿಂತಿಸಲಾಗುವುದು. ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ನಿಯಮ ಉಲ್ಲಂಘಿಸಿದ ಅಂಗಡಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು.
ಮಲ್ಲತ್ತಹಳ್ಳಿ ಕಲ್ಚರಲ್ ಅಸೋಸಿಯೇಶನ್ ಪಕ್ಕದಲ್ಲಿ 5 ಮಹಡಿಯ ಅಪಾರ್ಟ್​ವೆುಂಟ್ ನಿರ್ವಣಗೊಂಡಿದ್ದು, ಇದರ ಸುತ್ತ ಮುತ್ತ ಖಾಲಿ ಜಾಗವಿದೆ. ಇದರ ಅಕ್ಕ-ಪಕ್ಕ ಕಟ್ಟಡ ನಿರ್ವಿುಸಿದರೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳಿಗೆ ತಿಳಿಸಿದರೂ ಉಪಯೋಗವಾಗಿಲ ?
| ಬಸವಲಿಂಗಪ್ಪ ಮಲ್ಲತ್ತಹಳ್ಳಿ
ಈ ಕುರಿತು ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇನೆ.
ಕರೊನಾ ಹಾವಳಿಯನ್ನು ತಡೆಗಟ್ಟಲು ಒಳ್ಳೆಯ ಕೆಲಸ ಮಾಡಿದ್ದೀರಿ. ಇಟ್ಟಮಡು ಬಳಿ ಇರುವ ಸಪ್ತಗಿರಿ ಲೇಔಟ್ ಬಳಿಯ ರಾಜಕಾಲುವೆ ಬಳಿ ಇರುವ ರಸ್ತೆ ಬಹಳ ಕೆಟ್ಟು ಹೋಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬಹುದೇ ?
| ಪುರುಷೋತ್ತಮ್ ಹಿರಿಯ ನಾಗರೀಕರು
ಹಾಳಾದ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಲಾಗು ವುದು. ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡುತ್ತೇನೆ.
ಬೇಗೂರು ವಿಟ್ಟಸಂದ್ರದಲ್ಲಿ ರಸ್ತೆಗಳು ಸರಿಯಿಲ್ಲ, ಬೀದಿ ದೀಪಗಳಿಲ್ಲ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷಿಸಿದ್ದಾರೆ. ನಮ್ಮ ಸಮಸ್ಯೆ ಬಗೆಹರಿಸುವಿರೇ ?
| ಮಂಜುನಾಥ್, ಮಾಲಿನಿ ಬೇಗೂರು
ಆ ಭಾಗದ ರಸ್ತೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಬೀದಿ ದೀಪಗಳಿಲ್ಲದ ಕಡೆ ಸದ್ಯದಲ್ಲೇ 330 ಹೈ ಮಾಸ್ಟ್ ಲೈಟ್ ಅಳವಡಿಸಲಾಗುವುದು.
ಜೆ.ಪಿ. ನಗರ 5ನೇ ಹಂತದಲ್ಲಿ ಮೂಲ ಸೌಕರ್ಯವನ್ನೇ ಕಲ್ಪಿಸಿಲ್ಲ. ಕಾವೇರಿ ನೀರು ಸಂಪರ್ಕವಿಲ್ಲದೇ ಕುಡಿಯಲು ನೀರು ಸಿಗುತ್ತಿಲ್ಲ.
| ಮಂಜುನಾಥ ಜೆಪಿ ನಗರ
ಬಿಡಬ್ಲ್ಯುಎಸ್​ಎಸ್​ಬಿ ಅಧಿಕಾರಿಗಳ ಜತೆ ರ್ಚಚಿಸಿ ಈ ಭಾಗದ ಜನರ ಸಮಸ್ಯೆ ಪರಿಹರಿಸಲಾಗುವುದು.
ರಾಮಮೂರ್ತಿನಗರದಲ್ಲಿ ರಸ್ತೆಗಳು ಹಾಳಾಗಿದ್ದು, ವಾಹನ ಓಡಾಟಕ್ಕೆ ತೊಂದರೆ ಉಂಟಾಗಿದೆ.
| ದರ್ಶನ್ ರಾಮಮೂರ್ತಿನಗರ
ಸಂಬಂಧಿಸಿದ ಅಧಿಕಾರಿ ಗಳಿಗೆ ಈ ಕುರಿತು ಸೂಚನೆ ನೀಡಿ ಹಾಳಾದ ರಸ್ತೆ ಸರಿಪಡಿಸಲು ಸೂಕ್ತ ಕಾಮಗಾರಿ ನಡೆಸುತ್ತೇವೆ.
ಕರೊನಾ ಲಸಿಕೆ ಬಂದ ಬಳಿಕ ಹಿರಿಯ ನಾಗರಿಕರಿಗೆ ಇದನ್ನು ಒದಗಿಸುವ ವ್ಯವಸ್ಥೆ ಮಾಡಿದರೆ ಉತ್ತಮ.
| ರಾಮ ಹೆಬ್ಬಾಳ
ನಿಮ್ಮ ಸಲಹೆ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸುತ್ತೇವೆ.
ಸುಧಾಮನಗರ ವಾರ್ಡ್​ನ ಜರ್ನಲಿಸ್ಟ್ ಕಾಲನಿಯಲ್ಲಿ ಒಳಚರಂಡಿ, ರಸ್ತೆ ವ್ಯವಸ್ಥೆ ಸರಿಯಿಲ್ಲದೇ ಜನರಿಗೆ ತೊಂದರೆಯಾಗುತ್ತದೆ.
| ವೆಂಕಟೇಶ್ ಆಟೋಮೊಬೈಲ್ ಅಸೋಸಿಯೇಷನ್ ಡೀಲರ್ಸ್
ಇಲ್ಲಿನ ಸಮಸ್ಯೆ ಪರಿಶೀಲಿಸಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:12 − one =
Remember me
