ಮೈಸೂರು/ಹಾಸನ:ಅರಸಿಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತ ಹಾಗೂ ಸಂಬಂಧಿ ಎನ್​.ಆರ್​. ಸಂತೋಷ್​ ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನೊಂದೆಡೆ ವರುಣಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಬದಲಾಗಿದ್ದು, ಭಾರತಿ ಶಂಕರ್​ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ.
ಅರಸಿಕೆರೆ ಟಿಕೆಟ್ ಎನ್.ಆರ್.ಸಂತೋಷ್​ಗೆ ಫೈನಲ್ ಆಗಿದೆ. ದೇವೇಗೌಡರ ಜತೆ ನಡೆದ ಚರ್ಚೆಯಲ್ಲಿ ಟಿಕೆಟ್​ ಅಂತಿಮವಾಗಿದೆ. ಬಾಣಾವರ ಅಶೋಕ್ ಅವರ ಮನವೊಲಿಸಿ ಸಂತೋಷ್​ಗೆ ಟಿಕೆಟ್​ ಫೈನಲ್​ ಮಾಡಲಾಗಿದ್ದು, ಅರಸಿಕೆರೆ ಜೆಡಿಎಸ್​ ಅಭ್ಯರ್ಥಿಯಾಗಿ ಸಂತೋಷ್​ ಸ್ಫರ್ಧೆ ಖಚಿತವಾಗಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಜತೆ ಚರ್ಚಿಸಿ ಎಚ್​ಡಿಡಿ ಅಂತಿಮ ನಿರ್ಣಯ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಭಯ್ಯಾ ಎನ್ನುತ್ತಿದ್ದೆ ಈಗ ಅವನ ಮಗುವಿಗೆ ತಾಯಿಯಾದೆ! ಮಹಿಳೆಯ ವಿಡಿಯೋ ನೋಡಿ ಹುಬ್ಬೇರಿಸಿದ ನೆಟ್ಟಿಗರು
ವರುಣಾದಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿದ್ದ ಅಭಿಷೇಕ್​ ದಿಢೀರ್​ ನಾಪತ್ತೆಯಾಗಿ ಯಾರ ಕೈಗೂ ಸಿಗದ ಹಿನ್ನೆಲೆಯಲ್ಲಿ ಅಭಿಷೇಕ್​ ಬದಲು ಭಾರತಿ ಶಂಕರ್​ ಅವರಿಗೆ ಜೆಡಿಎಸ್​ ಟಿಕೆಟ್​ ನೀಡಲಾಗಿದೆ. ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ಅಭ್ಯರ್ಥಿಯಾಗಿ ಭಾರತಿ ಶಂಕರ್​ ಅವರು ಸ್ಪರ್ಧಿಸಲಿದ್ದಾರೆ. ಬಿಜೆಪಿ ಟಿಕೆಟ್​ ಮಿಸ್​ ಆಗಿದ್ದಕ್ಕೆ ಭಾರತಿ ಶಂಕರ್​ ಅವರು ಜೆಡಿಎಸ್​ ಸೇರಿ, ಟಿಕೆಟ್​ ಪಡೆದು ಕಣಕ್ಕಿಳಿದಿದ್ದಾರೆ.
ಚಿತ್ರದುರ್ಗದಿಂದ ರಘು ಆಚಾರ್ ಜೆಡಿಎಸ್​ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್​ನಿಂದ ಟಿಕೆಟ್​ ಸಿಗದಿದ್ದಕ್ಕೆ ರಘು ಆಚಾರ್​ ಅವರು ಚಿತ್ರದುರ್ಗದಿಂದ ಕಣಕ್ಕಿಳಿಯುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ನಾಲ್ವರು ಪೊಲೀಸರ ವರ್ಗಾವಣೆ ಮಾಡಿ ಆದೇಶ

ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ ನೀಡಿದ ಜಗದೀಶ್ ಶೆಟ್ಟರ್! ಮುಜುಗರ ತಪ್ಪಿಸಲು ಕೊಡ್ತಾರಾ ಟಿಕೆಟ್?

ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
