ಬೆಂಗಳೂರು:ಲೋಕಾಯುಕ್ತ ಸಂಸ್ಥೆ ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆ ಅವರಿಗೆ ದೂರವಾಣಿ ಕರೆ ಮಾಡಿ ಕ್ರೆಡಿಟ್​ ಕಾರ್ಡ್​ ಮಾಹಿತಿ ಪಡೆದು ವಂಚನೆ ಮಾಡಲು ಸೈಬರ್​ ಕಳ್ಳರು ಯತ್ನಿಸಿದ್ದಾರೆ.
ಈ ಕುರಿತು ನ್ಯಾ.ಸಂತೋಷ್​ ಹೆಗ್ಡೆ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್​ ದಾಖಲಿಸಿ ಕೇಂದ್ರ ವಿಭಾಗ ಸಿಇಎನ್​ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೂನ್​ 14ರ ಸಂಜೆ 6 ಗಂಟೆಯಲ್ಲಿ ಸಂತೋಷ್​ ಹೆಗ್ಡೆ ಅವರ ಮೊಬೈಲ್​ಗೆ ಕರೆ ಮಾಡಿದ ಅಪರಿಚಿತ ಮಹಿಳೆ, ನಿಮ್ಮ ಕ್ರೆಡಿಟ್​ ಕಾರ್ಡ್​ಗೆ ರಿವಾರ್ಡ್​ ಪಾಯಿಂಟ್​ ಬಂದಿವೆ. ಅದರ ಅವಧಿ ಮುಕ್ತಾಯವಾಗುತ್ತಿವೆ ಎಂದು ಹೇಳಿದ್ದಾಳೆ. ಅನುಮಾನ ಬಂದು ಸಂತೋಷ್​ ಹೆಗ್ಡೆ ಅವರು ಕರೆ ಕಟ್​ ಮಾಡಿದ್ದಾರೆ. ಇದಾದ ಕೆಲವೇ ನಿಮಿಷಕ್ಕೆ ಮೊಬೈಲ್​ಗೆ 2 ಒಟಿಪಿಗಳು ಬಂದಿವೆ. ಆಗ ಇದು ವಂಚಕರ ಕರೆ ಎಂಬುದು ಖಚಿತವಾಗಿದೆ. ಒಟಿಪಿ ಸಂಖ್ಯೆಯನ್ನು ಹಂಚಿಕೊಂಡಿಲ್ಲ.
ಕರೆ ಮಾಡಿ ವಂಚನೆ ಮಾಡಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಸಂತೋಷ್​ ಹೆಗ್ಡೆ ಮನವಿ ಮಾಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮೊಬೈಲ್​ ನಂಬರ್​ ಆಧರಿಸಿ ವಂಚಕರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ್ರೋಹ ಪ್ರಕರಣ: ಲಕ್ಷದ್ವೀಪ ನಟಿ ಆಯಿಷಾ ಸುಲ್ತಾನಗೆ ಬಿಗ್​ ರಿಲೀಫ್​!

ಅಪ್ಪಿತಪ್ಪಿ ಗೂಗಲ್​ನಲ್ಲಿ ಈ ಪದಗಳನ್ನು ಸರ್ಚ್​ ಮಾಡ್ಬೇಡಿ, ಇಲ್ಲದಿದ್ರೆ ಅಪಾಯ ಬೆನ್ನತ್ತಿ ಬರಲಿದೆ!

ಸೀರೆಯೆಂದರೆ ಸಂಭ್ರಮವೆನ್ನುತ್ತ ಪುಷ್​ಅಪ್ ಮಾಡುವ ಡಾಕ್ಟರ್! ನೆಟ್ಟಿಗರ ಮನಗೆದ್ದ ವೈದ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 2 =
Remember me
