ಬೆಂಗಳೂರು:ವಿಧಾನಸಭೆ ಚುನಾವಣೆ ಉದ್ದೇಶದಲ್ಲಿ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ವತಿಯಿಂದ ಆಯೋಜಿಸಿರುವ “ನಾ ನಾಯಕಿ” ಕಾರ್ಯಕ್ರಮಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರ ಆಗಮಿಸಿದ್ದಾರೆ. ವೇದಿಕೆ‌ ಮೇಲೆ ಮಹಿಳಾ ನಾಯಕಿಯರಿಗೆ ಮಾತ್ರ ಅವಕಾಶವಿದ್ದು, ವೇದಿಕೆ ಕೆಳಗೆ ನಾಯಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ 1ಕ್ಕೆ ಆರಂಭಗೊಂಡ ಸಮಾವೇಶದಲ್ಲಿ ಪ್ರತಿ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಯಲ್ಲಿ ಜನ ಪ್ರತಿನಿಧಿಯಾಗಿದ್ದವರು ಪಾಲ್ಗೊಂಡಿದ್ದಾರೆ. ಇವರನ್ನು ಉದ್ದೇಶಿಸಿ ಪ್ರಿಯಾಂಕಾ ಪ್ರಧಾನ ಭಾಷಣ ಮಾಡುವರು.

ಪ್ರಿಯಾಂಕಾ ಗಾಂಧಿ ಅವರನ್ನ ನೋಡಲು‌ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು, ಒಳಗೆ ಹತ್ತು ಸಾವಿರದಷ್ಟು ಮಹಿಳೆಯರು ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಹೊರಗಡೆ ಕೂಡ ಹತ್ತು ಸಾವಿರಕ್ಕೂ ಹೆಚ್ಚು ‌ಮಹಿಳೆಯರು ಇದ್ದಾರೆ. ಒಳಗೆ ಹೋಗಲು ಅವಕಾಶ ನೀಡಿ ಎಂದು ಪೊಲೀಸರ ಜೊತೆ ಮಹಿಳೆಯರು ವಾಗ್ವಾದ ನಡೆಸುತ್ತಿರುವ ದೃಶ್ಯ ಕಂಡು ಬಂತು.

ಚುನಾವಣೆಗೆ ಮಹಿಳೆಯರನ್ನು ಉದ್ದೇಶಿಸಿ ಪ್ರಣಾಳಿಕೆ ಹೊರತರುತ್ತಿದ್ದು, ಇದಕ್ಕಾಗಿ ಅಭಿಪ್ರಾಯ ಅನಿಸಿಕೆ ಆಹ್ವಾನಿಸಲಾಗಿತ್ತು. ಇದನ್ನೆಲ್ಲ ಕ್ರೋಡಿಕರಿಸಿ ಪಕ್ಷವು ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಜತೆಗೆ ಪ್ರಿಯಾಂಕಾ ವಾದ್ರಾ ಅವರು ಪ್ರಮುಖ ಭರವಸೆಯೊಂದನ್ನು ಪ್ರಕಟಿಸಿ, ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಆ ಭರವಸೆಯನ್ನು ಈಡೇರಿಸುವ ವಾಗ್ದಾನ ಮಾಡಲಿದ್ದಾರೆ.
ವೇದಿಕೆ ಕೆಳಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಹರಿಪ್ರಸಾದ್, ಸುರ್ಜೇವಾಲ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೋಳಿ, ಧ್ರುವನಾರಾಯಣ್ ಉಪಸ್ಥಿತರಿದ್ದಾರೆ.
'ನಾ ನಾಯಕಿ' ಸಮಾವೇಶ, ಅರಮನೆ ಮೈದಾನ, ಬೆಂಗಳೂರುhttps://t.co/aOmcGzOtgx
— Karnataka Congress (@INCKarnataka)January 16, 2023

ಸ್ಯಾಂಟ್ರೋ ರವಿ ಜೈಲು ಸೇರುತ್ತಿದ್ದಂತೆ ಮೈಸೂರು ಜೈಲರ್​ ಸ್ಥಾನಪಲ್ಲಟ!

ಡಾ.ವಿಜಯ ಸಂಕೇಶ್ವರ ಅವರಿಗೆ ‘ಶ್ರೀ ಸಿದ್ಧಶ್ರೀ ಪ್ರಶಸ್ತಿ’, ವಿಜಯಾನಂದ ಚಿತ್ರಕ್ಕೆ ‘ಅತ್ಯುತ್ತಮ ಬಯೋಪಿಕ್​’ ಪ್ರದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
