ಬೆಂಗಳೂರು:ಕರೊನಾ ಸಂಕಷ್ಟದಿಂದ ಜಗತ್ತಿನ ಪ್ರಗತಿ ನಿಂತಿತ್ತು. ಆದರೆ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಕಾರ್ಯ ಭರದಿಂದ ಸಾಗಿತ್ತು. ನಾಡಪ್ರಭು ಕೆಂಪೇಗೌಡರು ನಾಡನ್ನು ಮಾತ್ರವೇ ಆಳಿರಲಿಲ್ಲ. ಅವರು ಧರ್ಮಪ್ರಭುಗಳೂ ಆಗಿದ್ದರು. 500 ವರ್ಷಗಳ ಹಿಂದೆ ಎಲ್ಲ ಸಮುದಾಯವನ್ನೂ ಒಗ್ಗೂಡಿಸಿ ನಾಡನ್ನು ಕಟ್ಟಿದ್ದರು. ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದವರು ಎಂದು ಆದಿಚುಂಚನಗಿರಿ ಕ್ಷೇತ್ರದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. ಬಳಿಕ ವಿಮಾನ ನಿಲ್ದಾಣದ ಸಮೀಪದ ಭುವನಹಳ್ಳಿಯಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಪ್ರಗತಿಯ ಸಂಕೇತವಾಗಿರುವ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು. ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸುತ್ತಲೇ 2020ರ ಜೂನ್​ 27ರಂದು ಕೆಂಪೇಗೌಡರ ಪ್ರತಿಮೆಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರನ್ನ ನೆನಪಿಸಿಕೊಳ್ಳುತ್ತಾ ಮಾತನ್ನ ಮುಗಿಸಿದರು.
ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸಿಲ್ಲ. ಇದರಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಸಮಾವೇಶದ ವೇದಿಕೆಯಲ್ಲಿ ಆಸೀನರಾಗಲು ಬಿಜೆಪಿಯವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಕ್ಕಲಿಗರ ನಾಯಕ ದೇವೇಗೌಡರನ್ನೇ ಮರೆತು ಅವಮಾನಿಸಿದ್ದಾರೆ. ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುವಾಗ ದೇವೇಗೌಡರು ಬೇಕಿತ್ತು. ಉದ್ಘಾಟನೆಗೆ ದೇವೇಗೌಡರು ಬೇಡವೇ? ಕೆಂಪೇಗೌಡರ ಪ್ರತಿಮೆ ವಿಚಾರದಲ್ಲೂ ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ನಿನ್ನೆ(ಗುರುವಾರ)ಯಿಂದ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್​ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಆದರೆ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಭಾಷಣ ಮಾಡುತ್ತಾ, ಮಾತು ಮುಗಿಸುವ ಮುನ್ನ 2020ರ ಜೂನ್​ 27ರಂದು ಕೆಂಪೇಗೌಡರ ಪ್ರತಿಮೆಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರನ್ನೂ ನೆನಪಿಸಿಕೊಂಡದ್ದು ದೇವೇಗೌಡರೂ ಈ ವೇಳೆ ಇರಬೇಕಿತ್ತು ಎಂಬುದನ್ನ ಸಾರುವಂತಿತ್ತು.
ನಾಡಪ್ರಭು ಕೆಂಪೇಗೌಡರ ಬೃಹತ್​ ಪುತ್ಥಳಿ ಅನಾವರಣ: ‘ಪ್ರಗತಿ’ಯ ಪ್ರತಿಮೆಗೆ ನಮಿಸಿದ ಮೋದಿ

ಟ್ರೋಲಿಗರನ್ನ ಕೆಣಕುತ್ತಲೇ ಹೊಸ ವಿಷಯ ಘೋಷಣೆ ಮಾಡಿದ ಡ್ರೋನ್​ ಪ್ರತಾಪ್​! ಅಷ್ಟೇ ಅಲ್ಲ, ಆಸಕ್ತರಿಗೆ ಸಂಪರ್ಕಿಸಲೂ ಕರೆ ನೀಡಿದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
