ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯನ್ನ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ಕರ್ನಾಟಕದ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕೆಂಪೇಗೌಡರ ದೂರದೃಷ್ಟಿಯಲ್ಲಿ ನಿರ್ಮಾಣವಾದ ಬೆಂಗಳೂರಿನ್ನು ಕೊಂಡಾಡಿದರು.
ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿದ ಬಳಿಕ ವಿಮಾನ ನಿಲ್ದಾಣ ಸಮೀಪದ ಭುವನಹಳ್ಳಿ ಏರ್ಪಡಿಸಿದ್ದ ಬೃಹತ್​ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬೆಂಗಳೂರಿನ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದು ನನ್ನ ಸೌಭಾಗ್ಯ. ಬೆಂಗಳೂರು ನಗರಕ್ಕೆ ಕೆಂಪೇಗೌಡರ ಕೊಡುಗೆ ಸಾಕಷ್ಟಿದೆ. ಮಹಾನ್​ ನಾಯಕ ಕೆಂಪೇಗೌಡರಿಗೆ ನನ್ನ ನಮನಗಳು ಎಂದರು. ‘ಕುಲಕುಲ ಎಂದು ಹೊಡೆದಾಡಬೇಡಿ’ ಎಂದು ಕನಕದಾಸರು ಕೀರ್ತನೆಗಳ ಮೂಲಕ ಸಾರಿದರು. ಅದೇ ರೀತಿ ನಾವು ಬದುಕಬೇಕು ಎಂದು ಎಚ್ಚರಿಸಿದರು.

ಕರ್ನಾಟಕಕ್ಕೆ ವಂದೇ ಭಾರತ್​ ಎಕ್ಸ್​ಪರೆಸ್​ ರೈಲು ಸಿಕ್ಕಿದೆ. ಕರ್ನಾಟಕಕ್ಕೆ ಮೇಡ್​ ಇನ್​ ರೈಲು ಸಿಕ್ಕಿದೆ. ಫೋಟೋದಲ್ಲಿ ಕಾಣುವುದಕ್ಕಿಂತ ನೇರವಾಗಿಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್​-2 ತುಂಬಾ ಅದ್ಭುತವಾಗಿದೆ. ಭಾರತೀಯ ಸ್ಟಾಟಪ್​ ಪರಿಸರ ವ್ಯವಸ್ಥೆಯನ್ನ ನಿರ್ಮಿಸುವಲ್ಲಿ ಬೆಂಗಳೂರು ಮಹತ್ತರ ಪಾತ್ರವಹಿಸಿದೆ. ಕರ್ನಾಟಕ ಡಬಲ್​ ಇಂಜಿನ್​ ಶಕ್ತಿಯಲ್ಲಿ ನಡೆಯುತ್ತಿದೆ. ಇಡೀ ದೇಶ ಕರೊನಾ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿದ್ದ ಕಾಲದಲ್ಲೂ ಕರ್ನಾಟಕಕ್ಕೆ 4 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ವಿದೇಶಿ ಬಂಡಾವಾಳ ಹೂಡಿಕೆಯಲ್ಲಿ ರಾಜ್ಯ ಮುಂದಿದೆ. ಬಯೋಟೆಕ್ನಾಲಜಿಯಲ್ಲಿ ಕರ್ನಾಟಕದ ಪಾಲು ಶೇ.20ರಷ್ಟಿದೆ ಎಂದು ಕೊಂಡಾಡಿದರು.
ಕರ್ನಾಟಕ ಐಟಿ ಕ್ಷೇತ್ರದಲ್ಲಿ ಮಾತ್ರವೇ ಅಭಿವೃದ್ಧಿಯಾಗಿಲ್ಲ, ರಕ್ಷಣಾ ವಲಯ, ಬಯೋಟೆಕ್ನಾಲಜಿಯಲ್ಲೂ ಮುಂದಿದೆ. 8 ವರ್ಷಗಳ ಹಿಂದೆ ಭಾರತದಲ್ಲಿ ಡಿಜಿಟಲ್​ ಪೇಮೆಂಟ್​ನ ಕಲ್ಪನೆಯೂ ಇರಲಿಲ್ಲ. ಭಾರತ ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿದೆ ಎಂದರು.

ಸಮಾವೇಶಕ್ಕೂ ಮುನ್ನ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು. 20 ಅಡಿ ಎತ್ತರದ ಪೀಠವೇರಿ ಕೆಂಪೇಗೌಡರ ಪಾದಕ್ಕೆ ಪ್ರಧಾನಿ ಮೋದಿ ಅವರು ಅಭಿಷೇಕ, ಪುಷ್ಪಾರ್ಚನೆ ಮಾಡಿದರು. ಸಮಾವೇಶದಲ್ಲಿ ಪ್ರಧಾನಿ ಅವರಿಗೆ ಕೆಂಪೇಗೌಡರ ಪೇಟದ ಮಾದರಿಯಲ್ಲಿ ತಯಾರಿಸಿದ್ದ ವಿಶೇಷ ಪೇಟ ತೊಡಿಸಿ ಸನ್ಮಾನಿಸಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎ.ನಾರಾಯಣ ಸ್ವಾಮಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಇನ್ಫೋಸಿಸ್​ ಮುಖ್ಯಸ್ಥೆ ಡಾ.ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೆಂಪೇಗೌಡ ಪ್ರತಿಮೆ ಅನಾವರಣ: ಪ್ರಧಾನಿ ಮೋದಿ ಅವರ ಕಾರ್ಯ ಶ್ಲಾಘಿಸುತ್ತಲೇ ದೇವೇಗೌಡರನ್ನೂ ನೆನೆದ ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
