ಬೆಂಗಳೂರು:ಶರಣ ಚಿಂತಕರು, ಮಹಾ ದಾನಿಗಳಾದ ದಿಬ್ಬೂರ್ ಸಿದ್ದಲಿಂಗಪ್ಪ ಅವರು ಬೆಂಗಳೂರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾಗಿದೆ ಎಂದು ನಾಡೋಜ ಗೊ. ರು. ಚನ್ನಬಸಪ್ಪ ಅಭಿಪ್ರಾಯಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಇತ್ತೀಚೆಗೆ ಅಗಲಿದ ದಿಬ್ಬೂರ್ ಸಿದ್ದಲಿಂಗಪ್ಪ ಸ್ಮರಣೆ ಕಾರ್ಯಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಜಿ ಉಪ ರಾಷ್ಟ್ರಪತಿ ಬಿ. ಡಿ. ಜತ್ತಿ ಅವರೊಂದಿಗೆ ಬಸವ ಸಮಿತಿ ಸ್ಥಾಪಕರಾಗಿ, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾಗಿದೆ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಲಿಂಗಪ್ಪ ಎರಡು ಬಾರಿ ಶರಣ ಸಾಹಿತ್ಯ ಸಮ್ಮೇಳವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದರು. ಅನೇಕ ಶರಣ ಗ್ರಂಥಗಳನ್ನು ಪ್ರಕಟಣೆ, ಜಯನಗರದಲ್ಲಿ ಶರಣೆ ಅಕ್ಕಮಹಾದೇವಿ ಪುತ್ತಳಿ ಸ್ಥಾಪನೆ ಹೀಗೆ ಅವರು ನೀಡಿದ ಸೇವೆ ಅಪರಿಮಿತವಾಗಿದೆ ಎಂದು ಸಿದ್ದಲಿಂಗಪ್ಪನವರ ಸೇವೆಯನ್ನು ಸ್ಮರಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಮಾತನಾಡಿ, ಸಿದ್ದಲಿಂಗಪ್ಪ ಅವರು ಶರಣ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭವಾಗಿದ್ದರು. ವೀರಶೈವ ಹಾಸ್ಟೆಲ್ನ ಅಧ್ಯಕ್ಷರಾಗಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿದ್ದಾರೆ.ಚೈತನ್ಯ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿ ನೂರಾರು ಬರಹಗಾರರು ಮತ್ತು ಕನ್ನಡ ಪರ ಚಿಂತಕರು ಹೊರ ಹೊಮ್ಮಲು ಕಾರಣರಾಗಿದ್ದಾರೆ. ತಮ್ಮ 90 ವರ್ಷದ ಸಾರ್ಥಕ ಬದುಕಿನುದ್ದಕ್ಕೂ ಶರಣ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಬೌತಿಕವಾಗಿ ಅವರು ನಮ್ಮನ್ನು ಅಗಲಿದ್ದರೂ ಅವರು ಮಾಡಿರುವ ಕಾರ್ಯಗಳ ಮೂಲಕ ದಿಬ್ಬೂರು ಸಿದ್ದಲಿಂಗಪ್ಪ ಅವರು ಶಾಶ್ವತವಾಗಿದ್ದಾರೆ ಎಂದರು.
ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆ. ವಿ. ನಾಗರಾಜ ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮತ್ತಿತರರು ಪಾಲ್ಗೊಂಡು ಸಿದ್ದಲಿಂಗಪ್ಪನವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 9 =
Remember me
