ನಾಗಮಂಗಲ: ತಬ್ಲಿಘಿಯವರಿಂದ ದೇಶದೆಲ್ಲೆಡೆ ಹಬ್ಬಿರುವ ಮಾರಕ ಕರೊನಾ ಸೋಂಕು ಮಳವಳ್ಳಿಯನ್ನು ಅಪ್ಪಿಕೊಂಡರೂ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ನಾಗಮಂಗಲದಲ್ಲಿ ಕಾಣಿಸಿಕೊಳ್ಳದಿರುವುದು ಸಮಾಧಾನಕರ ಸಂಗತಿ.
ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದವರಿಂದಾಗಿ ದೇಶದೆಲ್ಲೆಡೆ ಕರೊನಾ ಸೋಂಕು ನಿರೀಕ್ಷೆ ಮೀರಿ ವ್ಯಾಪಿಸುತ್ತಿದೆ. ಈ ನಡುವೆ ದೆಹಲಿಯಿಂದ ಬಂದಿದ್ದ 10 ಧರ್ಮಗುರುಗಳು ಉಳಿದುಕೊಂಡಿದ್ದ ಮೈಸೂರು, ಮಂಡ್ಯ ಜಿಲ್ಲೆಯ ಮಳವಳ್ಳಿಗೂ ಸೋಂಕು ತಗುಲಿಕೊಂಡಿದೆ. ಆದರೆ, ಅದೇ ಧರ್ಮಗುರುಗಳು ವಾಸ್ತವ್ಯ ಹೂಡಿದ್ದ ನಾಗಮಂಗಲಕ್ಕೆ ಅದೃಷ್ಟವಶಾತ್ ಅಂಟಿಲ್ಲ. ಹಾಗಂತ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿಲ್ಲ. ಇತರ ತಾಲೂಕುಗಳಿಗೆ ಹೋಲಿಸಿದರೆ ಅಧಿಕಾರಿಗಳು, ಸಿಬ್ಬಂದಿ ಒಂದು ಹೆಜ್ಜೆ ಮುಂದಿಟ್ಟು, ಮೈಯೆಲ್ಲ ಕಣ್ಣಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ಅಂದರೆ, ಕರೊನಾ ವೈರಸ್ ಸೋಂಕಿನಿಂದಾಗಿ ದೇಶದೆಲ್ಲೆಡೆ ಲಾಕ್​ಡೌನ್ ಜಾರಿಯಾದ ನಂತರ 65 ಇಲಾಖೆಗಳ ಪೈಕಿ 50ಕ್ಕೂ ಹೆಚ್ಚು ಇಲಾಖೆಗಳಿಗೆ ಕೆಲಸದಿಂದ ವಿನಾಯಿತಿ ನೀಡಿದ್ದು, ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಪರಿಣಾಮ ಆರೋಗ್ಯ, ಪೊಲೀಸ್, ಕಂದಾಯ, ಪಂಚಾಯತ್ ರಾಜ್ ಇಲಾಖೆ ಸೇರಿ ಕೆಲ ಇಲಾಖೆಗಳಷ್ಟೇ ಬೆವರು ಸುರಿಸುತ್ತಿವೆ. ಸರ್ಕಾರ ವೇತನ ಕೊಟ್ಟು ಮನೆಯಲ್ಲಿ ಕೂರಿಸುವವರನ್ನು ಸೇವೆಗೆ ನಿಯೋಜಿಸುವ ಬದಲಿಗೆ ಸ್ವಯಂಸೇವಕರನ್ನು ಸೇವೆಗೆ ಆಹ್ವಾನಿಸುತ್ತಿದೆ. ಆದರೆ, ನಾಗಮಂಗಲದಲ್ಲಿ ಮಾತ್ರ ಅಧಿಕಾರಿಗಳು ಸ್ವಯಂಸೇವಕರನ್ನು ಕಾಯದೆ 65 ಇಲಾಖೆಗಳ ಅಧಿಕಾರಿಗಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಿದ್ದಾರೆ.
ಪ್ರತಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಅವರದೇ ಆದ ಜವಾಬ್ದಾರಿ ವಹಿಸಿದ್ದು, ಕರೊನಾ ತಡೆಗೆ ಅಚ್ಚುಕಟ್ಟಾಗಿ ಕರ್ತವ್ಯ ನಿಭಾಯಿಸುವಂತೆ ಸ್ಪೂರ್ತಿ ತುಂಬಿದ್ದಾರೆ. ದೇಶದ ಕೆಲವೆಡೆ ಮುಸ್ಲಿಂ ಸಮುದಾಯದ ಕೆಲವರು ಮಾಡಿದ ಪುಂಡಾಟಿಕೆಯಿಂದ ಎಲ್ಲ ಕಡೆ ತಪ್ಪು ಸಂದೇಶ ರವಾನೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆ ಆಗದಂತೆ ಮುಸ್ಲಿಮರು ಇರುವ ವಾರ್ಡ್​ಗಳಿಗೆ ಮುಸ್ಲಿಂ ಅಧಿಕಾರಿ,ಸಿಬ್ಬಂದಿಯನ್ನೇ ನೇಮಿಸಲಾಗಿದೆ. ಹೀಗಾಗಿ ಎಲ್ಲವೂ ನಿರಾತಂಕವಾಗಿ ನಡೆಯುತ್ತಿದೆ.
4 ವಾರ್ಡ್​ಗಳು ಕಂಟೋನ್ಮೆಂಟ್
ಸದ್ಯ ಸೋಂಕು ದೃಢಪಟ್ಟಿರುವ ದೆಹಲಿಯ ಧರ್ಮಗುರುಗಳು, ಪಟ್ಟಣದಲ್ಲಿ ಕೂಡ ಕೆಲದಿನ ಉಳಿದಿದ್ದ ಪರಿಣಾಮ ಜಿಲ್ಲಾಧಿಕಾರಿ ತಾಲೂಕಿನಾದ್ಯಂತ ಹೈ ಅಲರ್ಟ್ ಘೊಷಣೆ ಮಾಡಿದ್ದಾರೆ. ಜತೆಗೆ ಪಟ್ಟಣದ 12, 14, 15 ಮತ್ತು 16ನೇ ವಾರ್ಡ್​ಗಳನ್ನು ಕಂಟೋನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಮನೆ ಮನೆಗೆ ತೆರಳಿ ಸರ್ವೆ ಮಾಡುವ ಕಾರ್ಯಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ನೇಮಿಸಿದ್ದು, ಎಲ್ಲ ಸಿಬ್ಬಂದಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಕಾರ್ಯಕ್ಷೇತ್ರದ ಮಾಹಿತಿ ಪಡೆದುಕೊಂಡಿದ್ದಾರೆ.
ಅಧಿಕಾರಿಗಳು ತಂಡವಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸ್ಥಳೀಯವಾಗಿ ಉದ್ಭವಿಸುವ ಸಮಸ್ಯೆಗಳನ್ನು ತಾಲೂಕು ಹಂತದಲ್ಲೇ ಇತ್ಯರ್ಥ ಮಾಡಲಾಗುತ್ತಿದೆ. ಯಾವುದೇ ಇಲಾಖಾ ಭೇದ-ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕೋವಿಡ್ ಫೈಟರ್ಸ್ ಆಗಿ ಹಗಲಿರುಳು ಶ್ರಮಿಸುತ್ತಿದ್ದೇವೆ. ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರಿಂದ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಲು ಅನುಕೂಲವಾಗಿದೆ.
| ಡಾ.ಟಿ.ಎನ್.ಧನಂಜಯ್ ತಾಲೂಕು ವೈದ್ಯಾಧಿಕಾರಿ ನಾಗಮಂಗಲ
ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ. ಪ್ರತಿ ಹಳ್ಳಿಯಲ್ಲೂ ಕಣ್ಗಾವಲು ಇಡಲಾಗಿದೆ. ಪೊಲೀಸ್ ಇಲಾಖೆ ಸಹಕಾರ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ, ಪುರಸಭೆ ಸಹಭಾಗಿತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಪ್ರತಿ ಭಾಗಕ್ಕೂ ಕೋವಿಡ್ ಫೈಟರ್ಸ್ ತಂಡ ರಚಿಸಲಾಗಿದೆ. ವಿದೇಶ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದವರ ಮೇಲೆ ಆರಂಭದಿಂದಲೇ ನಿಗಾ ವಹಿಸಲಾಗಿತ್ತು.
| ಕುಂಇ್ ಅಹಮದ್ ತಹಸೀಲ್ದಾರ್, ನಾಗಮಂಗಲ
ಎಂ.ಕೆ. ಉಮೇಶ್
ತಬ್ಲಿಘಿ ಜಮಾತ್​ನ ಎಲ್ಲ ಚಟುವಟಿಕೆಗಳನ್ನು ಬ್ಯಾನ್​ ಮಾಡುವಂತೆ ಕೋರಿ ಸುಪ್ರಿಂಕೋರ್ಟ್​ಗೆ ಅರ್ಜಿ ಸಲ್ಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + four =
Remember me
