| ಚಿದಾನಂದಸ್ವಾಮಿ ರಿಪ್ಪನ್​ಪೇಟೆಪುರಾಣ ಪ್ರಸಿದ್ಧ ಅಗಸ್ತ್ಯ ಮುನಿ ಸ್ಥಾಪಿತ ಹೊಸನಗರ ತಾಲೂಕು ನಾಗರಹಳ್ಳಿ ಕ್ಷೇತ್ರದ ಶ್ರೀ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಆ.21ರಂದು ನಾಗರಪಂಚಮಿ ಜಾತ್ರಾಮಹೋತ್ಸವ ನೆರವೇರಲಿದೆ.
ನಾಲ್ಕು ಸಾವಿರ ವರ್ಷಗಳ ಹಿಂದಿನ ಐತಿಹ್ಯವಿರುವ ಶ್ರೀ ಸನ್ನಿಧಿಯಲ್ಲಿ ಮಳೆಗಾಲದ ಶ್ರಾವಣ ಮಾಸದಲ್ಲಿ ನಾಗರಪಂಚಮಿ ಹಾಗೂ ಚಳಿಗಾಲದ ಪುಷ್ಯಮಾಸದಲ್ಲಿ ಕೂಳೆ ಪಂಚಮಿ ಮಹೋತ್ಸವಗಳು ವಿಜೃಂಭಣೆಯಿಂದ ಜರುಗುತ್ತವೆ.
ನಾಗರಹಳ್ಳಿ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಅಗಸ್ತ್ಯ ಮಹಾಮುನಿಗಳು ಶ್ರೀ ನಾಗೇಂದ್ರಸ್ವಾಮಿಯ ಪ್ರತಿಷ್ಠಾಪನೆ ನೆರವೇರಿಸಿದರು ಎಂಬ ಪ್ರತೀತಿಯಿದೆ. ಶಿಲಾಮಯ ಗರ್ಭಗುಡಿಯಲ್ಲಿ ಎರಡೂ ಕೈಗಳಲ್ಲಿ ಪಾಶಾಂಕುಶವನ್ನು ಹಿಡಿದ ಪುರುಷರೂಪಿ ದೈವಗಣವನ್ನು ಸುತ್ತುವರಿದಿರುವ ಮಹಾಶೇಷ, ಸುತ್ತಲೂ 77 ಹೆಡೆಗಳ ನಾಗಪ್ರಭಾವಳಿಯನ್ನು ಸೃಷ್ಟಿಸಿಕೊಂಡು ದೈವದ ತಲೆ ಮೇಲೆ ತನ್ನ ಏಳು ಹೆಡೆಗಳನ್ನೆತ್ತಿ ಶಿರಭೂಷಣನಾಗಿರುವ ಸುಬ್ರಹ್ಮಣ್ಯ ಪಾಣಿಪೀಠದಲ್ಲಿ ವಿರಾಜಮಾನನಾಗಿದ್ದಾನೆ. ಇಂತಹ ಒಂದು ನಾಗರ ಆಕೃತಿ ತೀರ ವಿರಳವಾಗಿದ್ದು ದೇಶಾದ್ಯಂತ ಇರುವ ಏಕೈಕ ವಿಗ್ರಹವೆಂದು ಹೇಳಲಾಗುತ್ತದೆ.
ಮೂಲನಾಗನ ಕ್ಷೇತ್ರವೆಂದು ಹೆಗ್ಗಳಿಕೆ ಹೊಂದಿರುವ ನಾಗಸನ್ನಿಧಿಯು ವಿವಾಹ ಭಾಗ್ಯ, ಸಂತಾನಭಾಗ್ಯ, ಆರೋಗ್ಯಭಾಗ್ಯದೊಂದಿಗೆ ಸಕಲವನ್ನೂ ಕರುಣಿಸುವ ದೈವವಾಗಿದ್ದು ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತ ಭಕ್ತರು ಇಲ್ಲಿ ಹರಕೆ ತೀರಿಸಬಹುದಾಗಿದೆ. ಆದರೆ ಇಲ್ಲಿಗೆ ಹರಕೆ ಹೊತ್ತವರು ಬೇರೆಲ್ಲಿಯೂ ಸಲ್ಲದೆ ಇಲ್ಲಿಗೇ ಬಂದು ಹರಕೆ ತೀರಿಸಬೇಕೆಂಬುದು ಇಲ್ಲಿನ ವಿಶೇಷ.
ನಾಗೇಂದ್ರಸ್ವಾಮಿಯ ದೇವಸ್ಥಾನ ಪ್ರಖ್ಯಾತಿಯಿಂದಲೇ ಗ್ರಾಮಕ್ಕೆ ನಾಗರಹಳ್ಳಿ ಎಂಬ ಹೆಸರು ಅನ್ವರ್ಥವಾಗಿ ಬಂದಿದ್ದು ದೇವಾಲಯ ಕಳೆದ 50 ವರ್ಷಗಳ ಹಿಂದೆಯೇ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ತಾಲೂಕು ಆಡಳಿತ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಸದಾಕಾಲ ನಾಗಾರಾಧನೆಯು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು ಸಾವಿರಾರು ಭಕ್ತರು ಜಾತ್ರಾಮಹೋತ್ಸವಗಳಲ್ಲಿ ಭಾಗಿಯಾಗುತ್ತಾರೆ.
ಮತ್ತೊಂದು ಗಡಿ ಮೀರಿದ ಪ್ರೇಮ: ಭಾರತೀಯ ಪ್ರೇಮಿಗಾಗಿ ದೇಶ ಬಿಟ್ಟು ಬಂದ ಪ್ರೇಯಸಿ!

ನೇಲ್​ ಕಟರ್ ನುಂಗಿ ಮರೆತಿದ್ದ ವ್ಯಕ್ತಿ; 8 ವರ್ಷಗಳ ಮೇಲೆ ಹೊರತೆಗೆದ್ರು ಬೆಂಗಳೂರಿನ ವೈದ್ಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
