ಬೆಂಗಳೂರು:ಕನ್ನಡದ ಖ್ಯಾತ ನಿರೂಪಕಿ, ಸರಳ ವ್ಯಕ್ತಿತ್ವದ ಸೆಲೆಬ್ರಿಟಿ ಎಂದೇ ಖ್ಯಾತಿಯ ಅಪರ್ಣಾ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದ್ದು, ಈಗಲೂ ಅನೇಕರು ಈ ಸುದ್ದಿಯನ್ನು ನಂಬಲು ತಯಾರಿಲ್ಲ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರು ನಟಿ ಅಪರ್ಣಾ ಅವರು ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಕುಟುಂಬ ಹಾಗೂ ಆಪ್ತರು ಸೇರಿದಂತೆ ಕೆಲವೇ ಕೆಲವರಿಗೆ ಅವರು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ತಿಳಿದಿತ್ತಂತೆ. ಪತ್ನಿಯ ನೆನಪಿನಲ್ಲೇ ಅಪರ್ಣಾರ ಪತಿ ನಾಗರಾಜ್​ ವಸ್ತಾರೆ ಅವರು ಕವನ ಒಂದನ್ನು ಬರೆದಿದ್ದು, ಎಲ್ಲರ ಮನ ಕಲಕುತ್ತಿದೆ.
ಕಚ್ಚುವ ಹಾವಿನ ಹಲ್ಲಡಿಗೇ ಕಡಿತದ ನಂಜು ತೆಗೆಯುವಮದ್ದುಂಟೆಂದು ಕೇಳಪಟ್ಟಿದ್ದೇನೆಯಾವುದೋ ದೇಶದ ಎಂಥದೋ ಕೆಲಮಂದಿಮೈನಂಜಾಗಿ ನರಳುವವರ ಮೇಲೆ ಹಾವು ಹರಿಯಿಸಿ ವಿಷ ತೆಗೆದಿದ್ದುಂಟಂತೆಇದ್ದರೂ ಇರಬಹುದುಯಾಕೆಂದರೆ ಮದ್ದಿಗೆ ತಕ್ಕ ಮರುಮದ್ದು ಆ ಮದ್ದೊಳಗೇನೆ ಇದ್ದೀತುಉದಾಹರಣೆಗೆ ಕನ್ನಡದ ಮದ್ದನ್ನೇ ತೆಗೆದುಕೊಳ್ಳಿಅದು ಕೇಡೆಸಗುವ ಮದ್ದೂ ಆಗಬಹುದುಹುಷಾರು ತಪ್ಪಿದರೆ ಮೈಸಂತಯಿಸಿ ಸಲಹುವ ಔಷಧವೂ ಆಗಬಹುದುಅಂದಮೇಲೆ ಮದ್ದು ಮಾಡುವುದೆಂದರೆ ಎರಡೂ ಹವುದುಹಾಗೇ ಹಾವಿನ ವಿಷದೊಳಗೆ ಇವೆರಡೂ ಇರಬಹುದುವಿಷದೊಳಗೇ ಪ್ರತಿವಿಷವುಂಟೆಂದು ಲೋಕರೂಢಿಪದಕ್ಕೆ ತಕ್ಕ ಪ್ರತಿಪದವಾದರೂ ಪದದೊಳಗೇ ಇರುವುದುಕೆಲವೊಮ್ಮೆ ಪದವೇ ಪದ ಹುಟ್ಟಿಸುವುದುಅಂದರೆ ಪ್ರತಿ ಪದಕ್ಕೂ ಪ್ರತಿಪದವಿರುವುದುಹುಟ್ಟಿಗೆ ಸಾವು ಬಿಚ್ಚಿಗೆ ಕಟ್ಟಿರುವ ಹಾಗೆ ಪಟ್ಟುಪಟ್ಟಿಗೂಮರುಪಟ್ಟಿರುವುದು ಹವುದುಮುಯಿಗೆ ಮುಯಿ ಅನ್ನುವರಲ್ಲ ಬಹುಶಃ ಹಾಗೇಇನ್ನು ಪದಪದಕ್ಕು ದಪದಪಕ್ಕೂ ವ್ಯತ್ಯಾಸವೇನುಬರೇ ಪದಪದದಿಂದಲೇ ದಪದಪ ರಾಚಬಹುದುದಪದಪವೆನ್ನುತ್ತಲೇ ಪದಬರೆದು ಚಚ್ಚಬಹುದುಕೊಲ್ಲುವ ಖಡುಗವೇ ಕಾಯಲುಂಟೆಂಬುದು ಹಳೆಯ ಮಾತುಕಚ್ಚಿದ ಹಾವು ನಂಜೊಡನೆ ಮದ್ದೂ ಇಳಿಬಿಡುವುದೆಂದುಇನ್ನೊಂದು ಅಂಬೋಣಅಂದರೆ ನಂಜೊಳಗಿನ ನಂಜಾಗಿ ಮದ್ದಿರುವುದುಅದನ್ನು ಆಯ್ದು ಸೋಸಿ ಮದ್ದಾಗಿಸಿಕೊಳ್ಳುವುದೂ ವಿದ್ಯೆಯೇಇದೇ ನೇರಕ್ಕೆ ಸದ್ದೊಳಗಿನ ಸದ್ದಾಗಿ ತುಸು ಮೌನವಿದ್ದೀತುಮೌನವಾದರೂ ಸದ್ದಿಲ್ಲದ ಸದ್ದಿನದೇ ತುಸುತುಣುವುಈ ನಡುವೆ ಬದುಕನ್ನು ಹಾವಿಗೆ ಹೋಲಿಸಬಹುದುತನ್ನ ತಾನೇ ತಿನ್ನಹೊಂಚುವ ಹಾವಿಗೆಬಾಯೊಳಕ್ಕೆ ಬಾಲವಿರಿಸಿ ಉಣ್ಣಹೊರಟ ಹಾವುಈ ಬದುಕಿನ ವರ್ತುಲವನ್ನೇ ಕುರಿತಾಡೀತುಹುಟ್ಟಿ ಸತ್ತು ಸತ್ತು ಹುಟ್ಟಿ ಹುಟ್ಟಿ ಸತ್ತು ಸತ್ತು ಹುಟ್ಟಿಹೀಗೆ ಮತ್ತೆ ಮತ್ತೆ ತೆತ್ತು ಇತ್ತು ಇತ್ತು ತೆತ್ತು ತೆತ್ತು ಇತ್ತು ಇತ್ತು ತೆತ್ತುಜೀವ ತೆತ್ತಷ್ಟೇ ಜೀವವಿತ್ತು ಜೀವವಿತ್ತಷ್ಟೇ ಜೀವ ತೆತ್ತುಬದುಕಿನ ಬೇಸಾಯಕ್ಕೆ ಸಾವನ್ನೊತ್ತೆಯಿಟ್ಟುಸಾವಿನ ಸಾಗುವಳಿಗೆ ಬದುಕನ್ನೇ ಕತ್ತೆಯಾಗಿಸಿಬಿಟ್ಟುಕೆಲವೊಮ್ಮೆ ತನಗೂ ಮಿಕ್ಕು ದೊಡ್ಡ ಸಂಗತಿಯನ್ನೇ ನುಂಗಲೆಣಿಸುವಹಾವು ಸಾವುಬದುಕಿನ ರೂಪಕವಲ್ಲವೇನುಕೆಲವೊಮ್ಮೆ ಪದ್ಯವೂ ತನಗೂ ದೊಡ್ಡದಾದ ರೂಪಕವನ್ನುನುಂಗಿ ತೇಗಬೇಕುಕ್ಯಾನ್ಸರಿರುವ ಮೈಯಿ ತನ್ನನ್ನು ತಾನೇ ನುಂಗಲೆಣಿಸುವುದಿಲ್ಲವೇಥೇಟು ಹಾಗೆಇದು ಅದನ್ನೂ ಅದು ಇದನ್ನೂ ಒಂದೇ ಸಮ ಕಬಳಿಸಲೆಣಿಸುವುದಲ್ಲವೇಥೇಟು ಹಾಗೆ’ಅದೂ ಇದೂ ಒಂದೇ ಧಾತುವಿನ ಎರಡು ಮೊಹರಂತಲ್ಲವೇಥೇಟು ಹಾಗೆಖೀಮೋಥೆರಪಿಯೆಂದು ವಿಷವನ್ನೂಡಿಮೈಯನ್ನು ಅದರ ಉಳಿಗಾಲಕ್ಕೆಂದು ಅಷ್ಟಿಷ್ಟೇ ಅಳಿಸುವುದಿಲ್ಲವೇಥೇಟು ಹಾಗೆಸತ್ತು ಸತ್ತು ಬದುಕುವ ಪರಿಯೇನೆಂದು ಕ್ಯಾನ್ಸರುಮದ್ದುತಿಳಿಹೇಳಬಹುದುಮದ್ದೇ ನಂಜೆಂದು ನಂಜೇ ಮದ್ದೆಂದು ಕಂಡವರಿಗಿಂತಉಂಡವರು ಹೇಳಬಹುದುಇದ್ದೇನು ಗೆದ್ದೇನೆಂದು ಗೆದ್ದೇನು ಇದ್ದೇನೆಂದುಇದ್ದು ಗೆದ್ದ ಮೇಲೂ ಗೆದ್ದು ಇದ್ದ ಮೇಲೂ ಮಂತ್ರದಂತೆ ಸದಾಪಿಟಿಪಿಟಿಸಬಹುದುಕೊಲ್ಲುವ ಖಡುಗವೇ ಕಾಯುವ ಸರಕೆಂದು ನಂಬಬಹುದುಪದವಾಗಿ ಸತ್ತರೂ ಪದ್ಯವಾಗಿ ಬದುಕಬಹುದು
(ಇದು ೨೦೨೩ರ ಜನವರಿಯಲ್ಲಿ ಬರೆದದ್ದು. ಅಪರ್ಣೆಯ ಚಿತ್ರ ಇದೇ ೨೦೨೪ರ ಏಪ್ರಿಲ್ ೯ನೇ ತಾರೀಖಿನ ಯುಗಾದಿಯದ್ದು.)




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eleven =
Remember me
