| ಡಾ. ಎನ್. ಜಗದೀಶ್ ಕೊಪ್ಪ
ನಮ್ಮ ನಡುವಿನ ಕ್ರಿಯಾಶೀಲ ಗೆಳೆಯ ನಾಗತಿಹಳ್ಳಿ ಚಂದ್ರಶೇಖರ್ ತನ್ನ ಹುಟ್ಟಿದೂರಿನಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ಈ ವರ್ಷ ಇಪ್ಪತ್ತನೆಯ ವರ್ಷಕ್ಕೆ ಕಾಲಿಟ್ಟಿದೆ. ಇದೇ ಏಪ್ರಿಲ್ ಎಂಟರಿಂದ ಹತ್ತರವರೆಗೆ ಮೂರು ದಿನಗಳ ಕಾಲ ಹಬ್ಬ ನಡೆಯಲಿದೆ. ಆಧುನಿಕ ತಂತ್ರಜ್ಞಾನದ ಭರಾಟೆಯೊಳಗೆ ಕಳೆದು ಹೋಗುತ್ತಿರುವ ಈ ಜಗತ್ತಿನಲ್ಲಿ ಗ್ರಾಮೀಣ ಸಂಸ್ಕೃತಿ ಎಂಬುದು ಅವನತಿಯ ಮಾರ್ಗ ಹಿಡಿದಿರುವಾಗ, ನೆಲದ ಸಂಸ್ಕೃತಿಗೆ ಜೀವ ತುಂಬುತ್ತಿರುವ ಮಿತ್ರ ನಾಗತಿಹಳ್ಳಿ ಚಂದ್ರುವಿನ ಈ ಸಾಹಸ ನಿಜಕ್ಕೂ ಮೆಚ್ಚುವಂತಹದ್ದು.
ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧವಾದ ಹೆಸರು. ನಾಗಮಂಗಲ ತಾಲೂಕಿನಲ್ಲಿ ಬೆಂಗಳೂರು-ಮಂಗಳೂರು ಮುಖ್ಯರಸ್ತೆಯಲ್ಲಿ ಮಂಡ್ಯ ಜಿಲ್ಲೆಯ ಗಡಿಯಂಚಿನಲ್ಲಿ ಈ ಪುಟ್ಟಗ್ರಾಮವಿದೆ. ಓರ್ವ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಚಂದ್ರಶೇಖರ್ ಅವರು ಸಿನಿಮಾ ಮತ್ತು ಸಾಹಿತ್ಯದ ಕ್ಷೇತ್ರದದಲ್ಲಿ ಮಾಡಿದ ಸಾಧನೆ ಒಂದು ರೀತಿಯಲ್ಲಿ ಏಕಲವ್ಯನ ಮಾದರಿಯಂತಹದ್ದು.
1980ರ ದಶಕದಲ್ಲಿ ಮೈಸೂರು ಡೈರಿಯಲ್ಲಿ ರಾತ್ರಿಪಾಳಿಯಲ್ಲಿ ದುಡಿಯುತ್ತ, ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿ ಓದುತ್ತಿದ್ದ ಚಂದ್ರಶೇಖರ್, ಕಥೆಗಳ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾದರು. ಜೊತೆಗೆ ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಮುಗಿಸಿದರು. ಬರಹಗಳಲ್ಲಿ ತಮ್ಮ ಹೆಸರಿನೊಂದಿಗೆ ಹುಟ್ಟಿದೂರು ನಾಗತಿಹಳ್ಳಿಯನ್ನು ಸೇರಿಸಿಕೊಂಡು ಇಡೀ ಕನ್ನಡನಾಡಿಗೆ ಊರನ್ನು ಪರಿಚಯಿಸಿದರು. 1985ರ ವೇಳೆಗೆ ಬೆಂಗಳೂರು ನಗರಕ್ಕೆ ಆಗಮಿಸಿದ ಚಂದ್ರು, ಹನುಮಂತ ನಗರದ ಪಿ.ಇ.ಎಸ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತ, ಕಥೆಗಳ ಜೊತೆಗೆ ಕಾದಂಬರಿ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದರು. ಖ್ಯಾತ ಸಿನಿಮಾ ನಿರ್ದೇಶಕ ನಂಜುಂಡೇಗೌಡರು ಇವರ ಕಥೆಯನ್ನು ಆಧರಿಸಿ ನಿರ್ವಿುಸಿದ ‘ಸಂಕ್ರಾಂತಿ’ ಸಿನಿಮಾ ರಾಜ್ಯ ಪ್ರಶಸ್ತಿಯೊಂದಿಗೆ ಕನ್ನಡಿಗರ ಮನ ಗೆದ್ದಿತು.ಇದು ಪರೋಕ್ಷವಾಗಿ ಚಂದ್ರಶೇಖರ್ ಅವರು ಸಿನಿಮಾರಂಗಕ್ಕೆ ಕಾಲಿಡಲು ಪ್ರೇರಣೆಯಾಯಿತು. ಅನಂತನಾಗ್ ನಾಯಕತ್ವದ ‘ಉಂಡು ಹೋದ, ಕೊಂಡು ಹೋದ’ ಸಿನಿಮಾದ ಮೂಲಕ ನಿರ್ದೇಶಕ ಪಟ್ಟಕ್ಕೇರಿದ ಚಂದ್ರಶೇಖರ್, ‘ಕೊಟ್ರೇಶಿ ಕನಸು’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಗೆ ಭಾಜನರಾಗುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು.

ಕಥೆ, ಕಾದಂಬರಿ, ಸಿನಿಮಾಗಳ ಮೂಲಕ ಪ್ರಸಿದ್ಧಿಗಳಿಸಿ ಹಾಗೂ ನೆಮ್ಮದಿಯ ಬದುಕು ಕಟ್ಟಿಕೊಂಡ ಚಂದ್ರಶೇಖರ್ ತಾವು ಹುಟ್ಟಿದ ಊರನ್ನು ಮರೆಯಲಿಲ್ಲ. ಒಂದು ರೀತಿಯಲ್ಲಿ ಅಲೆಮಾರಿ ಜಂಗಮನಂತೆ ಸದಾ ಜಗತ್ತನ್ನು ಸುತ್ತುವ ಚಂದ್ರು, ತಮ್ಮ ಉಸಿರಿನೊಳಗೆ ಊರಿನ ನೆನಪನ್ನು ಇಟ್ಟುಕೊಂಡು ಜೀವಿಸಿದವರು. ಇದು ಅವರಿಗೆ ಆಕಸ್ಮಿಕವಾಗಿ ಬಂದ ಗುಣವಲ್ಲ, ಮಂಡ್ಯದ ನೆಲದ ಸಂಸ್ಕೃತಿಯಲ್ಲಿ ಇಂತಹ ಛಾಯೆ ಮತ್ತು ಗುಣವಿದೆ. ಒಂದು ಕುಟುಂಬದ ಸಾವನ್ನು ಒಂದು ಊರಿನ ಸಾವು ಎಂಬಂತೆ ಹಾಗೂ ಒಂದು ಕುಟುಂಬದ ಶುಭಕಾರ್ಯವನ್ನು ಒಂದು ಊರಿನ ಸಂಭ್ರಮವೆಂಬಂತೆ ನೋಡುವುದು ಮಂಡ್ಯ ಜಿಲ್ಲೆಯ ಜನರ ಮೂಲಭೂತ ಲಕ್ಷಣಗಳಲ್ಲೊಂದು. ಹಾಗಾಗಿ ನಾಗತಿಹಳ್ಳಿ ಚಂದ್ರು ಅವರು ಹುಟ್ಟಿದ ನೆಲದ ಋಣವನ್ನು ಮರೆಯಲಿಲ್ಲ.
ಮೊದಲಿಗೆ ಅಲ್ಲಿನ ಪ್ರೖೆಮರಿ ಮತ್ತು ಮಾಧ್ಯಮಿಕ ಶಾಲೆಯನ್ನು ಅಭಿವೃದ್ಧಿಗೊಳಿಸಿದರು. ಊರಿನ ಜನತೆ ಮತ್ತು ಯುವಕರಿಗೆ ಇಡೀ ರಾಜ್ಯಾದ್ಯಂತ ಲೇಖಕರಿಂದ ಕೃತಿಗಳನ್ನು ಸಂಗ್ರಹಿಸಿ ಬೃಹತ್ ಗ್ರಂಥಾಲಯ ಸ್ಥಾಪಿಸಿದರು. ಊರಿನ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನ ಪ್ರಸಿದ್ಧ ತಜ್ಞ ವೈದ್ಯರನ್ನು ನಾಗತಿಹಳ್ಳಿಗೆ ಕರೆದೊಯ್ದು ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿದರು. ಇದು ಅಂತಿಮವಾಗಿ 2004ರಲ್ಲಿ ಅವರಿಗೆ ಅವರಿಗೆ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಆಚರಿಸಲು ಪ್ರೇರಣೆಯಾಯಿತು. ಮೂರು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಾಡಿನ ವಿವಿಧ ಮೂಲೆಯಿಂದ ಬರುವ ಕಲಾವಿದರು ಹಾಡು, ನೃತ್ಯ, ನಾಟಕಗಳ ಮೂಲಕ ಅಲ್ಲಿನ ರೈತಾಪಿ ಜನರಿಗೆ ಕಲೆಗಳನ್ನು ಪರಿಚಯ ಮಾಡಿಕೊಟ್ಟರೆ, ಪ್ರಖ್ಯಾತ ಸಿನಿಮಾ ಕಲಾವಿದರು ಮತ್ತು ಸಾಹಿತಿಗಳು ಹಾಗೂ ಸಾಂಸ್ಕೃತಿಕ ಲೋಕದ ಚಿಂತಕರು ಆಗಮಿಸಿ, ಸ್ಥಳಿಯ ಜನರೊಂದಿಗೆ ಬೆರೆತು ಪರಸ್ಪರ ಮಾತುಕತೆ ಮೂಲಕ ಗ್ರಾಮೀಣ ಬದುಕನ್ನು ಅರ್ಥಮಾಡಿಕೊಳ್ಳುತ್ತಾರೆ. ನಾಗತಿಹಳ್ಳಿಯ ಜನತೆ ‘ನಾವು ಕರ್ನಾಟಕದ ಎಲ್ಲ ಮಹಾನ್ ನಟರು ಮತ್ತು ಸಾಹಿತಿಗಳನ್ನು ನೋಡಿದೆವು’ ಎಂಬ ಸಂತೋಷಕ್ಕೆ ಕಾರಣರಾಗಿದ್ದಾರೆ.
ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ವಿಶೇಷವೆಂದರೆ, ಇಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಕಾರ್ಯಕ್ರಮಕ್ಕೆ ಚಂದ್ರಶೇಖರ್ ಸರ್ಕಾರದಿಂದ ಯಾವುದೇ ಧನಸಹಾಯ ಪಡೆಯುವುದಿಲ್ಲ. ತಮ್ಮ ಸಂಪಾದನೆಯ ಒಂದು ಭಾಗವನ್ನು ಈ ಹಬ್ಬಕ್ಕೆ ವಿನಿಯೋಗಿಸುವುದರ ಮೂಲಕ ತೃಪ್ತಿ ಕಾಣುತ್ತಾರೆ. ಇಡೀ ಮಂಡ್ಯ ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿಯಾಗಿದ್ದ ನಾಗಮಂಗಲ ತಾಲೂಕು ಒಂದು ಕಾಲದಲ್ಲಿ ಹಿಂದುಳಿದ ಪ್ರದೇಶವಾಗಿತ್ತು. ಈ ಕಾರಣದಿಂದಾಗಿ ಶತಮಾನದ ಹಿಂದೆ ಈ ಪ್ರದೇಶದಿಂದ ಅತ್ಯಧಿಕ ಮಂದಿ ನೀಲಗಿರಿಯ ಚಹಾ ತೋಟಗಳಿಗೆ ಹಾಗೂ ಬೆಂಗಳೂರು ನಗರಕ್ಕೆ ವಲಸೆ ಹೋಗಿದ್ದಾರೆ. ಒಂದು ಕಾಲದಲ್ಲಿ ಬರಡುನೆಲವಾಗಿದ್ದ ನಾಗಮಂಗಲ ಭೂಮಿ ಮಂಡ್ಯ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಕಣಜ ಎಂಬುದು ಸಾರ್ವಕಾಲಿಕ ಸತ್ಯ.
ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಬಂಗಾಳಿ ಕಾದಂಬರಿಗಳನ್ನು ಅನುವಾದಿಸಿದ ಬಿಂಡಿಗನವಿಲೆ ವೆಂಕಟಾಚಾರ್ಯ ಈ ನೆಲದವರು. ಕನ್ನಡ ಜಾನಪದ ಕಲೆಗಳ ತೊಟ್ಟಿಲು ಎನಿಸಿರುವ ಈ ನೆಲದಿಂದ ಬಂದ ಡಾ.ಜಿ.ಶಂ.ಪರಮಶಿವಯ್ಯ, ಡಾ.ಎಚ್.ಎಲ್.ನಾಗೇಗೌಡ, ಪೊ›.ಹ.ಕ. ರಾಜೇಗೌಡ ಮತ್ತು ಕ.ರಾ.ಕೃಷ್ಣಸ್ವಾಮಿ ಜಾನಪದ ತಜ್ಞರಾಗಿ ಪ್ರಸಿದ್ಧಿಯಾದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಕರಲ್ಲಿ ಒಬ್ಬರಾಗಿದ್ದ ಬಿ.ಎಸ್.ರಂಗಾ, ನವೋದಯ ಸಾಹಿತ್ಯದ ಪ್ರವರ್ತಕರಲ್ಲಿ ಮುಖ್ಯರಾದ ಬಿ.ಎಂ.ಶ್ರೀಕಂಠಯ್ಯ, ನವ್ಯ ಕಾವ್ಯದ ಡಾ.ಬಿ.ಸಿ.ರಾಮಚಂದ್ರಶರ್ಮ, ಕನ್ನಡ ಪ್ರಖರ ವೈಚಾರಿಕ ಬರಹಗಾರರಲ್ಲಿ ಒಬ್ಬರಾದ ಪೊ›.ಎಚ್.ಎಲ್. ಕೇಶವಮೂರ್ತಿಯವರಿಂದ ಹಿಡಿದು ನಾಡಿನ ಪ್ರಥಮ ಅರ್ಥಶಾಸ್ತ್ರಜ್ಞ ಹಾಗೂ ಮೈಸೂರು ಮತ್ತು ಬರೋಡ ಸಂಸ್ಥಾನಗಳಿಗೆ ಆರ್ಥಿಕ ಸಲಹೆಗಾರರಾಗಿ ದುಡಿದ ಮೈಲಾರಪಟ್ಟಣದ ಶಂಕರಲಿಂಗೇಗೌಡರು ಮತ್ತು ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣರಂತಹ ಮಹಾನ್ ಪ್ರತಿಭೆಗಳನ್ನು ನೀಡಿದ ನಾಗಮಂಗಲದ ಈ ನೆಲವನ್ನು ಇದೀಗ ನಾಗತಿಹಳ್ಳಿ ಚಂದ್ರು ನೀರು, ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ.
ಚಂದ್ರಶೇಖರ್ ವರ್ಷಕ್ಕೊಮ್ಮೆ ಕೇವಲ ಸಂಸ್ಕೃತಿ ಹಬ್ಬವನ್ನು ಮಾಡಿ ಸುಮ್ಮನಿರುವ ವ್ಯಕ್ತಿಯಲ್ಲ, ಊರಿನ ರೈತರನ್ನು ಮತ್ತು ರೈತ ಮಹಿಳೆಯರನ್ನು ಧಾರವಾಡದ ಕೃಷಿ ಮೇಳ, ಬೆಂಗಳೂರು ಕೃಷಿ.ವಿ.ವಿಯಲ್ಲಿ ನಡೆಯುವ ಮೇಳಕ್ಕೆ ಕರೆದೊಯ್ದು ಆಧುನಿಕ ಕೃಷಿಯಲ್ಲಿ ಆಗಿರುವ ಬದಲಾವಣೆಗಳನ್ನು ಪರಿಚಯಿಸುತ್ತಾರೆ. ಮಾತ್ರವಲ್ಲದೆ, ಸ್ವಂತ ಖರ್ಚಿನಲ್ಲಿ ಕಾಶಿ, ರಾಮೇಶ್ವರಕ್ಕೂ ಕಳಿಸಿಕೊಡುವ ಹವ್ಯಾಸ ಇರಿಸಿಕೊಂಡಿದ್ದಾರೆ. ನಾಗತಿಹಳ್ಳಿಯ ಪ್ರತಿ ಮನೆಯ ನೋವು-ನಲಿವುಗಳಿಗೆ ಸ್ಪಂದಿಸುವ ಗುಣವನ್ನು ಬೆಳಸಿಕೊಂಡಿರುವ ಇವರು ತನ್ನೂರಿಗೆ ಕರ್ಣಾಟಕ ಬ್ಯಾಂಕ್ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಾಗಿ ನಾಗತಿಹಳ್ಳಿ ಗ್ರಾಮದಲ್ಲಿ ಚಂದ್ರು ಪ್ರತಿ ಮನೆಯ ಪ್ರೀತಿಯ ಮಗನಾಗಿದ್ದಾರೆ.
ನಾಗತಿಹಳ್ಳಿ ಚಂದ್ರು ಅವರ ಈ ಪ್ರೀತಿಯನ್ನು ಗ್ರಾಮೀಣ ಪ್ರದೇಶದಿಂದ ಬಂದ ಪ್ರತಿಯೊಬ್ಬ ಅಧಿಕಾರಿ ಅಥವಾ ವಿದ್ಯಾವಂತ ಉದ್ಯೋಗಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ಕರ್ನಾಟಕದ ಎಷ್ಟೋ ಗ್ರಾಮಗಳು ಉದ್ಧಾರವಾಗುತ್ತವೆ. ದೆಹಲಿಯ ಕರ್ನಾಟಕ ಭವನದಲ್ಲಿ ಅಧಿಕಾರಿಯಾಗಿದ್ದ ಸಕಲೇಶಪುರ ತಾಲೂಕಿನ ಬೈಕರೆ ನಾಗೇಶ್ ಮತ್ತು ಮಂಡ್ಯ ಸಮೀಪದ ಎಚ್.ಕೋಡಿಹಳ್ಳಿ ಗ್ರಾಮದಿಂದ ಬಂದು ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕೆ.ಎಂ.ಚಂದ್ರೇಗೌಡ ಎಂಬ ಹಿರಿಯ ಅಧಿಕಾರಿಗಳು ಇದೇ ಮಾದರಿಯಲ್ಲಿ ಹುಟ್ಟಿ ಬೆಳೆದ ಊರನ್ನು ಅಭಿವೃದ್ಧಿ ಪಡಿಸಿದ್ದಾರೆ. ನಾಗತಿಹಳ್ಳಿ ಸಂಸ್ಕೃತಿ ಹಬ್ಬವು ಕೇವಲ ಸಾಂಪ್ರದಾಯಿಕ ಕಲೆಗಳ ಪ್ರದರ್ಶನವಾಗದೆ, ನಾಡಿನ ಇತರ ಪ್ರಜ್ಞಾವಂತರಿಗೂ ಸ್ಪೂರ್ತಿ ಹಾಗೂ ಮಾದರಿಯಾಗುವ ಹಬ್ಬವಾಗಿದೆ. ಆಡಂಬರದ ಶಬ್ದಗಳ ಸಂತೆಯಲ್ಲಿ ಮೌನವಾಗಿ ನಿಂತು ಯೋಚಿಸುವ ಹಾಗೆ ಪ್ರಜ್ಞಾವಂತರ ಎದೆಯೊಳಗೆ ಇಂತಹ ಹೊಸ ಆಲೋಚನೆಯನ್ನು ಹುಟ್ಟು ಹಾಕಿದ; ನನ್ನ ಐದುದಶಕಗಳ ಮಿತ್ರ ನಾಗತಿಹಳ್ಳಿ ಚಂದ್ರು ಅವರಿಗೆ ಅಭಿನಂದನೆಗಳು.
(ಲೇಖಕರು ಸಾಹಿತಿ)
ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

==
ಲೋಕಸಮರಕ್ಕೆ ಡ್ರ್ಯಾಗನ್ ಕಂಟಕ!
ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಕುತಂತ್ರ
ಎಐ ತಂತ್ರಜ್ಞಾನ ಬಳಸಿ ಚುನಾವಣೆ ಕೆಡಿಸಲು ಮಹಾ ಸಂಚು
ನವದೆಹಲಿ: ಜಾಗತಿಕ ಮಟ್ಟದಲ್ಲಿ ಮೇಲೇರುತ್ತಿರುವ ಭಾರತದ ಖ್ಯಾತಿ, ಪ್ರತಿಷ್ಠೆಯಿಂದ ಇನ್ನಷ್ಟು ಮತ್ಸರಕ್ಕೀಡಾಗಿರುವ ಚೀನಾ, ಕೃತಕ ಬುದ್ಧಿಮತ್ತೆ (ಎಐ ತಂತ್ರಜ್ಞಾನ) ಬಳಸಿಕೊಂಡು ಭಾರತದ ಲೋಕಸಭಾ ಚುನಾವಣೆಗೆ ಕಂಟಕವೊಡ್ಡಲು ಸಂಚು ಹೆಣೆದಿದೆ. ಲೋಕಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡ್ರಾ್ಯಗನ್ ರಾಷ್ಟ್ರದ ಈ ಮಹಾ ಷಡ್ಯಂತ್ರವನ್ನು ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್ ಬಯಲಿಗೆಳೆದಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ವರ್ಚಸ್ಸು ಹಾಗೂ ದಕ್ಷ ಆಡಳಿತದ ಮೂಲಕ ಭಾರತವನ್ನು ಜಾಗತಿಕವಾಗಿ ಉನ್ನತ ಸ್ಥರಕ್ಕೆ ಕೊಂಡೊಯ್ಯುವ ಜತೆಗೆ, ಚೀನಾದ ಪ್ರತಿಯೊಂದು ಕುತಂತ್ರಗಳಿಗೂ ಸೆಡ್ಡು ಹೊಡೆಯುತ್ತಿರುವುದು ಚೀನಾಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯನ್ನುಂಟು ಮಾಡಿದೆ. ಇದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಚೀನಾಗೆ ಇಷ್ಟವಿಲ್ಲ. ಏಷ್ಯಾದಲ್ಲಿ ಬಿಗಿಯಾಗುತ್ತಿರುವ ಭಾರತದ ಹಿಡಿತ, ಆರ್ಥಿಕತೆಯಲ್ಲಿ ಚೀನಾದ ಸರಿಸಮನಕ್ಕೆ ಭಾರತ ಬೆಳೆಯುತ್ತಿರುವುದು ಚೀನಾವನ್ನು ಕಂಗಾಲಾಗಿಸಿದೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶೀಘ್ರವೇ ಕಾಯಂ ಸ್ಥಾನ ಪಡೆಯಲಿದೆ ಎಂಬ ಕೇಂದ್ರ ಸಚಿವ ಜೈಶಂಕರ್ ಹೇಳಿಕೆ ಡ್ರಾ್ಯಗನ್ ರಾಷ್ಟ್ರಕ್ಕೆ ಕಸಿವಿಸಿ ಉಂಟುಮಾಡಿದೆ. ಹೀಗಾಗಿಯೇ ಭಾರತದ ಚುನಾವಣೆ ಸಂದರ್ಭದಲ್ಲಿ ‘ತಾಂತ್ರಿಕ ಸಮರ’ ಹೂಡುವ ಸಂಚು ಹಣೆದು ಎಐ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗಷ್ಟೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ರ್ಚಚಿಸಿದ್ದರು. ಈ ಬೆಳವಣಿಗೆ ಬಳಿಕ ಚೀನಾದ ಕುತಂತ್ರ ಬಯಲಾಗಿದೆ.
ದುರುಪಯೋಗ ತಡೆಗೆ ಕ್ರಮ: ಚಾಟ್ ಜಿಪಿಟಿ ಅಭಿವೃದ್ಧಿ
ಮಾಡಿದ ಓಪನ್ ಎಐ ಕಂಪನಿಯ ಪ್ರತಿನಿಧಿಗಳು ಕಳೆದ ತಿಂಗಳು ಭಾರತಕ್ಕೆ ಆಗಮಿಸಿದ್ದರು. ಚುನಾವಣೆ ಆಯೋಗದ
ಸದಸ್ಯರನ್ನು ಭೇಟಿಯಾಗಿ ಪ್ರಾತ್ಯಕ್ಷಿಕೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಎಐ ದುರುಪಯೋಗ ತಡೆಯಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಅದರಲ್ಲಿ ವಿವರಿಸಿದ್ದರು.
ವಿದೇಶಿ ಕೈವಾಡ ಇದೇ ಮೊದಲಲ್ಲ : ಚೀನಾದ ಸರ್ಕಾರಿ-ಬೆಂಬಲಿತ ಸೈಬರ್ ಗುಂಪುಗಳು ಉತ್ತರ ಕೊರಿಯಾದೊಂದಿಗೆ ಸೇರಿಕೊಂಡೇ 2024ರ ಹಲವು ಚುನಾವಣೆ ಟಾರ್ಗೆಟ್ ಮಾಡಿವೆ. ಎಐ ತಂತ್ರಜ್ಞಾನ ಬಳಸಿಕೊಂಡು ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಈ ಕುತಂತ್ರಿಗಳ ಸಂಚಾಗಿದೆ. ತೈವಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಪ್ರಯೋಗ ಯಶಸ್ವಿಯಾದ ಬಳಿಕ ಚೀನಾ ಭಾರತವನ್ನು ಟಾರ್ಗೆಟ್ ಮಾಡಿದೆ. ಭಾರತದ ಬಳಿಕ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಚುನಾವಣೆ ಅಸ್ತವಸ್ತಗೊಳಿಸುವುದು ಚೀನಾದ ಸಂಚಾಗಿದೆ ಎಂದು ಮೈಕ್ರೋಸಾಫ್ಟ್ ವರದಿ ಹೇಳಿದೆ. ಇನ್ನು ಕಳೆದ ಸಲ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈವಾಡವಿರುವ ಆರೋಪ ಕೇಳಿಬಂದಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ವಿರುದ್ಧ ನೇರ ಆರೋಪ ಮಾಡಿದ್ದರು.
ಬೈಡೆನ್​ಗೂ ತಟ್ಟಿದ ಬಿಸಿ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇದಿಕೆಗೂ ಚೀನಾದ ಕುತಂತ್ರದ ಬಿಸಿ ತಟ್ಟಿದೆ. ಪೂರ್ವಭಾವಿ ಚುನಾವಣೆಯೊಂದರಲ್ಲಿ ಭಾಗವಹಿಸದಂತೆ ಅಧ್ಯಕ್ಷ ಜೋ ಬೈಡೆನ್​ರ ಅನುಕರಣೆಯ ಧ್ವನಿಯಲ್ಲಿ ಸಂದೇಶವೊಂದು ರವಾನೆಯಾಗಿತ್ತು. ಚೀನಾದ ಎಐ-ಸೃಷ್ಟಿತ ಕಂಟೆಂಟ್​ಗಳ ದುರುಪಯೋಗಕ್ಕೆ ಇದು ಒಂದು ಸಾಕ್ಷ್ಯ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಚೀನಾದ ಸಂಚೇನು?
? ಶತ್ರು ರಾಷ್ಟ್ರಗಳಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುವುದು
? ಭಾರತ ತನಗಿಂತ ಶಕ್ತಿಶಾಲಿ ಆಗಬಾರದೆಂಬ ಕುತಂತ್ರ
? ಮೋದಿ ಮತ್ತೆ ಪ್ರಧಾನಿಯಾದರೆ ತನ್ನ ಆಟ ನಡೆಯಲ್ಲ
? ತನ್ನ ಹಿತಾಸಕ್ತಿ ಪರ ಇರುವವರಿಗೆ ಬೆಂಬಲ
? ಎಐ ಸೃಷ್ಟಿತ ಆಡಿಯೋ, ವಿಡಿಯೋ ತಿರುಚುವ ಸಂಚು
? ಸಾಮಾಜಿಕ ಮಾಧ್ಯಮಗಳ ಮೂಲಕ ಬಿತ್ತರಿಸುವುದು
? ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ತರುವುದು
ಮೋದಿ ಟಾರ್ಗೆಟ್ ಏಕೆ?
? ಕೋವಿಡ್ ಬಳಿಕ ಭಾರತದ ಖ್ಯಾತಿ ಜಾಗತಿಕ ಹೆಚ್ಚಳ
? ಸಂಕಷ್ಟದಲ್ಲೂ ಆರ್ಥಿಕತೆಯಲ್ಲಿ ಮುನ್ನಡೆಯ ಗರಿ
? ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ವರ್ಚಸ್ಸು ಏರಿಕೆ
? ಆರ್ಥಿಕತೆಯಲ್ಲಿ ಸವಾಲು ಮೆಟ್ಟಿನಿಲ್ಲುತ್ತಿರುವ ಭಾರತ
? ಏಷ್ಯಾದಲ್ಲಿ ಚೀನಾ ಸ್ಥಾನ ಭಾರತ ಅತಿಕ್ರಮಿಸಿದ್ದು
? ಪಾಕ್ ಮೇಲೆ ಭಾರತ ಸಾಧಿಸುತ್ತಿರುವ ನಿಯಂತ್ರಣ
? ಮೋದಿ ಮತ್ತೆ ಗೆದ್ದರೆ ಚೀನಾ ಹಿಂದಿಕ್ಕುವ ಭಯ
? ಅಮೆರಿಕ, ಭಾರತದ ಸ್ನೇಹ ವೃದ್ಧಿ ಸಹಿಸಲಾಗುತ್ತಿಲ್ಲ
ಹೇಗೆಲ್ಲ ಅಪಪ್ರಚಾರ?
? ತೈವಾನ್ ಎಲೆಕ್ಷನ್​ನಲ್ಲಿ ಚೀನಾದ ಕುತಂತ್ರ ಯಶಸ್ವಿ
? ಡೀಪ್ ಫೇಕ್​ನಿಂದ ಭಾಷಣ ನಕಲು ಮಾಡುವುದು
?ನಡೆಯದ ಘಟನೆ ನಡೆದಿದ್ದಾಗಿ ಬಿಂಬಿಸುವುದು
? ರಾಜಕಾರಣಿಗಳ ಹೇಳಿಕೆಯನ್ನೇ ಬದಲಿಸುವುದು
? ಸುಳ್ಳು ಕಂಟೆಂಟ್​ಗಳ ಜಾಹೀರಾತು ನೀಡುವುದು
? ಮತದಾನ ಮುನ್ನ ಜನಾಭಿಪ್ರಾಯ ಬದಲಿಸುವುದು
ಕಳ್ಳ ಹೆಜ್ಜೆಯ ಗುರುತು
? ಭಾರತದ ದೂರ ಸಂಪರ್ಕ ವಲಯದ ಮೇಲೆ ಕಣ್ಣು
? ಚೀನಾ ಸಂಸ್ಥೆ ಫ್ಲಾಕ್ಸ್ ಟೈಫೂನ್ ದಾಳಿ ನಿರಂತರ
? ಭಾರತ, ಫಿಲಿಪ್ಪೀನ್ಸ್, ಹಾಂಕಾಂಗ್ ಟಾರ್ಗೆಟ್
? ಅಮೆರಿಕದ ದೂರ ಸಂಪರ್ಕ ವಲಯ ಗುರಿ
? ಭಾರತದ ಪ್ರಧಾನಿ ಕಚೇರಿಯ ಮೇಲೂ ದಾಳಿ
? ಗೃಹ ಸಚಿವಾಲಯ, ಏರ್ ಇಂಡಿಯಾ ಟಾರ್ಗೆಟ್
? ಸರ್ಕಾರದ 95.2 ಜಿಬಿ ವಲಸಿಗರ ಡೇಟಾ ಹ್ಯಾಕ್
? ಗಿಟ್ ಹಬ್​ನಲ್ಲಿ ಫೈಲ್ ಪೋಸ್ಟ್ ಮಾಡಿದ್ದ ಹ್ಯಾಕರ್
? ಮಯನ್ಮಾರ್ ಅಶಾಂತಿ ಹೊಣೆ ಭಾರತದ ತಲೆಗೆ
? ಎಐ ರಚಿತ ವಿಡಿಯೋ ಪೋಸ್ಟ್ ಮಾಡಿದ್ದ ಚೀನಾ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
