ಮಂಗಳೂರು:ಮಂಗಳೂರಿನ ಪಂಪ್​ವೆಲ್​ ಬಳಿ ಇರುವ ಲಾಡ್ಜ್​ ಒಂದರಲ್ಲಿ ವ್ಯಕ್ತಿ ಒಬ್ಬರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ ಆಗಿದೆ. ವಿಚಿತ್ರ ಎಂದರೆ ಇವರು ಸಾವಿಗೀಡಾಗುವ ಮುನ್ನ ಆ ರೂಮಿನಲ್ಲಿ ಓರ್ವ ಮಹಿಳೆ ಬಂದು ಹೋಗಿದ್ದರು!
ಮಂಗಳೂರಿನ ಪಂಪ್​ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ ನಲ್ಲಿ ಅಬ್ದುಲ್​ ಕರೀಮ್​ ಎನ್ನುವವರ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆ ಆಗಿದೆ. ಇವರು ಕಾಸರಗೋಡಿನ ಉಪ್ಪಳ ನಿವಾಸಿ.
ಅಬ್ದುಲ್​ ಕರೀಮ್ ನಿನ್ನೆ ಬೆಳಗ್ಗೆ ಬಂದು ಲಾಡ್ಜ್ ಪಡೆದಿದ್ದರು. ಆದರೆ ಇಂದು ಮಧ್ಯಾಹ್ನ 1.30 ಸುಮಾರಿಗೆ ಕರೀಮ್ ಇದ್ದ ರೂಮ್​ಗೆ ಮಹಿಳೆ‌ ಒಬ್ಬರು ಭೇಟಿ ನೀಡಿದ್ದಾರೆ. ಆಮಹಿಳೆ ಹೆಚ್ಚು ಸಮಯ ಅಲ್ಲಿ ನಿಲ್ಲದೇ ಕೇವಲ ಒಂದೇ ಗಂಟೆಯಲ್ಲಿ ರೂಮ್​ನಿಂದ ತೆರಳಿದ್ದಾರೆ. ಆ ಮಹಿಳೆ ಸುಮಾರು 2.30ಕ್ಕೆ ವಾಪಾಸ್ ಹೋಗಿದ್ದೂ ಆಕೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಕರೀಂ ಮೃತಪಟ್ಟ ರೂಂನಲ್ಲಿ ‘ಕ್ಷೀರಾಬಲ’ ಹೆಸರಿನ ಆಯುರ್ವೇದಿಕ್ ಟ್ಯಾಬ್ಲೆಟ್ಸ್ ಪತ್ತೆ ಆಗಿದೆ. ಹೀಗಾಗಿ ಈ ಸಾವು ಆಕಸ್ಮಿಕವೋ ಅಥವಾ, ಬೇಕೆಂದು ಮಾಡಿದ ಯೋಜಿತ ಕೊಲೆಯೋ ಎನ್ನುವ ಅನುಮಾನ ಎದ್ದಿದೆ. ಇದೀಗ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಬ್ದುಲ್​ ಕರೀಮ್​ ಕುಟುಂಬದವರು ಕಂಕನಾಡಿ ಪೊಲೀಸ್ ಠಾಣೆಗೆ ಅನುಮಾನಸ್ಪದ ಸಾವು ಎಂದು ದೂರು ದಾಖಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 7 =
Remember me
