ಮಂಗಳೂರು:ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲವೆಂದು ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ಇಂಥಹ ಚರ್ಚೆಗಳು ಅಪ್ರಸ್ತುತವಾಗಿದ್ದು, ಸದ್ಯ ಕೋವಿಡ್ ನಿರ್ವಹಣೆಯೇ ನಮ್ಮ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ರಾಜೀನಾಮೆ ಮಾತು ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಇದು ಭಾರತೀಯ ಜನತಾ ಪಾರ್ಟಿಯ ವಿಶೇಷತೆ. ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶ. ರಾಷ್ಟ್ರ ನಾಯಕರು ಮತ್ತು ಪಕ್ಷದ ಸೂಚನೆಯಂತೆ ನಡೆಯುತ್ತೇನೆ ಎಂದು ಹೇಳಿರುವುದು ಆದರ್ಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಅಂಟಿ ಕೂತವರಲ್ಲ, ಪಕ್ಷ ಹೇಳಿದ್ರೆ ರಾಜೀನಾಮೆ ಕೊಡ್ತೇನೆ ಅಂದಿದ್ದಾರೆ. ಪಕ್ಷದಲ್ಲಿ ಇಂಥಹ ಯಾವುದೇ ಚರ್ಚೆಗಳು ಮತ್ತು ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಸರ್ವ ಸಮ್ಮತಿಯ ನಾಯಕ ಯಡಿಯೂರಪ್ಪನವರು. ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ಇಂಥಹ ಚರ್ಚೆಗಳು ಅಪ್ರಸ್ತುತ. ಸದ್ಯ ಕೋವಿಡ್ ನಿರ್ವಹಣೆ ನಮ್ಮ ಜವಾಬ್ದಾರಿ ಎಂದರು.
ಯಡಿಯೂರಪ್ಪನವರು ಕಾರ್ಯಕರ್ತರಿಗೆ ಆದರ್ಶವಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅಂಥಹ ಚರ್ಚೆಗಳಿಲ್ಲ. ಪಕ್ಷ ಮತ್ತು ‌ರಾಷ್ಡ್ರೀಯ ನಾಯಕರ ಮುಂದೆ ಈ ಚರ್ಚೆಯೇ ಇಲ್ಲ. ಅವರು ಸಿಎಂ ಆದ ಮೇಲೆ ವಿರೋಧ ಪಕ್ಷ ಟೀಕೆ ಮತ್ತು ಅಪವಾದ ಇತ್ತು. ಇದೆಲ್ಲದರ ನೋವು ಯಡಿಯೂರಪ್ಪನವರಲ್ಲಿ ಇರಬಹುದು. ಆದರೆ, ನಾನೊಬ್ಬ ಕಾರ್ಯಕರ್ತ ಅನ್ನೋ ನೆಲೆಯಲ್ಲಿ ಇವತ್ತು ಸಂದೇಶ ಕೊಟ್ಟಿದ್ದಾರೆ. ಪರ್ಯಾಯ ನಾಯಕತ್ವದ ಬಗ್ಗೆ ಅವರು ಸಹಜ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮಲ್ಲಿ ಹತ್ತಾರು ನಾಯಕರಿದ್ದಾರೆ ಅಂತ ಒಬ್ಬ ಹಿರಿಯರಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ರೆಬಲ್​ಗಳಿಲ್ಲ. ಎಲ್ಲರಿಗೂ ಹೇಳಿದ್ದೇವೆ. ಏನೇ ನೋವುಗಳಿದ್ದರೂ ಮಾತುಕತೆ ಮಾಡಲು ಸೂಚಿಸಿದ್ದೇವೆ. ಕೆಲವರ ಭಾವನೆ ಮತ್ತು ನೋವುಗಳು ಸರ್ಕಾರ ನಡೆಸುವಾಗ ಇರುತ್ತದೆ. ಅದನ್ನ ಸರಿ ಮಾಡಿದ್ದೇವೆ. ನಮ್ಮಲ್ಲಿ ಸಿಎಂ ಬದಲಾವಣೆ ಚರ್ಚೆಯಿಲ್ಲ. ಗೊಂದಲ ಮತ್ತು ಅಪಸ್ವರಗಳಿಲ್ಲ. ಈಗ ಮಾತನಾಡಿದ ಶಾಸಕರಿಗೆ ಕರೆದು ಮಾತನಾಡಿದ್ದೇವೆ. ಮುಂದಿನ ತಿಂಗಳು ಅವರ ಭಾವನೆ ವ್ಯಕ್ತಪಡಿಸಲು ಸಭೆ ನಡೆಸ್ತೇವೆ ಎಂದರು.(ದಿಗ್ವಿಜಯ ನ್ಯೂಸ್​)
ಅಧಿಕಾರ ಹಸ್ತಾಂತರಿಸಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ ಶಿಲ್ಪಾ ನಾಗ್..!

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

‘ಯಡಿಯೂರಪ್ಪ ಅವರೇ ನಮ್ಮ ನಾಯಕರು’ ಎಂದ ಸಿ.ಪಿ.ಯೋಗೇಶ್ವರ್… ರಾಜೀನಾಮೆಗೂ ಸಿದ್ಧವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
