ಹುಬ್ಬಳ್ಳಿ:ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಹಿಂದೆ ರಾಜಕೀಯ ಪಕ್ಷಗಳ ಹುನ್ನಾರವಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿದರು.
ಈ ದಾಂಧಲೆ ರಾಜಕೀಯ ಹುನ್ನಾರದಿಂದ ನಡೆದಿದೆ. ಹಿಂಸಾಚಾರದ ಹಿಂದೆ ಮಾಜಿ ಸಚಿವರೊಬ್ಬರ ಕೈವಾಡ, ಎಸ್​ಡಿಪಿಐ, ಕೆಎಫ್​ಡಿ ಸಂಘಟನೆಗಳ ಹುನ್ನಾರ ಅಡಗಿದೆ. ಏಕಾಏಕಿ 3 ಸಾವಿರ ಜನ ಸೇರಿದ್ದು ಹೇಗೆ? ಅಲ್ಲಿ ಪೆಟ್ರೋಲ್, ಕಲ್ಲುಗಳು ಹೇಗೆ ಬಂದವು..? ಪೂರ್ವ ನಿಯೋಜಿತವಾಗಿಯೇ ಗಲಭೆ ಮಾಡಿದ್ದಾರೆ. ಈ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ಇದನ್ನೂ ಓದಿರಿಡಿಜೆ ಹಳ್ಳಿ ಗಲಭೆಗೆ ಕಾರಣವೇನು? ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ?
ನಿನ್ನೆ (ಮಂಗಳವಾರ) ರಾತ್ರಿ ಕಾವಲ್​ಭೈರಸಂದ್ರ ವಾರ್ಡ್​ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಶಾಸಕರ ಮನೆ, ಪೊಲೀಸ್​ ಠಾಣೆ, ಅಂಗಡಿಗಳು ಸೇರಿದಂತೆ ಸಿಕ್ಕಸಿಕ್ಕ ವಾಹನಗಳ ಮೇಲೂ ಕಿಡಿಗೇಡಿಗಳ ಗುಂಪು ಮನಸೋ ಇಚ್ಛೆ ದಾಂಧಲೆ ನಡೆಸಿತ್ತು. ವಾಹನಗಳು-ಶಾಸಕರ ಮನೆಗೂ ಬೆಂಕಿ ಇಟ್ಟು ವಿಕೃತಿ ಮೆರೆದರು. ಪೊಲೀಸರು, ಪತ್ರಕರ್ತರ ಮೇಲೂ ಕಲ್ಲುತೂರಾಟ, ಬಾಟಲಿಗಳನ್ನು ಎಸೆದು ಇಡೀ ಏರಿಯಾವನ್ನೇ ಪ್ರಕ್ಷುಬ್ಧ ಸ್ಥಿತಿಗೆ ತಂದೊಡ್ಡಿದ್ದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಅವಹೇಳನ ಮಾಡಬಾರದು. ಅದು ಕಾನೂನು ಬಾಹಿರ. ಅದರ ಹೆಸರಿನಲ್ಲಿ ಗಲಭೆ ಮಾಡೋದು ಹುಚ್ಚು ಧರ್ಮ. ಗಲಭೆಯಲ್ಲಿ ಸರ್ಕಾರಿ ಕಚೇರಿಗಳನ್ನ ದ್ವಂಸ ಮಾಡಿರೋದು ಅಪರಾಧ. ಒಟ್ಟಾರೆ ಈ ದಾಂಧಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಗಲಭೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನೂ ಬಂಧಿಸಲು ಪೊಲೀಸ್ ಇಲಾಖೆ ಪ್ರಯತ್ನ ಮಾಡುತ್ತಿದೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ನೋಡಿಕೊಳ್ಳುತ್ತೇವೆ ಎಂದರು.
https://www.facebook.com/VVani4U/videos/602324063988861/
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nine + eleven =
Remember me
