ಉಡುಪಿ:ತಾಕತ್ ಇದ್ದರೆ ದಲಿತರೊಬ್ಬರನ್ನು ಸಿಎಂ ಮಾಡಿ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ದಲಿತಾಸ್ತ್ರದ ಮೂಲಕವೇ ಉತ್ತರ ಕೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​, ಅದರ ಬೆನ್ನಿಗೆ ತಮ್ಮ ರಾಜಕೀಯ ಜೀವನದ ಕುರಿತು ಹೇಳಿಕೊಂಡಿದ್ದಾರೆ.
ಉಡುಪಿಯ ಸಣ್ಣಕ್ಕಿಬೆಟ್ಟು ಎಂಬಲ್ಲಿ ನಡೆದ ಕೇದಾರೋತ್ಥಾನ ಟ್ರಸ್ಟ್​ನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಅವರು ತಮ್ಮ ರಾಜಕೀಯ ಜೀವನದ ಕೆಲವೊಂದು ವಿಚಾರಗಳ ಕುರಿತು ಹೇಳಿಕೊಂಡರು. ಈ ಸಂದರ್ಭದಲ್ಲಿ ಅವರು ತಾವು ರಾಜಕಾರಣದಲ್ಲಿ ಖುಷಿ ಕಂಡಿಲ್ಲ, ರಾಜಕೀಯಕ್ಕೆ ಬರುವ ಇಚ್ಛೆಯೂ ಇರಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ.
ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ, ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ. ಅಷ್ಟಕ್ಕೂ ನನಗೆ ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ. ಜೀವನದಲ್ಲಿ ಕೃಷಿಕನಾಗಿ ಇರಬೇಕು ಎಂದು ಬಯಸಿದ್ದೆ. ಆದರೆ ಹಿರಿಯರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದೇನೆ. ಭಗವಂತ ಕೆಲವೊಮ್ಮೆ ಒಳ್ಳೆಯದು ಬರೆಯುತ್ತಾನೆ, ನನ್ನ ಹಣೆಯಲ್ಲಿ ಒಳ್ಳೆಯದನ್ನು ಬರೆದಿದ್ದಾನೆ ಎಂದು ನಳಿನ್​ಕುಮಾರ್​ ಕಟೀಲ್​ ಹೇಳಿಕೊಂಡಿದ್ದಾರೆ.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಜಿ. ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ರು: ಕಟೀಲ್

ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
