ಗಂಗಾವತಿ:ಇಲ್ಲಿನ ಜುಲಾಯಿನಗರದ ಮುಖ್ಯರಸ್ತೆಯ ಡಿವೈಡರ್​ಗೆ ಅಳವಡಿಸಿರುವ ವಿದ್ಯುತ್ ಕಂಬಗಳಿಗೆ ಹಾಕಿರುವ ಧಾರ್ವಿುಕ ಸಂಕೇತ ಗೊಂದಲ ಸೃಷ್ಟಿಸಿದ್ದು, ಒಂದೇ ದಿನದಲ್ಲಿ ತಾಲೂಕಾಡಳಿತದಿಂದ ಎರಡು ಆದೇಶ ಹೊರಬಿದ್ದಿರುವುದು ಸಹ ವಿವಾದ ಸೃಷ್ಟಿಸಿದೆ.
ಜುಲಾಯಿನಗರ ರಾಣಾಪ್ರತಾಪ ಸಿಂಹ ವೃತ್ತದಿಂದ ಬಸ್ ನಿಲ್ದಾಣದ ಮಾರ್ಗದ ನೀಲಕಂಠೇಶ್ವರ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ಕೆಕೆಆರ್​ಡಿಬಿಯಿಂದ 12 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 4.40 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಡಿವೈಡರ್ ನಿರ್ಮಾಣ ಮತ್ತು ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆದರೆ ಬೀದಿದೀಪಗಳ ಕಂಬದ ಮೇಲೆ ಒಂದು ಕಡೆ ಗದೆ, ಇನ್ನೊಂದೆಡೆ ಬಿಲ್ಲುಬಾಣವಿದ್ದು, ಮಧ್ಯದಲ್ಲಿ ತಿರುಪತಿ ನಾಮ ಬಳಸಲಾಗಿದೆ. ಬೀದಿದೀಪ ಹಾಕುವಾಗ ನಗರಸಭೆ ಗಮನಕ್ಕೆ ತರದೆ ಕೆಕೆಆರ್​ಡಿಬಿ ಈ ನಿರ್ಧಾರ ತೆಗೆದುಕೊಂಡಿದೆ. ಧಾರ್ವಿುಕ ಸಂಕೇತ ಬಳಕೆಗೆ ಹಿಂದುಪರ ಸಂಘಟನೆಗಳು ಸ್ವಾಗತಿಸಿದೆ. ಆದರೆ, ಎಸ್​ಡಿಪಿಐ ಆಕ್ಷೇಪಿಸಿದ್ದು, ತೆರವಿಗೆ ನಗರಸಭೆಗೆ ಮನವಿ ಪತ್ರ ಸಲ್ಲಿಸಿತ್ತು.
ಗೊಂದಲದ ಆದೇಶ: ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹೆಚ್ಚುತ್ತಿದ್ದಂತೆ ತಾಲೂಕಾಡಳಿತ ಮಧ್ಯಪ್ರವೇಶಿಸಿದ್ದು, 12 ತಾಸಿನಲ್ಲಿ ಎರಡೆರಡು ಆದೇಶ ಹೊರಡಿಸಿದ್ದು ಗೊಂದಲಕ್ಕೆ ಕಾರಣವಾಗಿದೆ. ಪ್ರಕರಣವೀಗ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಪರಿಶೀಲನೆ ಮತ್ತು ಕ್ರಮಕ್ಕಾಗಿ ಆ.28ರಂದು ಡಿಸಿ ಮೌಖಿಕ ಆದೇಶ ನೀಡಿದ್ದಾರೆ. ಇದನ್ನೇ ಉಲ್ಲೇಖವಾಗಿ ಇಟ್ಟುಕೊಂಡ ತಾಲೂಕಾಡಳಿತ ಕೆಐಆರ್​ಡಿಎಲ್ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ನಗರ ಪಿಐಗೆ ಪತ್ರ ಬರೆದಿದೆ. ವಿದ್ಯುತ್ ಕಂಬಗಳ ಮೇಲೆ ಧಾರ್ವಿುಕ ಸಾಂಕೇತಿಕಗಳಿಂದ ಸೌಹಾರ್ದ ಕದಡುವ ಜತೆಗೆ ಶಾಂತಿಭಂಗವಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರಕರಣ ದಾಖಲಿಸಿ, ಕ್ರಮಕೈಗೊಂಡ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಆ.28ರ ರಾತ್ರಿ ಆದೇಶಿಸಿದೆ. ಆದೇಶ ಪತ್ರ ವೈರಲ್ ಆಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಪ್ರಕರಣ ಕೈಬಿಡುವಂತೆ ನಗರ ಠಾಣೆಗೆ ಮತ್ತೊಂದು ತಾಲೂಕಾಡಳಿತ ಆದೇಶ ಹೊರಡಿಸಿದೆ. ಇದೇ ಹಂತದಲ್ಲಿ ಮುಕ್ತಾಯಗೊಳಿಸುವಂತೆಯೂ ಕೋರಲಾಗಿದೆ. ಪ್ರಕರಣ ನಗರ ವ್ಯಾಪ್ತಿಯಲ್ಲಿ ಬರುವುದರಿಂದ ಮತ್ತು ನಗರಸಭೆಯಲ್ಲಿ ತೆಗೆದುಕೊಳ್ಳುವ ಆಧಾರದ ಮೇಲೆ ಕ್ರ ಮ
ಕೈಗೊಳ್ಳಬೇಕಾಗಿರುವುದರಿಂದ ಮೊದಲ ನೀಡಿದ ಆದೇಶ ಪತ್ರವನ್ನು ವಾಪಸು ಪಡೆಯುತ್ತೇವೆ ಎಂದಿರುವ ತಾಲೂಕಾಡಳಿತ ನಿರ್ಣಯ ಗೊಂದಲ ಸೃಷ್ಟಿಸಿದೆ. ಆ.28ರಂದು ನಗರಸಭೆ ತುರ್ತು ಸಭೆಯಲ್ಲಿ ತರಾತುರಿಯಲ್ಲಿ ಚರ್ಚೆಗೀಡಾದ ಈ ವಿಷಯ ತರಾತುರಿಯಲ್ಲಿ ಅನುಮೋದನೆ ಪಡೆದಿದ್ದು, ಗೊಂದಲದ ಆದೇಶ ಹೊರ ಬರಲು ಕಾರಣವಾಗಿದೆ. ಶಾಸಕ ಗಾಲಿ ಜನಾರ್ದನರೆಡ್ಡಿ ಅವರಿಂದ ಒತ್ತಡಕ್ಕೊಳಗಾಗಿರುವ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮತ್ತು ತಹಸೀಲ್ದಾರ್ ಯು.ನಾಗರಾಜ್ ತಲೆದಂಡವಾಗುವ ಸಾಧ್ಯತೆಗಳಿವೆ.
ವಿದ್ಯುತ್ ಕಂಬಗಳ ಮೇಲೆ ಧಾರ್ವಿುಕ ಸಂಕೇತ ಬಳಕೆ ವಿಚಾರ ನಗರಸಭೆ ವ್ಯಾಪ್ತಿಗೆ ಬರಲಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದ್ದರಿಂದ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆದಿದ್ದೇನೆ. ನಗರಸಭೆ ನಿರ್ಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು.
| ಯು.ನಾಗರಾಜ್​ತಹಸೀಲ್ದಾರ್, ಗಂಗಾವತಿ
ಕೆ.ಕವಿತಾಗೆ ಜಾಮೀನು ಪ್ರಶ್ನಿಸಿದ ತೆಲಂಗಾಣ ಸಿಎಂ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 4 =
Remember me
