ಬೆಂಗಳೂರು:ವಿಶ್ವದ ಪ್ರತಿಷ್ಠಿತ ನಗರವಾಗಿ ಬೆಳೆದಿರುವ ಬೆಂಗಳೂರು ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಪರಿಚಯಿಸಲೆಂದು ‘ ನಮ್ಮ ಬೆಂಗಳೂರು ಹಬ್ಬ ‘ ಮಾ.25 ಹಾಗೂ 26ರಂದು ಆಯೋಜಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ‘ನಮ್ಮ ಬೆಂಗಳೂರು ಹಬ್ಬ’ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಬ್ಬನ್ ಪಾರ್ಕ್ ಬೆಳಗ್ಗೆಯಿಂದ ಚಿತ್ರಸಂತೆಯೊಂದಿಗೆ ಶುರುವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಈ ಹಬ್ಬವನ್ನು ಸಂಜೆ ಉದ್ಘಾಟಿಸಲಿದ್ದಾರೆ. 26ರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!
ಈ‌ ಬಾರಿ ಕಬ್ಬನ್ ಪಾರ್ಕ್, ಬಾಲ ಭವನ ಹಾಗೂ ವಿಧಾನಸೌಧದಲ್ಲಿ ನಡೆಯಲಿದೆ. ಮುಂದಿನ ವರ್ಷದಿಂದ ಜನವರಿಯಲ್ಲಿ ಆಯೋಜಿಸಲಿದ್ದು, ಬೆಂಗಳೂರಿನ ಹಲವು‌ ವಾರ್ಡ್ ಗಳನ್ನು ಒಳಗೊಳ್ಳಲಿದೆ ಎಂದರು.
ಬೆಂಗಳೂರಿನ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಜಗತ್ರಿಗೆ ಪರಿಚಯಿಸುವುದು ಹಬ್ಬದ ಮುಖ್ಯ ಉದ್ದೇಶವಾಗಿದೆ. ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ವಿವಿಧ ರಾಜ್ಯಗಳ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿರಲಿವೆ.
ಇದನ್ನೂ ಓದಿ:ತಂದೆ-ತಾಯಿ ವಿಧಿವಶ; 20 ವರ್ಷದಿಂದ ಮನೆಯಲ್ಲೇ ಬಂಧಿಯಾದ ಅಣ್ಣ-ತಂಗಿ!
ಹೋಟೆಲ್ ನಲ್ಲಿ ತಿಂಡಿ, ಊಟಕ್ಕೆ ರಿಯಾಯಿತಿ:ಬೆಂಗಳೂರು ಹಬ್ಬದ ನಿಮಿತ್ತ ಮೂರು ದಿನಗಳ ಕಾಲ ಶೇಕಡ 10ರ ರಿಯಾಯಿತಿ ದರದಲ್ಲಿ ತಿಂಡಿ, ಊಟ ನೀಡಲು ಬೆಂಗಳೂರಿನ ಹೋಟೆಲ್ ಮಾಲೀಕರು ಒಪ್ಪಿದ್ದಾರೆ.
ಇದನ್ನೂ ಓದಿ:VIDEO | ನ್ಯೂಸ್‌ ಓದುತ್ತಲೇ ದಿಢೀರ್‌ ಕುಸಿದು ಬಿದ್ದ ನಿರೂಪಕಿ..!
ಪುತ್ಥಳಿಗಳ ಅನಾವರಣ:ವಿಧಾನಸೌಧ ಮುಂಬದಿ ಆವರಣದಲ್ಲಿ ನಿರ್ಮಿಸಿರುವ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾ.26ರ ಬೆಳಗ್ಗೆ ನಡೆಯಲಿದ್ದು, ನಂತರ ನಾಡಿನ ಪ್ರಸಿದ್ಧ ಸಂಗೀತಗಾರರಿಂದ ಗಾಯನ ಕಾರ್ಯಕ್ರಮ ಹಾಗೂ ಪ್ರಭಾತ್ ಕಲಾವಿದರಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆರ್.ಅಶೋಕ್ ಹೇಳಿದರು.
ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ; 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + four =
Remember me
