ಗಿರೀಶ್ ಗರಗಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗಳಿಗೆ ವೇಗ ನೀಡುತ್ತಿರುವ ಬಿಎಂಆರ್​ಸಿಎಲ್, ಇದೀಗ ಮೆಟ್ರೋ ರೈಲು ದುರಸ್ತಿ ಸೇರಿ ಇನ್ನಿತರ ಕಾರ್ಯಗಳಿಗೆ ಬೇಕಾಗಲಿರುವ ಡಿಪೋಗಳ ನಿರ್ವಣಕ್ಕೂ ಒತ್ತು ನೀಡುತ್ತಿದೆ. ಲಾಕ್​ಡೌನ್​ನಿಂದ ಮೆಟ್ರೋ 2ನೇ ಹಂತದ ಕಾಮಗಾರಿ ಸ್ಥಗಿತಗೊಂಡಿತ್ತು. ಕಳೆದ 15 ದಿನಗಳಿಂದ ಕಾಮಗಾರಿ ಪುನರಾರಂಭಿಸಲಾಗಿದೆ. ಒಟ್ಟು ನಾಲ್ಕು ಡಿಪೋ ನಿರ್ಮಾಣ ಮಾಡಲಾಗುತ್ತಿದ್ದು, ಗುತ್ತಿಗೆದಾರರನ್ನು ನೇಮಿಸಲಾಗಿದೆ. ಕೊತ್ತನೂರು ಡಿಪೋ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಗಡುವು ವಿಸ್ತರಣೆ?
ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಭೂಸ್ವಾಧೀನದಲ್ಲಿನ ವಿಳಂಬ ಸೇರಿ ಇನ್ನಿತರ ಕಾರಣಗಳಿಂದ ಗಡುವನ್ನು ಬದಲಿಸಲಾಗಿದೆ. ಇದೀಗ ಕಾರ್ವಿುಕರ ಕೊರತೆಯಿಂದ ಮತ್ತೊಮ್ಮೆ ಬದಲಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಡಿಪೋ?:ನಾಯಂಡಹಳ್ಳಿ- ಕೆಂಗೇರಿ ಮಾರ್ಗಕ್ಕಾಗಿ ಚಲ್ಲಘಟ್ಟ, ಯಲಚೇನಹಳ್ಳಿ- ಅಂಜನಾಪುರ ಟೌನ್​ಶಿಪ್ ಮಾರ್ಗಕ್ಕಾಗಿ ಅಂಜನಾಪುರದಲ್ಲಿ, ಆರ್.ವಿ. ರಸ್ತೆ- ಬೊಮ್ಮಸಂದ್ರ ಮಾರ್ಗಕ್ಕಾಗಿ ಹೆಬ್ಬಗೋಡಿಯಲ್ಲಿ ಮತ್ತು ಗೊಟ್ಟಿಗೆರೆ-ಐಐಎಂಬಿ – ನಾಗವಾರ ಮಾರ್ಗಕ್ಕಾಗಿ ಕೊತ್ತನೂರಿನಲ್ಲಿ ಡಿಪೋ ನಿರ್ವಿುಸಲಾಗುತ್ತದೆ.
181 ಆಸ್ತಿಗಳು:ನಾಲ್ಕು ಡಿಪೋಗಳ ನಿರ್ವಣಕ್ಕೆ ಸಂಬಂಧಿಸಿದಂತೆ ಒಟ್ಟು 181 ಆಸ್ತಿಗಳ ಅವಶ್ಯಕತೆಯಿತ್ತು. ಅದರಲ್ಲಿ ಕೊತ್ತನೂರು ಡಿಪೋಗೆ 68, ಹೆಬ್ಬಗೋಡಿ ಡಿಪೋಗೆ 58, ಅಂಜನಾಪುರ ಡಿಪೋಗೆ 21 ಮತ್ತು ಚಲ್ಲಘಟ್ಟ ಡಿಪೋ ನಿರ್ವಣಕ್ಕಾಗಿ 34 ಆಸ್ತಿಗಳು ಬೇಕಾಗಿದ್ದವು. ಕೊತ್ತನೂರು ಮತ್ತು ಹೆಬ್ಬಗೋಡಿ ಡಿಪೋಗೆ ಸಂಬಂಧಿಸಿದ ಖಾಸಗಿ ಮತ್ತು ಸರ್ಕಾರಿ ಆಸ್ತಿ ವಶಕ್ಕೆ ಪಡೆಯಲಾಗಿದೆ. ಆದರೆ, ಚಲ್ಲಘಟ್ಟ ಮತ್ತು ಅಂಜನಾಪುರ ಡಿಪೋ ನಿರ್ವಣಕ್ಕೆ 20ಕ್ಕೂ ಹೆಚ್ಚಿನ ಆಸ್ತಿ ವಶಕ್ಕೆ ಪಡೆಯಲು ಕೆಲ ಅಡೆತಡೆಗಳಿವೆ. ಆದರೂ, ಉಳಿದ ಜಾಗದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ.
12.61 ಕೋಟಿ ರೂ. ಉಳಿತಾಯ:ಬಿಎಂಆರ್​ಸಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಕೊತ್ತನೂರು ಡಿಪೋ ನಿರ್ವಣಕ್ಕಾಗಿ 163.44 ಕೋಟಿ ರೂ. ಟೆಂಡರ್ ಮೊತ್ತ ನಿಗದಿ ಮಾಡಿತ್ತು. ಆದರೆ, ಬಿಡ್ ಸಲ್ಲಿಸಿ ಆಯ್ಕೆಯಾಗಿರುವ ನೋಯಿಡಾ ಮೂಲದ ಸಂಸ್ಥೆ 150.83 ಕೋಟಿ ರೂ. ಮೊತ್ತಕ್ಕೆ ನಿರ್ವಿುಸುವುದಾಗಿ ತಿಳಿಸಿದೆ. ಇದರಿಂದ ಬಿಎಂಆರ್​ಸಿಎಲ್​ಗೆ 12.61 ಕೋಟಿ ರೂ. ಉಳಿತಾಯವಾದಂತಾಗಿದೆ. ಗುತ್ತಿಗೆ ಸಂಸ್ಥೆ ಸಮರ್ಪಕ ದಾಖಲೆ ಸಲ್ಲಿಸಿದ ನಂತರ ಕಾರ್ಯಾದೇಶ ನೀಡಿ ಕಾಮಗಾರಿ ಆರಂಭಿಸಲು ಬಿಎಂಆರ್​ಸಿಎಲ್ ಸೂಚಿಸಲಿದೆ.
ಇದನ್ನೂ ಓದಿ:ಸಿಗರೇಟ್ ವಿತರಕನ ಕಾರು ಅಡ್ಡಗಟ್ಟಿ 45 ಲಕ್ಷ ರೂಪಾಯಿ ದರೋಡೆ
42 ಬೋಗಿಗಳು ಸಿದ್ಧ
ಬಿಎಂಆರ್​ಸಿಎಲ್​ನಿಂದ ಹೊಸ ಬೋಗಿಗಳ ಪೂರೈಕೆ ಗುತ್ತಿಗೆ ಪಡೆದಿರುವ ಬಿಇಎಂಎಲ್ ಮುಂದಿನ ತಿಂಗಳು 42 ಬೋಗಿಗಳನ್ನು ಪೂರೈಸುತ್ತಿದೆ. ಮೊದಲ ಹಂತದ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಎಲ್ಲ 50 ರೈಲುಗಳು 6 ಬೋಗಿಗಳನ್ನು ಹೊಂದಿವೆ. ಅದೇ ರೀತಿ 2ನೇ ಹಂತದಲ್ಲಿ ಸಂಚಾರ ಆರಂಭವಾಗಲಿರುವ ಮಾರ್ಗಗಳಲ್ಲೂ ರೈಲುಗಳು 6 ಬೋಗಿ ಹೊಂದಿರಲಿವೆ.
ಕಾಮಗಾರಿಗೆ ಕಾರ್ವಿುಕರ ಕೊರತೆ:ಲಾಕ್​ಡೌನ್ ನಂತರ ಮೆಟ್ರೋ 2ನೇ ಹಂತದ ಕಾಮಗಾರಿಗೆ ವೇಗ ನೀಡಿ ನಿಗದಿತ ಗಡುವಿನಲ್ಲಿ ಪೂರ್ಣ ಗೊಳಿಸಬೇಕೆನ್ನುವ ಬಿಎಂಆರ್​ಸಿಎಲ್ ಉದ್ದೇಶ ಫಲಕಾರಿಯಾಗುವ ಸಾಧ್ಯತೆ ಕಡಿಮೆಯಾಗಿದೆ. ಕಾರ್ವಿುಕರ ಕೊರತೆಯಿಂದಾಗಿ ಕಾಮಗಾರಿ ನಿಗದಿಗಿಂತ ಕನಿಷ್ಠ 6 ತಿಂಗಳು ವಿಳಂಬವಾಗಲಿದೆ.  72 ಕಿ.ಮೀ. ಉದ್ದದ ಮಾರ್ಗಗಳು, 61 ನಿಲ್ದಾಣಗಳ ನಿರ್ವಣಕ್ಕೆ ಸಂಬಂಧಿಸಿದಂತೆ ಬಿಎಂಆರ್​ಸಿಎಲ್​ಗೆ 9 ಸಾವಿರಕ್ಕೂ ಹೆಚ್ಚಿನ ಕಾರ್ವಿುಕರ ಅವಶ್ಯಕತೆ ಇದೆ. ಆದರೆ, ಲಾಕ್​ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾಗಿದ್ದ 3,500 ವಲಸೆ ಕಾರ್ವಿುಕರು ತಮ್ಮ ಊರುಗಳತ್ತ ತೆರಳಿದ್ದಾರೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಯಲಚೇನ ಹಳ್ಳಿ- ಅಂಜನಾಪುರ ಟೌನ್​ಶಿಪ್ ಮಾರ್ಗ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ನಾಯಂಡಹಳ್ಳಿ- ಕೆಂಗೇರಿ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ನೀಡುವುದಾಗಿ ಬಿಎಂಆರ್​ಸಿಎಲ್ ಈ ಹಿಂದೆ ಘೋಷಿಸಿತ್ತು. ಆದರೆ, ಅದು ಸಾಧ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಮಂಟಪ ಗ್ರಾಮದ ಸುತ್ತಮುತ್ತ ಭಾರಿ ಶಬ್ದ: ಆತಂಕ ನಿವಾರಣೆಗೆ ಮುಂದಾಗುತ್ತಿಲ್ಲ ಸರ್ಕಾರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + twelve =
Remember me
