ಬೆಂಗಳೂರು:ಇನ್ನು ಮುಂದೆ ಮೆಟ್ರೋ ಪ್ರಯಾಣಿಕರು ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಹೌದು, ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಪ್ರಯಾಣಿಕರಿಗಾಗಿ ನಮ್ಮ ಮೆಟ್ರೋ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಇದನ್ನು ಎಲ್ಲರೂ ಬಳಕೆ ಮಾಡಿಕೊಳ್ಳಿ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಸಮಯ ಉಳಿತಾಯ ಹಾಗೂ ಚಿಲ್ಲರೆ ಸಮಸ್ಯೆಯನ್ನು ದೂರ ಮಾಡುವ ಉದ್ಧೇಶದಿಂದ ನಮ್ಮ ಮೆಟ್ರೋ ಕ್ಯೂ ಆರ್​ ಕೋಡ್ ಮೂಲಕ ಒಳ ಬರುವ ಮತ್ತು ಹೊರ ಹೋಗುವ (Entry & Exit) ಅವಕಾಶ ಕಲ್ಪಿಸುತ್ತಿದೆ.
ಇನ್ನು ಮುಂದೆ ಮೆಟ್ರೋ ಪ್ರಯಾಣಿಕರು ‘ನಮ್ಮ ಮೆಟ್ರೋ ಆಪ್’ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ನಂತರ ಎಂಟ್ರಿ ಗೇಟ್​ನಲ್ಲಿ ಸ್ಕ್ಯಾನ್ ಮಾಡಿ ಒಳ ಪ್ರವೇಶ ಪಡೆಯಬಹುದಾಗಿದೆ.
ವಾಟ್ಸ್​​ಆ್ಯಪ್​ ಮೂಲಕವೂ ಟಿಕೆಟ್ ಖರೀದಿಸಬಹುದು
BMRCLನ ಅಧಿಕೃತ ವಾಟ್ಸ್​​ಆ್ಯಪ್ ನಂ. 810 555 66 77 ಮೊದಲು ‘ಹಾಯ್’ ಎಂದು ಮೆಸೇಜ್ ಮಾಡಿ, QR ಟಿಕೆಟ್‌ಗಳನ್ನು ಖರೀದಿಸಬಹುದು. ವಾಟ್ಸ್​​ಆ್ಯಪ್ ಚಾಟ್​​ ಮೂಲಕ ಪಡೆದುಕೊಳ್ಳುವ ಟಿಕೆಟ್​ಗೆ WhatsApp UPI ಹಣ ಪಾವತಿ ಮಾಡಬಹುದು. ಆಂಡ್ರಾಯ್ಡ್ ಮತ್ತು ಐಓಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿದೆ.
Namma Metro is happy to give additional facility for commuters- QR Code based Single Journey Metro Travel Tickets can be downloaded from WhatsApp from 1st Nov 2022. Commuters are requested to make use of this facilitypic.twitter.com/4j6oeDMopb— ನಮ್ಮ ಮೆಟ್ರೋ (@cpronammametro)October 31, 2022
Namma Metro is happy to give additional facility for commuters- QR Code based Single Journey Metro Travel Tickets can be downloaded from WhatsApp from 1st Nov 2022. Commuters are requested to make use of this facilitypic.twitter.com/4j6oeDMopb
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 12 =
Remember me
