ಬೆಂಗಳೂರು:ನಾಗವಾರ ಬಳಿ ರಸ್ತೆ ಮೇಲೆ ‘ನಮ್ಮ ಮೆಟ್ರೋ’ ಪಿಲ್ಲರ್​ ಕುಸಿದು ದುರ್ಘಟನೆಯಲ್ಲಿ ತಾಯಿ-ಮಗು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್​ಸಿಎಲ್ ಎಂಡಿ ಅಜುಂ ಪರ್ವೇಜ್, ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಕೂಡ ಘೋಷಿಸಿದ್ದಾರೆ.
ಇದನ್ನೂ ಓದಿ:‘ನಮ್ಮ ಮೆಟ್ರೋ’ ಪಿಲ್ಲರ್​ ದುರಂತ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ
ಬೈಕ್​ ಮೇಲೆ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ವೇಳೆ ಪಿಲ್ಲರ್​ ಕುಸಿದು ಬಿದ್ದಿದೆ. ಆದರೆ ಇದರಲ್ಲಿ ತಂದೆ ಮತ್ತು ಮಗಳು ಬಚಾವಾಗಿ ಉಳಿದಿರುವುದೇ ಅದೃಷ್ಟದಿಂದ ಎಂದು ಹೇಳಬಹುದು.
ಲೋಹಿತ್​ ಮತ್ತು ಕುಟುಂಬ, ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಾ ಇದ್ದರು. ಪ್ಯಾಷನ್​ ಪ್ರೋ ಬೈಕಿನ ಮೇಲೆ ನಾಲ್ವರು ಪ್ರಯಾಣಿಸುತ್ತಿದ್ದರು. ಈ ಸಂದರ್ಭ, ಮಗಳನ್ನು ಬೈಕಿನ ಟ್ಯಾಂಕ್​ ಮೇಲೆ ಲೋಹಿತ್​ ಕೂರಿಸಿದ್ದ. ಹಿಂದಿನ ಸೀಟಿನಲ್ಲಿ ಮಡದಿ ಹಾಗೂ ಮಗನನ್ನು ಕೂರಿಸಿ ತಾನೇ ಬೈಕ್​ ಚಲಾಯಿಸುತ್ತಿದ್ದ. ಹೀಗೆ ಪ್ಯಾಷನ್​ ಪ್ರೋ ಬೈಕಿನ ಮೇಲೆ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು.
ಇವರು ಪ್ರಯಾಣಿಸುತ್ತಾ ಪಿಲ್ಲರ್ ಬಳಿಯಿಂದ ಪಾಸ್​ ಆಗಿದ್ದಾರೆ. ಹಾಗೆ ಹೋಗುವಾಗ ಬೈಕ್ ಹಿಂದಿನ ಸೀಟಿನ ಮೇಲೆ ಪಿಲ್ಲರ್ ಬಿದ್ದಿದೆ. ನೇರವಾಗಿ ಲೋಹಿತ್ ಮಗ ಮತ್ತು ಆತನ ಪತ್ನಿ ಮೇಲೆ ಪಿಲ್ಲರ್ ಬಿದ್ದಿದೆ. ಇದರಿಂದಾಗಿ ಬೈಕ್​ ಒಮ್ಮಿಂದೊಮ್ಮೆಲೆ ಎಡಗಡೆಗೆ ಬಿದ್ದಿದೆ. ಈ ಸಂದರ್ಭ, ತಾಯಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿತ್ತು. ಬೈಕಿನ ಮುಂದೆ ಇದ್ದ ಲೋಹಿತ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಂದೆ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − three =
Remember me
