ಬೆಂಗಳೂರು:ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ ವೇಗ ನೀಡಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೂ ಒತ್ತು ನೀಡಲಾಗುತ್ತಿದೆ. ಅದರಂತೆ ಬೈಯಪ್ಪನಹಳ್ಳಿ – ವೈಟ್​ಫೀಲ್ಡ್​ ಮಾರ್ಗದಲ್ಲಿನ ಎರಡು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ.
ನಗರದ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ಸಲುವಾಗಿ ಬಿಎಂಆರ್​ಸಿಎಲ್ ಮೆಟ್ರೋ 2ನೇ ಹಂತದ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಂತೆ ಈಗಾಗಲೆ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅದರಂತೆ ಬೈಯಪ್ಪನಹಳ್ಳಿ- ವೈಟ್​ಫೀಲ್ಡ್​ ಮಾರ್ಗದಲ್ಲಿನ ಜ್ಯೋತಿಪುರ, ಕೆ.ಆರ್. ಪುರ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ. ಅದರ ಜತೆಗೆ ವಿಮಾನನಿಲ್ದಾಣದ ಮಾರ್ಗದ ಕಾಮಗಾರಿಯೂ ಅಲ್ಲಿ ನಡೆಯಲಿದೆ. ಅದಕ್ಕಾಗಿ ಟಿನ್ ಫ್ಯಾಕ್ಟರಿ ಸೇರಿ ಇನ್ನಿತರ ಕಡೆಗಳಲ್ಲಿ 2 ದೇವಾಲಯ ಸೇರಿ 74 ಕಟ್ಟಡಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಅದರಲ್ಲಿ ಈಗಾಗಲೇ 24 ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ನಗ, ನಗದು ಹಣ ದೋಚಿದವರ ಸೆರೆ
ಆ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಶೀಘ್ರದಲ್ಲಿ ಆರಂಭಿಸಲಾಗುತ್ತಿದೆ. ಉಳಿದ 50 ಕಟ್ಟಡಗಳನ್ನು ವಶಕ್ಕೆ ಪಡೆಯುವ ಕಾರ್ಯಕ್ಕೆ ಬಿಎಂಆರ್​ಸಿಎಲ್ ಮುಂದಾಗಿದೆ. ಆ ಕಟ್ಟಡಗಳ ವಶಕ್ಕೆ ಸಂಬಂಧಿಸಿದಂತೆ ಕೆಲವೊಂದು ತೊಡಕುಂಟಾಗಿದ್ದು, ಅದನ್ನು ಬಗೆಹರಿಸಲು ಕಟ್ಟಡ ಮಾಲೀಕರ ಜತೆಗೆ ರ್ಚಚಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:‘ನೀವು ಬುಕ್​ ಮಾಡಿದ ಬಟ್ಟೆ ಸ್ಟಾಕ್​ ಇಲ್ಲ, ಓಟಿಪಿ ಹೇಳಿ ಅಕೌಂಟ್ ನೋಡ್ಕೊಳ್ಳಿ..’ಎಂದು ಯುವತಿಯ ವಂಚಿಸಿದ್ರು!
11,200 ಚದರ ಮೀ. ಭೂಮಿ ಬೇಕು:ಕಾಮಗಾರಿಗಾಗಿ 11,200 ಚದರ ಮೀಟರ್ ಭೂಮಿ ಅಗತ್ಯವಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಕಟ್ಟಡಗಳನ್ನು ವಶಕ್ಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತೆರವು ಮಾಡಬೇಕಿರುವ ದೇವಾಲಯಗಳ ಟ್ರಸ್ಟಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತೆರವಿಗೆ ಸಹಕರಿಸುತ್ತಿದ್ದಾರೆ. ದೇವಾಲಯಗಳಿಗೆ ಪರಿಹಾರ ರೂಪದಲ್ಲಿ ಹಣ ಪಾವತಿಸಲಾಗಿದೆ. ಅದರಂತೆ 1,057 ಚದರ ಮೀ. ಭೂಮಿಯಲ್ಲಿನ ಮನೆ ಹಾಗೂ ಮುತ್ಯಾಲಮ್ಮ ದೇವಾಲಯ ವಶಕ್ಕೆ ಪಡೆಯಲಾಗಿದೆ. ಅದಕ್ಕೆ 6.85 ಕೋಟಿ ರೂ. ಪರಿಹಾರ ನೀಡಲಾಗಿದೆ. ಅದೇ ರೀತಿ ಅಲ್ಲಿರುವ ಓಂ ಶಕ್ತಿ ದೇವಾಲಯ ಮತ್ತು ಇತರ ಕಟ್ಟಡಗಳಿರುವ 259.36 ಚದರ ಮೀ. ಭೂಮಿಯನ್ನು ವಶಕ್ಕೆ ಪಡೆಯುವುದು ಬಾಕಿಯಿದೆ. ಅದಕ್ಕಾಗಿ ದೇಗುಲಕ್ಕೆ 2.25 ಕೋಟಿ ರೂ. ಪರಿಹಾರ ನೀಡಲಾಗಿದೆ ಹಾಗೂ ದೇವಾಲಯವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
16ರಿಂದ ಮೆಟ್ರೋ ರೈಲು ಸಂಚಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
