ಬೆಂಗಳೂರು:ನಮ್ಮ ಮೆಟ್ರೋ ಸಿಬ್ಬಂದಿ ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ಅಸಭ್ಯ ವರ್ತನೆ ತೋರಿರುವಂತಹ ಘಟನೆ ನಗರದ ಜಾಲಹಳ್ಳಿ ಮೆಟ್ರೋ ಪ್ಲ್ಯಾಟ್​ಫಾರ್ಮ್​ನಲ್ಲಿ ನಡೆದಿದೆ. ಈ ಘಟನೆ ಹಿನ್ನೆಲೆ  ಮೆಟ್ರೋ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ
ಮೆಟ್ರೋ ಸಿಬ್ಬಂದಿ ಓರ್ವ ಪ್ಲಾಟ್‌ಫಾರಂನ ಎದುರು ಭಾಗದಲ್ಲಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿಕೊಂಡು ದುರ್ವರ್ತನೆ ತೋರಿದ್ದಾನೆ. ಕೆಲವು ಸನ್ನೆಗಳನ್ನು ಮಾಡುತ್ತ ನಿರಂತರವಾಗಿ ನನ್ನನ್ನು ದಿಟ್ಟಿಸಿ ನೋಡುತ್ತಿರುವಂತಹ ಅನುಭವ ನನಗೆ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಉಂಟಾಗಿದೆ.  ನಾನು ಆತನನ್ನು ಪ್ರಶ್ನೆ ಮಾಡಿದೆ. ಆದರೆ ಆತ ಕೆಲವು ಸನ್ನೆಗಳನ್ನು ಮಾಡುವ ಮೂಲಕ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. ಹಾಗಾಗಿ ನಾನು ವಿಡಿಯೋ ಮಾಡಲು ಆರಂಭಿಸಿದ ಬಳಿಕ ಅವನು ಅಲ್ಲಿಂದ ಹೊರಟು ಹೋದ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಮೆಟ್ರೋ ಸಿಬ್ಬಂದಿಯೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಜಾಲಹಳ್ಳಿ ಮೆಟ್ರೋ ಸ್ಟೇಷನ್​ನಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಮುಂದೆ ಖಾಸಗಿ ಅಂಗ ಸ್ಪರ್ಶ ಮಾಡಿಕೊಂಡು ದುರ್ವರ್ತನೆ ತೋರಿದ್ದಾನೆ. ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.#Bengaluru#nammametro#Jalahallipic.twitter.com/9h4UMRGzVC
— Harshith Achrappady (@HAchrappady)March 20, 2024

ಈ ಕುರಿತಾಗಿ ಮೆಟ್ರೋ ಮೇಲಧಿಕಾರಿಗಳಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಆದರೆ ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಜಾಲಹಳ್ಳಿ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
In response to the Jalahalli incident complaint , the said security guard is placed under suspension pending detailed investigation. Any action detrimental to safety and security of women passengers, BMRCL has a zero tolerance policy. FKI
— ನಮ್ಮ ಮೆಟ್ರೋ (@OfficialBMRCL)March 20, 2024

ಈ ಘಟನೆಯ ವಿಡಿಯೋದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲ್​ ಮಾಡಿರುವ ಮಹಿಳೆ ‘ನಾನು ಇಲ್ಲಿ ಸುರಕ್ಷಿತಳಲ್ಲ ಎಂಬಂತೆ ಭಾಸವಾಗುತ್ತಿದೆ’ ಎಂದಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ದೂರು ದಾಖಲಾಗುತ್ತಿದ್ದಂತೆ ನಮ್ಮ ಮೆಟ್ರೋ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ತೂಕ ಇಳಿಸಿಕೊಳ್ಳಲು ಅನಂತ್ ಅಂಬಾನಿ ಏನು ತಿನ್ನುತ್ತಾರೆ ಗೊತ್ತಾ?

ಅಪ್ಪು​ ಜತೆ “ವೀರ ಕನ್ನಡಿಗ” ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ನೋಡಿ…..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 9 =
Remember me
