|ನವೀನ್ ಬಿಲ್ಗುಣಿಶಿವಮೊಗ್ಗ
ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇದೀಗ ರಾಜ್ಯದೆಲ್ಲೆಡೆ ಕೆರೆಗಳ ಪುನಶ್ಚೇತನಕ್ಕೆ ನಾಂದಿ ಹಾಡಿದೆ. ವರ್ಷದಿಂದ ವರ್ಷಕ್ಕೆ ರೈತರ ಸಹಭಾಗಿತ್ವದಲ್ಲೇ ನೂರಾರು ಕೆರೆಗಳ ಹೂಳು ತೆಗೆಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಿದೆ. ಪ್ರಸಕ್ತ ವರ್ಷವೇ 500ಕ್ಕೂ ಹೆಚ್ಚು ಕೆರೆಗಳ ಪುನಶ್ಚೇತನಗೊಳಿಸುವ ಮೂಲಕ ‘ನಮ್ಮೂರು-ನಮ್ಮ ಕೆರೆ’ ಯೋಜನೆ ರಾಜ್ಯಾದ್ಯಂತ ಫಲಪ್ರದವಾಗಿದೆ.
ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದೂರದೃಷ್ಟಿಯಿಂದ ಆರಂಭವಾದ ಯೋಜನೆ ಇದೀಗ ಗ್ರಾಮೀಣ ಭಾಗದಲ್ಲಿ ಮನೆಮಾತಾಗಿದೆ. ರೈತರಿಂದ ನಯಾಪೈಸೆ ನಿರೀಕ್ಷಿಸದೆ ಪಳೆಯುಳಿಕೆಯಂತಿರುವ ನೂರಾರು ಕೆರೆಗಳಿಗೆ ಮರುಜೀವ ನೀಡುತ್ತಿದ್ದು ಯಂತ್ರಗಳ ಮೂಲಕ ಹೂಳು ತೆಗೆಸಿ ರೈತರ ಹೊಲ, ಜಮೀನುಗಳ ಫಲವತ್ತತೆ ಹೆಚ್ಚಳಕ್ಕೂ ಮುನ್ನುಡಿ ಬರೆಯಲಾಗಿದೆ.
ಇದನ್ನೂ ಓದಿ:ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!
ಯೋಜನೆಯು ರಾಜ್ಯದ 575 ಕೆರೆಗಳ ಅಭಿವೃದ್ಧಿಗೆ ಗುರಿ ಹಾಕಿಕೊಂಡಿತ್ತು. ತಾಲೂಕಿಗೊಂದು ಕೆರೆಯನ್ನು ಕೈಗೆತ್ತಿಕೊಂಡಿದ್ದು ಪ್ರಸ್ತುತ 525ಕ್ಕೂ ಅಧಿಕ ಕೆರೆಗಳ ಅಭಿವೃದ್ಧಿ ಪೂರ್ಣಗೊಂಡಿದೆ. ಮಾರ್ಚ್ ಅಂತ್ಯದೊಳಗೆ ಗುರಿ ಮುಟ್ಟಲಿದೆ. 39.59 ಕೋಟಿ ರೂ. ವೆಚ್ಚದಲ್ಲಿ ಹಾಲಿ 149.17 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ಕೆರೆಗಳಿಂದ ತೆಗೆಯಲಾಗಿದೆ. ಪರಿಣಾಮ 340.01 ಗ್ಯಾಲನ್ ಹೆಚ್ಚುವರಿ ನೀರು ಸಂಗ್ರಹವಾಗುತ್ತಿದೆ. 1.54 ಲಕ್ಷ ಎಕರೆ ಕೃಷಿ ಭೂಮಿ ಫಲವತ್ತತೆ ಆಗುವಂತೆ ಮಾಡಿದ್ದು 2.47 ಲಕ್ಷ ರೈತ ಕುಟುಂಬಗಳು ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿವೆ. ಅಷ್ಟೇ ಅಲ್ಲದೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನೆರವಿನೊಂದಿಗೆ 127 ಎಕರೆ ಕೆರೆ ಒತ್ತುವರಿಯನ್ನೂ ತೆರವುಗೊಳಿಸಿದ ಸಾಧನೆ ಮಾಡಿದೆ.
ರಾಜ್ಯದಲ್ಲಿ 35 ಸಾವಿರಕ್ಕೂ ಅಧಿಕ ಕೆರೆಗಳಿದ್ದು ಸಂಘವು ಪ್ರತಿ ವರ್ಷ ತಾಲೂಕಿಗೊಂದು ಕೆರೆ ಆಯ್ದುಕೊಂಡು ರೈತರ ಸಹಕಾರದೊಂದಿಗೆ ಹೂಳೆತ್ತುವ ಕಾಯಕ ಮಾಡುತ್ತಿದೆ.
ಧರ್ಮಸ್ಥಳ ಸಂಘದಿಂದ ತಾಲೂಕಿಗೊಂದ ರಂತೆ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಕೃಷಿಕರಿಗೆ ಅನುಕೂಲವಾಗುತ್ತಿದೆ. ನೀರು ಸಂಗ್ರಹದ ಜತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತಿದೆ. ಹೂಳು ಜಮೀನಿನ ಫಲವತ್ತತೆ ಹೆಚ್ಚಿಸುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಆಗುತ್ತಿದ್ದು ಧರ್ವಧಿಕಾರಿಗಳ ಕನಸು ಸಾಕಾರಗೊಳ್ಳುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರೈತರಿಂದ ಬೇಡಿಕೆ ಬರುತ್ತಿದೆ.
|ಜೆ.ಚಂದ್ರಶೇಖರ್ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿವಮೊಗ್ಗ ಜಿಲ್ಲಾ ನಿರ್ದೇಶಕ
ಕೆರೆಗಳ ಹೂಳು ತೆಗೆಸುವ ಜತೆಗೆ ಜಿಲ್ಲೆಗೊಂದು ಮಾದರಿ ಕೆರೆ ನಿರ್ವಣಕ್ಕೂ ಸಂಸ್ಥೆ ಒತ್ತು ನೀಡುತ್ತಿದೆ. 2022-23ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 11 ಕೆರೆಗಳ ಹೂಳು ತೆಗೆಸುವ ಜತೆಗೆ ಕೆರೆ ಏರಿ ಅಭಿವೃದ್ಧಿ ಮಾಡಲಾಗುತ್ತಿದೆ. ಮೂರು ಕೆರೆಗಳು ಮಾತ್ರ ಬಾಕಿ ಇದ್ದು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.
|ಪಿ.ಡಿ. ಗಣಪತಿಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂಜಿನಿಯರ್
ರೈತರ ಸಹಭಾಗಿತ್ವ:ಪ್ರತಿ ವರ್ಷ ಹೂಳು ತುಂಬಿಕೊಂಡು ಕೆರೆಗಳ ವಿಸ್ತೀರ್ಣದ ಜತೆಗೆ ನೀರಿನ ಸಂಗ್ರಹವೂ ಕಡಿಮೆ ಆಗುತ್ತಿದೆ. ಇನ್ನು ಕೆಲವೆಡೆ ಒತ್ತುವರಿಯಿಂದ ಸಣ್ಣಪುಟ್ಟ ಕೆರೆಗಳು ಕಣ್ಮರೆಯಾಗುತ್ತಿವೆ. ಧರ್ಮಸ್ಥಳ ಸಂಘವು ಸರ್ಕಾರದ ನೆರವಿನ ಬದಲು ರೈತರ ಸಹಭಾಗಿತ್ವದಲ್ಲಿ ಹೂಳು ತೆಗೆಸುತ್ತಿದೆ. ಕನಿಷ್ಠ 2 ಎಕರೆಯಿಂದ ಗರಿಷ್ಠ 25 ಎಕರೆ ವಿಸ್ತೀರ್ಣದ ಕೆರೆಗಳ ಹೂಳನ್ನು ರೈತರ ಸಹಭಾಗಿತ್ವದಲ್ಲೇ ತೆಗೆಸಲಾಗಿದೆ.

ನಮ್ಮೂರು-ನಮ್ಮ ಕೆರೆ ಯೋಜನೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದವಾಗಿದೆ. ನೀರಿಲ್ಲದೆ ಅನಾಥವಾಗಿದ್ದ ಕೆರೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ. ಕೆರೆ ಹೂಳು ತೆಗೆಸಿ ರೈತರಿಗೆ ಅನುಕೂಲ ಮಾಡಿಕೊಡುವ ಜತೆಗೆ ಸಕಲ ಜೀವರಾಶಿಗಳಿಗೂ ನೀರು ಸಿಗುವಂತೆ ಮಾಡುತ್ತಿರುವುದು ಮಹತ್ತರ ಕಾರ್ಯ.
|ನಾಗರಾಜ ಶೆಟ್ಟಿಹುತ್ತಳ್ಳಿ ಗ್ರಾಮದ ರೈತ (ತೀರ್ಥಹಳ್ಳಿ)
ಪ್ರತಿ ಕೆರೆಗೆ 15 ಲಕ್ಷ ರೂ. ವೆಚ್ಚ:ಪ್ರತಿ ಕೆರೆಗೆ 10ರಿಂದ 15 ಲಕ್ಷ ರೂ.ವರೆಗೂ ವೆಚ್ಚ ತಗುಲುತ್ತಿದೆ. ಹೂಳು ತೆಗೆಸಲು ಯಂತ್ರಗಳ ಮೊರೆ ಹೋಗಿದ್ದು ಜೆಸಿಬಿ, ಹಿಟಾಚಿಗಳಿಗೆ ತಗುಲುವ ವೆಚ್ಚವನ್ನು ಧರ್ಮಸ್ಥಳ ಸಂಘವೇ ಭರಿಸಲಿದೆ. ಟ್ರ್ಯಾಕ್ಟರ್ ಅಥವಾ ಟಿಪ್ಪರ್​ಗಳ ಬಾಡಿಗೆಯನ್ನು ಮಾತ್ರ ರೈತರು ಭರಿಸಿಕೊಳ್ಳಬೇಕಿದೆ. ಕಣ್ಮರೆಯಾಗುತ್ತಿರುವ ಕೆರೆಗಳನ್ನು ಉಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ತಾಲೂಕಿಗೊಂದು ಕೆರೆ, ಮಾದರಿ ಕೆರೆಗಳ ನಿರ್ವಣಕ್ಕೆ ಒತ್ತು ನೀಡಲಾಗುತ್ತಿದೆ. ಇದು ರೈತರಿಗೂ ಸಾಕಷ್ಟು ಲಾಭವಾಗುತ್ತಿದೆ. ಜಮೀನುಗಳಿಗೆ ಮಣ್ಣು ದೊರೆಯುತ್ತಿದ್ದು ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten − 1 =
Remember me
