
ಬೆಂಗಳೂರು:ಆಂಧ್ರಶೈಲಿಯ ನಾನ್ವೆಜ್ ರೆಸ್ಟೋರೆಂಟ್ ನಂದನ ಪ್ಯಾಲೇಸ್ ತನ್ನ 25ನೇ ಶಾಖೆಯ ರೆಸ್ಟೋರೆಂಟ್‌ನ್ನು ದೇವನಹಳ್ಳಿಯಲ್ಲಿ ಪ್ರಾರಂಭಗೊಂಡಿದೆ.ಖ್ಯಾತ ನಟ ಡಾ.ರಮೇಶ್ ಅರವಿಂದ್ ಅವರು ಹೋಟೆಲ್ ಉದ್ಘಾಟಿಸಿ ಮಾತನಾಡಿ, ಈ ಹೋಟೆಲ್ ವಿಶ್ವಾಸರ್ಹತೆಗೆ ಹೆಸರುವಾಸಿಯಾಗಿದೆ ಎಂದರು.ನಂದನ ಪ್ಯಾಲೇಸ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ, ಡಾ. ಆರ್.ರವಿಚಂದರ್ ಮಾತನಾಡಿ, ಗ್ರಾಹಕರು ನಮ್ಮ ಹೊಟೇಲ್ ಮೇಲಿಟ್ಟಿರುವ ವಿಶ್ವಾಸ ಮತ್ತು ನಂಬಿಕೆಯಿಂದಾಗಿ ನಾವು ಹೊಸ ಶಾಖೆಯನ್ನು ತೆರೆಯಲು ಅನುಕೂಲವಾಗುತ್ತಿದೆ ಎಂದರು.ಇದು ನಮ್ಮ 25ನೇ ಶಾಖೆಯಾಗಿದೆ. 1989 ರಿಂದ ನಾನು ಈ ಆಹಾರೋದ್ಯಮ ಕ್ಷೇತ್ರದಲ್ಲಿದ್ದೇನೆ. ನಮ್ಮಲ್ಲಿ ಮಟನ್ ಪೆಪ್ಪರ್ ಫ್ರೈ, ಗೀ ರೋಸ್ಟ್, ಫ್ರಾನ್ಸ್ ಫ್ರೈ, ಚಿಕನ್ ಬಿರಿಯಾನಿ ಸೇರಿದಂತೆ ಹಲವಾರು ಖಾದ್ಯಗಳು ಹೆಚ್ಚು ಫೇಮಸ್ ಆಗಿದೆ ಎಂದರು.ಗ್ರಾಹಕರಿಗೆ ನಾವು ಗುಣಮಟ್ಟವಾದ ರುಚಿಕರವಾದ ಖಾದ್ಯಗಳನ್ನು ನೀಡುತ್ತಿದ್ದೇವೆ. ಗ್ರಾಹಕರ ಬೇಡಿಕೆ ಅನುಗುಣವಾಗಿ ಶಾಖೆಯ ವಿಸ್ತರಣೆ ಮಾಡುತ್ತಿದ್ದೇವೆ ಎಂದರು.ಈ ವೇಳೆ ಜಮೀನುದಾರ ಕೆ.ಚನ್ನಮ್ಮ ಮತ್ತು ಪಾಪಣ್ಣ, ಉದ್ಯಮಿಗಳಾದ ಅಡ್ಯಾರ್ ಆನಂದ ಭವನ ವ್ಯವಸ್ಥಾಪಕ ನಿರ್ದೇಶಕರಾದ ಕೆ ಟಿ ವೆಂಕಟೇಶ್ ರಾಜ ಮತ್ತು ಕೆ ಟಿ ಶ್ರೀನಿವಾಸ ರಾಜ, ಸಂಗೀತ ಮೊಬೈಲ್ ಅಧ್ಯಕ್ಷ ಸುಭಾಷ್ ಚಂದ್ರ ಮತ್ತು ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್ ಎನ್ ವಿ ಎಲ್ ನರಸಿಂಹರಾಜು ಇತರರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 18 =
Remember me
