ಚಿಕ್ಕಬಳ್ಳಾಪುರ:ಪ್ರವಾಸಿಗರು, ಪ್ರೇಮಿಗಳ ಹಾಟ್​​ ಸ್ಪಾಟ್​​ ಆಗಿದ್ದ ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು ಮಾಡಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು ಮಾಡಿ ಶನಿವಾರ-ಭಾನುವಾರ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಆನ್​​ಲೈನ್ ಹಾಗೂ ಆಫ್​​ಲೈನ್ ಮೂಲಕ ಟಿಕೆಟ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂದರೆ ವೀಕೆಂಡ್​​​ನಲ್ಲಿ ಒಂದು ದಿನ ಹಿಂದೆಯೇ ಟಿಕೆಟ್ ಕಾಯ್ದಿರಿಸಬೇಕು.
ಶೇ.50 ರಷ್ಟು ಟಿಕೆಟ್ ಆನ್​​ಲೈನ್ ಮೂಲಕ ಬುಕ್ಕಿಂಗ್​​ಗೆ ಅವಕಾಶ ನೀಡಲಾಗಿದೆ. ಕೆಎಸ್​​​ಟಿಡಿಸಿ ಸಂಸ್ಥೆಯ ಅಂತರ್ಜಾಲ ತಾಣದ ಮೂಲಕ ಬುಕ್ಕಿಂಗ್ ಮಾಡಬಹುದು. ಉಳಿದ ಶೇ.50 ರಷ್ಟು ಟಿಕೆಟ್ ಆಫ್​​ಲೈನ್ ಮೂಲಕ‌ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ವೀಕೆಂಡ್​​ನಲ್ಲಿ 1000 ಬೈಕ್ 300 ಲಘು ವಾಹನಗಳಾದ ಮಿನಿ ಬಸ್, ಕಾರು, ಆಟೋಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕಿಲ್ಲ ಪ್ರವೇಶ ; ಪ್ರವಾಸಿ ತಾಣದ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 4 =
Remember me
