ಚಿಕ್ಕಬಳ್ಳಾಪುರ: ಪ್ರವಾಸಿ ತಾಣ ನಂದಿ ಗಿರಿಧಾಮದ ಸೊಬಗನ್ನು ಅಸ್ವಾಧಿಸುವುದರ ಜತೆಗೆ ಕಡಿಮೆ ದರದಲ್ಲಿ ಕಾಫಿ, ಟೀ, ಊಟ, ತಿಂಡಿಯನ್ನು ಸವಿಯಬಹುದಾಗಿದೆ. ಇಲ್ಲಿ ಇಂದಿರಾ ಕ್ಯಾಂಟಿನ್ ಮಾದರಿಯ ಹೊಸ ಮಯೂರ ಕ್ಯಾಂಟೀನ್ ಸ್ಥಾಪನೆಯ ಮೂಲಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸಿಗರ ಜೇಬಿನಲ್ಲಿ ಕಾಸು ಉಳಿಸುವ ಕೆಲಸದ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.ಹಿಂದೆ ಇಲ್ಲಿನ ದುಬಾರಿ ಹೋಟೆಲ್‌ಗಳಿಗೆ ಹೋಗಿ ದರ ಪಟ್ಟಿಯನ್ನು ನೋಡುತ್ತಿದ್ದಂತೆ ಬಹುತೇಕರು ಅನುಮಾನದಲ್ಲಿ ಮತ್ತೊಮ್ಮೆ ಕಣ್ಣರಳಿಸಿ ಖಾತ್ರಿಪಡಿಸಿಕೊಳ್ಳಬೇಕೆಂಬ ಮನೋಭಾವನೆ ಮೂಡುವ ರೀತಿಯಲ್ಲಿ ಬೆಲೆಗಳು ಕಾಣುತ್ತಿದ್ದವು. ಕನಿಷ್ಠ ತಿಂಡಿಗೆ ಒಬ್ಬರು 200 ರೂ ಖರ್ಚು ಮಾಡಬೇಕಾಗಿತ್ತು. ಮೊದಲೇ ನಿಗದಿತ ಕುಡಿಯುವ ನೀರಿನ ಬಾಟಲ್ ಬೆಲೆಯು ಕನಿಷ್ಠ 5 ರಿಂದ 10 ರೂಗಳಿಗೆ ಹೆಚ್ಚಿಗೆ ಮಾರಲಾಗುತ್ತಿತ್ತು.ವಿದೇಶಗಳಲ್ಲಿ ಡಾಲರ್ ಲೆಕ್ಕದ ಮಾದರಿಯಲ್ಲಿ ತಿಂಡಿ ತಿನಿಸುಗಳಿಗೆ ಬೆಲೆ ನಿಗದಿಪಡಿಸಿದ್ದು ಇದರ ನಡುವೆ ಅನಧಿಕೃತವಾಗಿ ಹೆಚ್ಚುವರಿ ಹಣವನ್ನು ಪೀಕಲಾಗುತ್ತಿತ್ತು. ಇದರ ಬಗ್ಗೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿ, ಸಲ್ಲಿಸಿದ ದೂರುಗಳಿಗೆ ಲೆಕ್ಕವೇ ಇಲ್ಲ. ಮೊದಲೇ ಐಷರಾಮಿ ಕೊಠಡಿಗಳ ಬಾಡಿಗೆ, ಸೇವೆಯ ಶುಲ್ಕ ದುಬಾರಿಗೆ ನಂದಿ ಬೆಟ್ಟವು ಸಾಮಾನ್ಯ ಜನರಿಗಲ್ಲ. ಶ್ರೀಮಂತ ಪ್ರವಾಸಿಗರಿಗೆ ಎನ್ನುವಂತಹ ಮಾತು ಕೇಳಿ ಬಂದಿತ್ತು. ಇದರ ನಡುವೆ ಇತ್ತೀಚೆಗೆ ನಿರ್ವಹಣೆಯ ಜವಾಬ್ದಾರಿಯನ್ನು ತೆಕ್ಕೆಗೆ ಹಾಕಿಸಿಕೊಂಡಿರುವ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬಡ ಮತ್ತು ಮಧ್ಯಮ ವರ್ಗದ ಪ್ರವಾಸಿಗರ ಹಣ ಉಳಿತಾಯಕ್ಕೆ ಪೂರಕವಾದ ಕ್ರಮವನ್ನು ಕೈಗೊಂಡಿದೆ.


ಪಾವನಿ, ಗೃಹಿಣಿ, ಚಿಕ್ಕಬಳ್ಳಾಪುರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
