ಬೆಂಗಳೂರು:ನಂದಿನಿ ಬ್ರ್ಯಾಂಡ್ ಬಲಿಷ್ಠವಾಗಿದೆ. ಕೆಎಂಎಫ್​ಗೆ ಭದ್ರ ಬುನಾದಿಯಿದೆ. ಯಾವುದೇ ಸ್ಪರ್ಧೆಯನ್ನು ಎದುರಿಸುವಂತಹ ಸಾಮರ್ಥ್ಯ ಹೊಂದಿದೆ. ಗುಜರಾತ್​ನ ಅಮುಲ್ ಜತೆಗೆ ವಿಲೀನ ಪ್ರಶ್ನೆಯೇ ಇಲ್ಲವೆಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ಕೆಎಂಎಫ್ ಜತೆಗೆ 15 ಹಾಲು ಒಕ್ಕೂಟಗಳಿವೆ. 26 ಲಕ್ಷ ರೈತ ಸದಸ್ಯರ ಬಲ ಹೊಂದಿದೆ. ನಂದಿನಿ ಹಾಲು, ಮೊಸರು ಉತ್ತಮ ಗುಣಮಟ್ಟದ ಜತೆಗೆ ಸ್ಪರ್ಧಾತ್ಮಕ ಬೆಲೆಯಿದೆ. ನಂದಿನಿ ಉತ್ಪನ್ನಗಳು ದೇಶ, ವಿದೇಶದಲ್ಲಿ ಮಾರಾಟವಾಗುತ್ತಿದೆ. ತಿರುಮಲದ ಲಾಡುಗೆ ನಂದಿನಿ ತುಪ್ಪ, ಗುಜರಾತ್​ಗೆ ತುಪ್ಪ, ಚೀಜ್ ಮಾರಾಟ ಮಾಡಲಾಗುತ್ತಿದೆ” ಎಂದು ವಿವರಿಸಿದರು.
“ಚುನಾವಣಾ ರಾಜಕಾರಣಕ್ಕೆ ಜನರ ದಿಕ್ಕು ತಪ್ಪಿಸಲು ಹುನ್ನಾರ ಹೂಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾರುಕಟ್ಟೆ ವಿಸ್ತರಣೆಗೆ ಸಲಹೆ- ಸೂಚನೆ ನೀಡಿದ್ದಾರೆ.ಬೇಸಿಗೆಯಲ್ಲಿ ಹಸಿ ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಕಡಿಮೆಯಾಗುವುದು ಸಹಜ. ಕೃತಕ ಅಭಾವ ಸೃಷ್ಟಿಸುವ ಪ್ರಮೇಯ ಉದ್ಭವಿಸದು” ಎಂದರು.
“ಆನ್ ಲೈನ್ ನಲ್ಲಿ ವ್ಯಾಪಾರ ಹಾಲು, ಮೊಸರು ಮತ್ತದರ ಉತ್ಪನ್ನಗಳ ವಹಿವಾಟು ನಡೆಯುತ್ತದೆ. ಅಮುಲ್ ಹಾಲು ಲೀಟರ್ ಗೆ 57 ರೂ., ನಂದಿನಿ ಹಾಲಿಗೆ 39 ರೂ.ಗಳಿದೆ. ಯಾರಿಗೆ ಯಾವುದು ಬೇಕೋ ಅದನ್ನು ಖರೀದಿಸುತ್ತಾರೆ” ಎಂದು ಸೋಮಶೇಖರ್ ಸಮಜಾಯಿಷಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
