ವಿಜಯನಗರ:ಸ್ವಚ್ಚ ನಗರ ಸಂಕಲ್ಪಕ್ಕೆ ಹೊಸಪೇಟೆ ನಗರಸಭೆ ವಿಶೇಷ ಹೆಜ್ಜೆ ಇಟ್ಟಿದ್ದು ಕಸ ಸಂಗ್ರಹಕ್ಕೆ ಬೂತ್​ ವ್ಯವಸ್ಥೆ ಮಾಡಿದ್ದಾರೆ. ಈ ಕುರಿತಾಗಿ ಹೊಸಪೇಟೆ ನಗರಸಭೆ ಪೌರಾಯುಕ್ತ ಮನೋಹರ್ ಮಾಹಿತಿ ನೀಡಿದ್ದಾರೆ.
ಹೊಸಪೇಟೆಯಲ್ಲಿ ದಿನವೂ ಟನ್​ಗಟ್ಟಲೇ ಕಸ ಉತ್ಪಾನದೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆ ನಗರಸಭೆ, ನಗರದ 8 ಕಡೆ ಹಾಲಿನ ಮಾದರಿಯ ಬೂತ್ ವ್ಯವಸ್ಥೆ ಮಾಡಿದೆ. ಅದಲ್ಲದೇ ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ, ಹಾಕಿದಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ.
ಇದನ್ನೂ ಓದಿ:ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್; ಸುಳ್ಳು ದೂರು ಸಲ್ಲಿಸಿ ವಂಚಿಸಿದ ಆರೋಪ
ಜನರು ಬೇಕಾಬಿಟ್ಟಿ ಕಸ ಎಎಯುವ ಜಾಗಗಳನ್ನು ಟಾರ್ಗೆಟ್ ಮಾಡಿರುವ ನಗರಸಭೆ, ಅಲ್ಲಿ ಬೂತ್ ವ್ಯವಸ್ಥೆಯನ್ನು ಮಾಡಿದೆ. ಈ ಹಾಲಿನ ಮಾದರಿಯ ಬೂತ್​ನಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಹಾಕಲು ಪ್ರತ್ಯೇಕ ಬಾಕ್ಸ್​ಗಳ ಇಡಲಾಗಿದೆ. ಇವು ಬೆಳಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ, ಕಾರ್ಯನಿರ್ವಹಿಸಲಿದ್ದು ಸಾಯಂಕಾಲ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ತೆರೆದಿರಲಿವೆ.
ಆ ಬೂತ್​ನಲ್ಲಿ ಹೊಸಪೇಟೆ ನಗರಸಭೆಯ ಸಿಬ್ಬಂದಿ ಇರಲಿದ್ದು ಕಸ ನಿರ್ವಹಣೆ ಮಾಡಲಿದ್ದಾರೆ. ವರ್ಷದ 365 ದಿನವೂ ಈ ಕಸ ಸಂಗ್ರಹ ಘಟಕ ಕೆಲಸ ಮಾಡಲಿದ್ದು ಜನರು ಕಸ ಎಲ್ಲೆಂದರಲ್ಲಿ ಎಸೆಯದಂತೆ ತಡೆಯಲು ನಗರಸಭೆ ಕೈಗೊಂಡಿರುವ ನೂತನ ಪ್ರಯೋಗ ಇದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
