ಬೆಂಗಳೂರು:ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು ದರ ಹೆಚ್ಚಳದ ಯಾವುದೇ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಮುಂದೆ ಸದ್ಯಕ್ಕೆ ಮಂಡಿಸಿಲ್ಲವೆಂದು ಕೆಎಂಎ್ ಅಧ್ಯಕ್ಷ ಭೀಮಾನಾಯ್ಕ ಗುರುವಾರ ಹೇಳಿದರು.
ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿಯ ಹೊಸ ಉತ್ಪನ್ನಗಳ ಲೋಕಾರ್ಪಣೆ ಮಾಡಿದರು. ಜತೆಗೆ ನೂತನ ರಾಯಭಾರಿ ಶಿವರಾಜಕುಮಾರ್ ಅವರ ಜಾಹೀರಾತು ಟೀಸರ್ ಬಿಡುಗಡೆ ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ನಂತರ ಸುದ್ದಿಗಾರರೊಂದಿಗೆ ಭೀಮಾನಾಯ್ಕ ಮಾತನಾಡಿ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆಯಿದೆ. ಎಮ್ಮೆಹಾಲಿಗೆ ರಾಜ್ಯದ ಗಡಿಜಿಲ್ಲೆಗಳು, ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಸಿಎಂ ಲೋಕಾರ್ಪಣೆ ಮಾಡಿದ್ದಾರೆ.
ನಂದಿನಿಯ ಮೊಸರು, 2-3 ಸಿಹಿ ಉತ್ಪನ್ನಗಳು ಬಿಡುಗಡೆಯಾಗಿವೆ. ಉತ್ಪಾದನೆ, ವಹಿವಾಟು ಮತ್ತು ಹಾಲು ಒಕ್ಕೂಟದ ಸದಸ್ಯರ ಹಿತರಕ್ಷಣೆ ವಿಷಯದಲ್ಲಿ ಕೆಎಂಎ್ ಸದಾ ಮುಂದಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ಸಮಸ್ಯೆಗಳು ಗೊತ್ತಿವೆ. ಈ ಹಿಂದೆ ಕೆಎಂಎ್ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ನಿರ್ವಹಿಸಿದ್ದಾರೆ. ಇದರಿಂದಾಗಿ ಹಾಲು ಒಕ್ಕೂಟಗಳು, ಕೆಎಂಎ್ ಮತ್ತು ಒಕ್ಕೂಟದ ಸದಸ್ಯರ ಬಗ್ಗೆಯೂ ಗೊತ್ತಿದ್ದು, ಹೆಚ್ಚಿನ ವಿವರಣೆ ನೀಡಬೇಕಾದ ಅಗತ್ಯವೇನಿಲ್ಲ.
ಕೆಎಂಎ್ ಕೋರಿಕೆಯಂತೆ ಆಗಸ್ಟ್‌ನಲ್ಲಿ ಹಾಲಿನ ದರವನ್ನು ಮೂರು ರೂ.ಗೆ ಹೆಚ್ಚಿಸಿದರು. ರೈತರ ತಾಪತ್ರಯ ಅರಿತಿದ್ದ ಸಿಎಂ ಸೂಚನೆಯಂತೆ ಹೆಚ್ಚಳವಾದ ಮೂರು ರೂ. ಪೂರ್ತಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಹಾಲು, ಮೊಸರು ದರ ಹೆಚ್ಚಳ ಅನಿವಾರ್ಯವಾದರೆ, ಎಲ್ಲ ಹಾಲು ಒಕ್ಕೂಟಗಳ ಅಭಿಪ್ರಾಯ ಪಡೆದು, ಕೆಎಂಎ್ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದ ನಂತರವೇ ಸಿಎಂಗೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಭೀಮಾನಾಯ್ಕ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
