ಬೆಂಗಳೂರು:ಸಾಲು ಸಾಲು ದರ ಏರಿಕೆಯ ಬಿಸಿಯಲ್ಲಿ ಬೇಯುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಹೊರೆ ಬಿದ್ದಿದೆ. ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದು, ಆಗಸ್ಟ್​ 1ರಿಂದ ಹಾಲಿನ ದರ 3 ರೂಪಾಯಿ ಹೆಚ್ಚಾಗಲಿದೆ. ಹೊಸ ಸರ್ಕಾರ ಬಂದರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.
5 ರೂಪಾಯಿ ಏರಿಕೆ ಮಾಡಲು ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದರು. ಆದರೆ, ಸಿಎಂ 3 ರೂ. ಏರಿಕೆಗೆ ಮಾತ್ರ ಅನುಮತಿ ನೀಡಿದ್ದಾರೆ. ಅಲ್ಲದೆ, ಏರಿಕೆಯಾಗುವ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಖಡಕ್​ ಸೂಚನೆ ನೀಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಹಾಲಿನ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಇದನ್ನೂ ಓದಿ:ಜನನ ಪ್ರಮಾಣಪತ್ರದಲ್ಲಿ ಗೊಂದಲ: ವಿಶೇಷ ಮನವಿಯೊಂದಿಗೆ ಕೋರ್ಟ್​ ಮೆಟ್ಟಿಲೇರಿದ ತೃತೀಯಲಿಂಗಿ ದಂಪತಿ!
ಸದ್ಯದ ಹಾಲಿನ ದರ ಹಾಗೂ ಆಗಸ್ಟ್​ 1 ರಿಂದ ಜಾರಿಗೆ ಪರಿಷ್ಕೃತ ದರ ಪಟ್ಟಿ ಈ ಕೆಳಕಂಡಂತಿದೆ.
1. ನಂದಿನಿ( ಟೋನ್ಡ್ ಹಾಲು)ಸದ್ಯದ ಹಾಲಿನ ದರ ಅರ್ಧ ಲೀಟರ್​ಗೆ 20 ಹಾಗೂ ಒಂದು ಲೀಟರ್​ಗೆ 39 ರೂಪಾಯಿ.ಪರಿಷ್ಕೃತ ದರ 3 ರೂ. ಜಾಸ್ತಿ ಆದರೆ, ಅರ್ಧ ಲೀಟರ್‌ಗೆ 23 ಹಾಗೂ ಒಂದು ಲೀಟರ್‌ಗೆ 43 ರೂ. ಆಗಲಿದೆ.
2. ನಂದನಿ (ಡಬಲ್ ಟೋನ್ಡ್ ಹಾಲು)* ಸದ್ಯದ ಹಾಲಿನ ದರ ಅರ್ಧ ಲೀಟರ್​ 19 ಹಾಗೂ ಒಂದು ಲೀಟರ್‌ಗೆ 38 ರೂಪಾಯಿ.* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 22 ಹಾಗೂ ಒಂದು ಲೀಟರ್‌ಗೆ 41 ರೂಪಾಯಿ ಆಗಲಿದೆ.
3. ನಂದಿನಿ ಶುಭಂ* ಸದ್ಯದ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್ 45 ರೂಪಾಯಿ.* ಪರಿಷ್ಕೃತ ದರ 3 ರೂ. ಜಾಸ್ತಿಯಾದ್ರೆ ಅರ್ಧ ಲೀಟರ್​ಗೆ 26 ಹಾಗೂ ಒಂದು ಲೀಟರ್‌ಗೆ 48 ರೂ. ಆಗಲಿದೆ.
4. ನಂದಿನಿ ಸ್ಪೆಷಲ್* ಸದ್ಯದ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್​ಗೆ 45 ರೂಪಾಯಿ.* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಆಗಲಿದೆ.
ಇದನ್ನೂ ಓದಿ:8 ತಿಂಗಳಲ್ಲಿ 2 ಮಹಾ ಸಂಚು!; ತಪ್ಪಿದ ಸಂಭಾವ್ಯ ಉಗ್ರ ದಾಳಿಗಳು ಬೆಂಗಳೂರು, ಮಂಗಳೂರಿನಲ್ಲಿ ವಿಧ್ವಂಸಕ್ಕೆ ಪ್ಲಾನ್
5. ನಂದಿನಿ ( ಸಮೃದ್ಧಿ)* ಸದ್ಯದ ದರ ಅರ್ಧ ಲೀಟರ್​ಗೆ 24 ಹಾಗೂ ಒಂದು ಲೀಟರ್​ಗೆ 48 ರೂಪಾಯಿ.* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 27 ಹಾಗೂ ಒಂದು ಲೀಟರ್‌ಗೆ 51 ರೂಪಾಯಿ ಆಗಲಿದೆ.
6. ನಂದಿನಿ ಹಸುವಿನ ಹಾಲು* ಸದ್ಯದ ದರ ಅರ್ಧ ಲೀಟರ್​ಗೆ 22 ಹಾಗೂ ಲೀಟರ್‌ಗೆ 44 ರೂಪಾಯಿ.* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.
ಸೀಮಾ-ಸಚಿನ್​ ಮದ್ವೆ ಫೋಟೋಗಳು ವೈರಲ್​: ಭಾರತದ ಪೌರತ್ವ ಕೋರಿ ರಾಷ್ಟ್ರಪತಿಗೆ ಅರ್ಜಿ

ಲೋಕಸಭೆ ಚುನಾವಣೆ ತಯಾರಿಗೆ ಕೈಹಾಕಿದ ಕಾಂಗ್ರೆಸ್: 28 ಕ್ಷೇತ್ರಗಳ ಚಿತ್ರಣ ಪಡೆಯಲು ಜವಾಬ್ದಾರಿ ಹಂಚಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fifteen =
Remember me
