ಬೆಂಗಳೂರು:ರಾಜ್ಯದ ಹೆಮ್ಮೆಯ ಬ್ರಾಂಡ್​ ನಂದಿನಿ ಇದೀಗ ಹಲವು ಹಬ್ಬಗಳು ಸಮೀಪಿಸುತ್ತಿದ್ದಂತೆ ರಾಜ್ಯದ ಜನತೆಗೆ ಸಿಹಿ ಹಂಚುವ ಕಾರ್ಯಕ್ಕೆ ಮುಂದಾಗಿದೆ. “ನಂದಿನಿ ಸಿಹಿ ಉತ್ಸವ” ಎಂಬ ವಿಶೇಷ ಆಚರಣೆ ಹಮ್ಮಿಕೊಂಡಿರುವ ಕೆಎಂಎಫ್​, ಸ್ವೀಟ್​ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲು ಸಜ್ಜಾಗಿದೆ.
ಇದನ್ನೂ ಓದಿ:ST Somashekar Clarifies On Meeting DK Shivakumar | ಡಿಕೆಶಿ, ಸಿದ್ದು ಬಗ್ಗೆ ಒಳ್ಳೆ ಮಾತುಗಳನ್ನು ಆಡೋದು ತಪ್ಪಾ?
ಈ ವರ್ಷ ನಂದಿನಿ ಸಿಹಿ ಉತ್ಸವಕ್ಕೆ ಶೇ.20 ರಷ್ಟು ರಿಯಾಯಿತಿ ಲಭ್ಯವಿದೆ. ನಂದಿನಿ ಬ್ರ್ಯಾಂಡ್​ನ​ ಹೊಸ ಉತ್ಪನ್ನಗಳಾದ ಬೆಲ್ಲದ ಪೇಡ, ಸ್ಪೆಷಲ್ ಹಾಲಿನ ಬರ್ಫಿ, ಚಾಕೊಲೇಟ್ ಕುಕ್ಕಿಸ್, ಕಡಲೇ ಬೀಜ ಹಾಗೂ ಬೆಲ್ಲದ ಜೊತೆಗೆ ವಿಶೇಷವಾಗಿ ನಂದಿನಿ ಖೋವಾ ಮತ್ತು ಖೋವ ಕಡಲೆ ಮಿಠಾಯಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಸ್ತುತ ಕೆಎಂಎಫ್ ತನ್ನ​ ಬ್ರ್ಯಾಂಡ್‌ನಲ್ಲಿ 30ಕ್ಕೂ ಹೆಚ್ಚು ವಿವಿಧ ಬಗೆಯ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಿ, ಗ್ರಾಹಕರಿಗೆ ತಲುಪಿಸುತ್ತಿದೆ.
ಕಳೆದ 5 ವರ್ಷಗಳಿಂದ ರಾಜ್ಯಾದ್ಯಂತ ವರ್ಷದಲ್ಲಿ ಕನಿಷ್ಠ ಎರಡು ಬಾರಿ “ನಂದಿನಿ ಸಿಹಿ ಉತ್ಸವ” ಎಂಬ ವಿಶೇಷ ಆಚರಣೆ ಕೈಗೊಳ್ಳುವ ಮೂಲಕ ಎಲ್ಲಾ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇದೀಗ ನಂದಿನಿ ಸಿಹಿ ಉತ್ಸವ ಅಗಸ್ಟ್ 15 ರಿಂದ ಆರಂಭಗೊಂಡು ಸೆಪ್ಟಂಬರ್​ 20 ರವರೆಗೆ ನಡೆಯಲಿದೆ. ಗಣೇಶ ಹಬ್ಬದವರೆಗೂ ಈ ರಿಯಾಯಿತಿ ಇರಲಿದೆ ಎಂಬುದನ್ನು ಸುತ್ತೋಲೆಯ ಮುಖೇನ ಮಾಹಿತಿ ನೀಡಿದೆ.
ಇದನ್ನೂ ಓದಿ:ಚುನಾವಣಾ ಸಮಿತಿಗಳಿಂದ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆಯನ್ನು ಕೈಬಿಟ್ಟ ಬಿಜೆಪಿ
ಸಿಹಿ ಉತ್ಪನ್ನಗಳಾದ ಮೈಸೂರ್ ಪಾಕ್, ಹಾಲಿನ ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಬಾದಾಮ್/ಕ್ಯಾಷು/ಡ್ರೈಶೂರ್ಟ್ಸ್/ಕೋಕೋನಟ್/ಚಾಕೋಲೇಟ್ ಬರ್ಫಿಗಳು, ಕುಂದ, ಜಾಮೂನ್, ರಸಗುಲ್ಲಾ, ಸಿರಿಧಾನ್ಯ ಲಾಡು, ಹಾಲಿನ ಪುಡಿ, ಗೋಧಿ ಲಾಡು, ಕುಕ್ಕೀಸ್ ಮತ್ತು ಎಲ್ಲಾ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. 20 ರಷ್ಟು ರಿಯಾಯಿತಿಯನ್ನು ನೇರವಾಗಿ ಗ್ರಾಹಕರಿಗೆ ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ.
ಬಾಕ್ಸ್​ ಆಫೀಸ್​ನಲ್ಲಿ ‘ಜೈಲರ್’​ ಕಮಾಲ್​; ಮೊದಲ ವಾರದ ಕಲೆಕ್ಷನ್​ ವರದಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + twelve =
Remember me
