ಬೆಂಗಳೂರು:ಚುನಾವಣೆಗೂ ಮುನ್ನ ನಂದಿನಿ ವರ್ಸಸ್​ ಅಮುಲ್ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ನಂದಿನಿಯ ಮಾರುಕಟ್ಟೆಯನ್ನು ತಿಂದು ಹಾಕಲು ಅಮುಲ್ ಬರುತ್ತಿದೆ ಎಂದೇ ಬಿಂಬಿಸಲಾಗುತ್ತಿತ್ತು. ಇದೀಗ ನಂದಿನಿ, ಮೋದಿ ಕನಸಿನ ವಂದೇ ಭಾರತ್​ ರೈಲಿನೊಳಕ್ಕೂ ದಾಪುಗಾಲಿಡಲು ಸಜ್ಜಾಗಿದೆ.
ವಂದೇ ಭಾರತ್ ಟ್ರೈನ್ ನಲ್ಲಿ ನಂದಿನಿ ಪ್ರಾಡಕ್ಟ್​ಗಳನ್ನು ಪೂರೈಸಲು KMF ಚಿಂತನೆ ನಡೆಸುತ್ತಿದ್ದು, ಪ್ರಯಾಣಿಕರಿಗೆ ಲಸ್ಸಿ, ಮಜ್ಜಿಗೆ, ಪೇಡಾ, ನಂದಿನಿ ಕೋಲ್ಡ್ ಹಾಲು, ಪ್ಲೇವರ್ಡ್ ಡ್ರಿಂಕ್ ಸೇರಿದಂತೆ ಇತರ ಅನೇಕ ನಂದಿನಿ ಉತ್ಪನ್ನಗಳ ರುಚಿ ತೋರಿಸಲು ಮುಂದಾಗಿದೆ.
ಇದನ್ನೂ ಓದಿ:‘ನಂದಿನಿ’ ಉತ್ಪನ್ನಗಳ ರಾಯಭಾರಿಯಾಗಿ ನಟ ಶಿವರಾಜ್​​​​​​​ಕುಮಾರ್ ನೇಮಕ
ಹಾಲಿನ ಅಭಾವದ ನಡುವೆಯೂ ವಂದೇ ಭಾರತ್ ಟ್ರೈನ್​ಗೆ ನಂದಿನಿ ಉತ್ಪನ್ನ ಪೂರೈಕೆಗೆ ಚಿಂತನೆ ನಡೆಸಲಾಗುತ್ತಿದೆ. ಸದ್ಯ ಪ್ರತಿ ದಿನವೂ 20% ನಷ್ಟು ಹಾಲಿನ ಅಭಾವವನ್ನು ಪ್ರತಿ ದಿನವೂ KMF ಎದುರಿಸುತ್ತಿದೆ.
ಅಭಾವ ನೀಗಿಸುವ ದೃಷ್ಟಿಯಿಂದ ಸದ್ಯ ಉತ್ಪಾದನೆ ಹೆಚ್ಚಳಕ್ಕೆ ಕೆಎಂಎಫ್ ಚಿಂತನೆ ನಡೆಸಿದೆ. ಹಾಲು ಉತ್ಪಾದನೆ ಹೆಚ್ಚಳವಾದಲ್ಲಿ ವಂದೇ ಭಾರತ್​ ರೈಲಿನಲ್ಲೂ ನಂದಿನಿಪ್ರಾಡಕ್ಟ್​ಗಳ ಸಫ್ಲೈಗೆ ಕೇಂದ್ರ ರೈಲ್ವೇ ಇಲಾಖೆಗೆ ಸವಿಸ್ತಾರ ಪ್ರಸ್ತಾವನೆಯನ್ನು ಕೆಎಂಎಫ್ ಸಲ್ಲಿಸಲಿದೆ.
ಇದನ್ನೂ ಓದಿ:ನಂದಿನಿ ಹಾಲಿನ ದರ ಹೆಚ್ಚಳ ಬೆನ್ನಲ್ಲೇ ತಿಂಡಿ ಪ್ರಿಯರಿಗೆ ಶಾಕ್​ ನೀಡಿದ ಹೋಟೆಲ್​ ಮಾಲೀಕರು
ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಈ ಪೈಕಿ 8ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೆ ಉತ್ಪನ್ನಗಳ ತಯಾರಿ ನಡೆಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಚಿಂತಿಸಿರುವ ಕೆಎಂಎಫ್ 9 ರಿಂದ 11 ಅಥವಾ 12 ಲಕ್ಷ ಲೀಟರ್ ಹಾಲನ್ನು ಬಳಸಲು ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ:ನಂದಿನಿ ಬೂತ್ ಮಾದರಿಯಲ್ಲಿ ಕಸ ಸಂಗ್ರಹಕ್ಕೊಂದು ಕೇಂದ್ರ! ಸ್ವಚ್ಛ ವಿಜಯನಗರಕ್ಕೆ ಹೊಸ ಹೆಜ್ಜೆ…
ಇದರಿಂದ ನಂದಿನಿ ಪ್ರಾಡಕ್ಟ್​ಗಳ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗಲಿದೆ. ಈಗಾಗಲೇ ದೇಶದ ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್​ ಅಜಾನುಬಾಹು ಆಗಿದ್ದು, ವಂದೇ ಭಾರತ್ ರೈಲಿಗೂ ಸಪ್ಲೈ ಮಾಡಿ ಅಧಿಪತ್ಯ ಸ್ಥಾಪಿಸಲು ಕೆಎಂಎಫ್ ಸಿದ್ಧತೆ ನಡೆಸುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
