ಬೆಂಗಳೂರು:ರಾಜ್ಯದಲ್ಲಿ ನಂದಿನಿ Vs ಅಮುಲ್​ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ರಾಜಕೀಯ ನಾಯಕರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೀಗ ಆರೋಗ್ಯ ಸಚಿವ ಸುಧಾಕರ್ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಸಚಿವರು “ಹೈನುಗಾರರಿಗೆ ಹಾಲು ಉತ್ಪಾದನೆ ಮಾಡಿದ್ದಕ್ಕೆ ಪ್ರೋತ್ಸಾಹ ಧನ‌ ಕೊಟ್ಟಿದ್ದರೆ ‌ಅದು‌ ಬಿಜೆಪಿ ಸರ್ಕಾರ. ಪ್ರತಿ‌ ಲೀಟರ್ ಗೆ 5 ರೂ. ಪ್ರೋತ್ಸಾಹ ಧನ ಕೊಡಲಾಗಿದೆ. ಕೆಎಂಎಫ್ ಆದಾಯದಲ್ಲಿ ಒಂದು ಪಾಲನ್ನು ಹಾಲು ಉತ್ಪಾದಕರಿಗೆ‌ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಆಮದು ಮಾಡಲೂ ಅವಕಾಶ ಇದೆ. ಆದರೆ ಇದಕ್ಕೆ ಅಡ್ಡಿ ಮಾಡಿರುವುದೇ ಯುಪಿಎ ಸರ್ಕಾರ.
ನಂದಿನಿ‌ ಹಾಲನ್ನ‌ ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆ, ತಿರುಪತಿ ತಿರುಮಲ,‌ಮಹಾರಾಷ್ಟ್ರಗೆ ನಮ್ಮ ಹಾಲು ಹೋಗುತ್ತಿದೆ. ದೆಹಲಿಗೂ ಹೋಗಲು ಪ್ರಯತ್ನ‌ ನಡೆದಿದೆ. ಹೆರಿಟೇಜ್, ‌ದೊಡ್ಲಾ, ಆರೋಕ್ಯ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಹಾಲನ್ನು ಹಿಂದಿನಿಂದಲೂ ಮಾರುತ್ತಿದ್ದಾರೆ.
ಅಮುಲ್ ಅಂದ್ರೆ ‌ಬಿಜೆಪಿ… ನಂದಿನಿ ಅಂದ್ರೆ ಕಾಂಗ್ರೆಸ್ಸಾ..? ಇದೆಲ್ಲ ಬಿಡಬೇಕು.. ಕಾಮಾಲೆ ಕಣ್ಣಿನಿಂದ ನೋಡೋದನ್ನ‌ ಬಿಡಿ. ಈಗಾಗಲೇ ಪಾತಾಳಕ್ಕೆ ಕಚ್ಚಿದ್ದೀರಿ. ಅಪಹಾಸ್ಯಕ್ಕೆ ಈಡಾಗಬೇಡಿ.” ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
