ಮಂಡ್ಯ:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ನಾನಾ ಕಸರತ್ತು ಮಾಡುತ್ತಿದ್ದಾರೆ. ಇದೀಗ ಮಂಡ್ಯದ ನಾಗಮಂಗಲದಲ್ಲಿ ಅರೆಬೆತ್ತಲೆ ಡಾನ್ಸ್​ ಮರುಕಳಿಸಿದೆ.
ನಾಗಮಂಗಲದ ಜಾತ್ರಾ ಮಹೋತ್ಸವದಲ್ಲಿ ಅಶ್ಲೀಲ ನೃತ್ಯ ನಡೆದಿದೆ. ಚುನಾವಣೆ ಸಮೀಪಿಸುತ್ತಿದ್ದಮತೆ ನಂಗನಾಚ್ ನೃತ್ಯ​ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್ ಶಾಸಕ ಸುರೇಶ್ ಗೌಡ ಬೆಂಬಲಿಗರಿಂದ ಶ್ರೀ ಮಂಚಮ್ಮದೇವಿ ಹಾಗೂ ಮಸಣಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಟಿ. ಚನ್ನಾಪುರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನವಾಗಿದೆ.
ಇದನ್ನೂ ಓದಿ:ಹೆತ್ತ ತಾಯಿಯಂತೆ ಎದೆ ಹಾಲುಣಿಸಿ ಮಗು ಆರೈಕೆ: ಬಾಣಂತಿಗೆ ಪರೀಕ್ಷೆ ಬರೆಯಲು ನೆರವಾದ ಲೇಡಿ ಕಾನ್ಸ್​ಟೇಬಲ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸುರೇಶ್​ ಗೌಡ ವಹಿಸಿಕೊಂಡಿದ್ದರು. ಶಾಸಕರು ವೇದಿಕೆಯಿಂದ ತೆರಳುತ್ತಿದ್ದಂತೆ ಅಶ್ಲೀಲ ನೃತ್ಯ ಪ್ರಾರಂಭವಾಗಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಾಸಕ ಬಂಡೆಪ್ಪ ಕಾಂಶಪುರ್, ಮಾಜಿ ಎಂಎಲ್​ಸಿ ಅಪ್ಪಾಜಿಗೌಡ ಹೆಸರು ಸಹ ಇದೆ. ಜನರ ಮುಂದೆಯೇ ಯುವತಿಯರು ಅಶ್ಲೀಲವಾಗಿ ನೃತ್ಯ ಮಾಡಿದ್ದು, ಸ್ಥಳೀಯ ಮಹಿಳೆಯರನ್ನು ಮುಜುಗರಕ್ಕೆ ದೂಡಿದೆ.
ಮತದಾರರ ಓಲೈಕೆಗೆ ಅಸಭ್ಯ ನೃತ್ಯ ಪ್ರದರ್ಶಿಸಿರುವ ಆರೋಪ ಕೇಳಿಬಂದಿದೆ. ವೇದಿಕೆ ಮೇಲೆಯೇ ಕಾರ್ಯಕ್ರಮದ ಕಲಾವಿದೆಯರು ಬಾಲಕನನ್ನು ಕರೆತಂದು ಅಸಭ್ಯವಾಗಿ ವರ್ತಿಸಿದ್ದಾರೆ. ಕಲಾವಿದೆಯೊಬ್ಬಳು ಮೈ ಮೇಲಿದ್ದ ಟವೆಲ್ ಬಿಚ್ಚೆಸೆದು ಕೆಟ್ಟದಾಗಿ ನೃತ್ಯ ಮಾಡಿದ್ದಾಳೆ. ಈ ಹಿಂದೆಯೂ ನಂಗಾನಾಚ್‌ಗೆ ನಾಗಮಂಗಲ ಸುದ್ದಿಯಾಗಿತ್ತು. ಇದೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರು ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಟೆಲಿಗ್ರಾಮ್​ ಬಳಕೆದಾರರೇ ಎಚ್ಚರ! ಬಂಧಿತ ಯುವಕನ ಮೊಬೈಲ್​ನಿಂದ ಭಯಾನಕ ರಹಸ್ಯ ಬಯಲು

ಚುನಾವಣೋತ್ತರ ಸಮೀಕ್ಷೆ: ತ್ರಿಪುರಾ, ನಾಗಾಲ್ಯಾಂಡ್​ನಲ್ಲಿ ಬಿಜೆಪಿ, ಮೇಘಾಲಯ ಅತಂತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 12 =
Remember me
