ಮೈಸೂರು: ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್​ಡೌನ್ ಘೋಷಿಸಲಾಗಿದ್ದು, ರಾಜ್ಯದಲ್ಲೂ ಇದರ ಅನುಷ್ಠಾನಕ್ಕೆ ಪೊಲೀಸರು ಗಸ್ತು, ಉಸ್ತುವಾರಿ ಇದ್ದೇ ಇದೆ. ಲಾಠಿ ಪ್ರಯೋಗಕ್ಕೆ ಕಡಿವಾಣ ತಕ್ಕ ಮಟ್ಟಿಗೆ ಬಿದ್ದಿದೆಯಾದರೂ, ಕೆಲವೊಬ್ಬರು ಮಾಡುವ ಅವಾಂತರಗಳಿಂದಾಗಿ ಪೊಲೀಸ್ ಇಲಾಖೆ ತಲೆತಗ್ಗಿಸುವ ಪರಿಸ್ಥಿತಿ ಇದೆ. ಅಂಥದ್ದೇ ಒಂದು ಅವಾಂತರ ಸೃಷ್ಟಿಸಿ ಸುದ್ದಿಯಾಗಿದ್ದಾರೆ ಮೈಸೂರಿನ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಪಿಎಸ್​ಐ ಯಾಸ್ಮಿನ್ ತಾಜ್​ !
ಪಟ್ಟಣದ ಪೆಟ್ರೋಲ್ ಬಂಕ್ ಒಂದಕ್ಕೆ ಸೋಮವಾರ ಜೀಪಿನಲ್ಲಿ ತೆರಳಿದ್ದ ಯಾಸ್ಮಿನ್ ತಾಜ್​ ವಾಹನಕ್ಕೆ ಇಂಧನ ತುಂಬಿಸುವಂತೆ ಅಲ್ಲಿದ್ದ ಸಿಬ್ಬಂದಿಗೆ ದರ್ಪದಲ್ಲಿ ಹೇಳಿದ್ದಾರೆ. ಆದರೆ, ಅವರು ನಿರಾಕರಿಸಿದ್ದರಿಂದ ಕೆರಳಿದ ಯಾಸ್ಮಿನ್ ತಾಜ್​ ಭುಸುಗುಡುತ್ತಾ ಅಲ್ಲೆಲ್ಲ ಓಡಾಡಿದ್ದಾರೆ. ಬಳಿಕ ಸೊಂಟದ ಕೆಳಗಿನ ಭಾಷೆಯಲ್ಲಿ ನಿಂದಿಸಿದ್ದೂ ಅಲ್ಲದೆ, ಪೆಟ್ರೋಲ್ ಬಂಕ್​ಗೆ ಬೆಂಕಿ ಹಚ್ಚುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ಸಂಚಾರಿ ಪೊಲೀಸರನ್ನು ಕರೆಯಿಸಿಕೊಂಡ ಯಾಸ್ಮಿನ್ ತಾಜ್​, ಪೆಟ್ರೋಲ್ ಬಂಕ್ ಲಾಕ್ ಮಾಡುವುದು ಹೇಗೆ? ಸೀಜ್ ಮಾಡುವುದು ಹೇಗೆ ಎಂದೆಲ್ಲ ಅರಚಿದ್ದಾರೆ. ಇವೆಲ್ಲವೂ ಮೊಬೈಲ್​ನಲ್ಲಿ ಚಿತ್ರೀಕರಣಗೊಂಡಿದ್ದು ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದೆ.
ಯಾಸ್ಮಿನ್ ತಾಜ್ ದರ್ಪವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಒಬ್ಬ ಗೂಡ್ಸ್ ರಿಕ್ಷಾ ಚಾಲಕ. ಆತ ಟೆಲಿಕಾಂ ಕಂಪನಿಯೊಂದಕ್ಕೆ ಇಂಧನ ತೆಗೆದುಕೊಂಡು ಹೋಗಲು ಬಂದಿದ್ದ. ಪೆಟ್ರೋಲ್ ಬಂಕ್ ಸಿಬ್ಬಂದಿ, ಆಡಳಿತದ ಮೇಲಿನ ಯಾಸ್ಮಿನ್ ತಾಜ್ ಅವರ ಅಸಮಾಧಾನ ಕೊನೆಗೆ ತಿರುಗಿದ್ದು ಈ ಗೂಡ್ಸ್​ ರಿಕ್ಷಾ ಚಾಲಕನ ಮೇಲೆ. ಅಲ್ಲದೇ ಅಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಲು ಬಂದಿದ್ದ ಗ್ರಾಹಕರ ಮೇಲೆ!
ಎಲ್ಲರನ್ನೂ ಓಡಿಸುತ್ತ, ಕೊನೆಗೆ ಈ ರಿಕ್ಷಾ ಚಾಲಕನ ಬಳಿ ಬಂದ ಯಾಸ್ಮಿನ್ ತಾಜ್ ಲಾಠಿಯಲ್ಲಿ ಎರಡೇಟು ಈ ಚಾಲಕನಿಗೂ ಹೊಡೆದಿದ್ದಾರೆ. ಆತ ನೋವಿನಿಂದ ನರಳುತ್ತ ಹೋಗುತ್ತೇನೆ, ಹೊಡಿ ಬೇಡಿ ಮೇಡಂ ಎಂದು ಅಲವತ್ತು ಕೊಳ್ಳುವುದು ಕೂಡಾ ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲಿಂದ ಹೋದ ಈ ಚಾಲಕ ಈ ವಿಡಿಯೋವನ್ನು ಎಲ್ಲರ ಜತೆ ಹಂಚಿಕೊಂಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಿಗೇ, ಸಾರ್ವಜನಿಕವಾಗಿ ಕೂಡ ಪಿಎಸ್​ಐ ಯಾಸ್ಮಿನ್ ತಾಜ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ನಂಜನಗೂಡು ಟೌನ್​ಗೆ ಇಂತಹ ಅಧಿಕಾರಿ ಬೇಡ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಬಲವಾಗಿ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ತಾಜ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ, ಅವರಿಗೆ ಯಾವುದೇ ಠಾಣೆಗೆ ನಿಯೋಜಿಸಲಾಗಿಲ್ಲ ಅಥವಾ ಹೊಣೆಗಾರಿಕೆಯನ್ನು ಕೊಟ್ಟಿಲ್ಲ.
ನಾಳೆ ಮೂರ್ಖರನ್ನಾಗಿ ಮಾಡುವುದಕ್ಕೆ ಹೊರಟು ಮೂರ್ಖರಾಗಬೇಡಿ- ಮಹಾ ಪೊಲೀಸರ ಎಚ್ಚರಿಕೆ

https://www.instagram.com/p/B-Ymq7RHAn3/?utm_source=ig_web_copy_link
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
