ವಿಜಯಪುರ :ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಿಗೆ ಪರಾಜಿತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗತೊಡಗಿವೆ. ಇಂಥದ್ದೇ ಪ್ರಕರಣ ಚಡಚಣ ತಾಲೂಕಿನ ಧುಮಕನಾಳ ಗ್ರಾಮದಲ್ಲೂ ನಡೆದಿದೆ.
ನಂದರಗಿ ಗ್ರಾಮ ಪಂಚಾಯಿತಿಯ ಎರಡನೆ ವಾರ್ಡ್​ಗೆ ಸ್ಪರ್ಧಿಸಿದ್ದ ಶಿವಪ್ಪ ಕನಾಳ ಪರಾಜಿತಗೊಂಡಿದ್ದ. ಚಂದ್ರಕಾಂತ ನಂದಗೊಂಡ ಗೆಲುವು ದಾಖಲಿಸಿದ್ದ. ಚಂದ್ರಕಾಂತ ಮತ್ತು ಬೆಂಬಲಿಗರು ಶಿವಪ್ಪ ಅವರ ಮನೆ ಎದುರು ಪಟಾಕಿ ಹಚ್ಚಿ ವಿಜಯೋತ್ಸವ ಆಚರಿಸಲು ಮುಂದಾಗಿದ್ದಾರೆ. ಆಗ, ನೀವು ಗೆದ್ದಾಗಿದೆ. ನಾವು ಸೋತಿದ್ದೇವೆ. ಸಂಭ್ರಮಾಚರಣೆ ಸೋತ ನಮ್ಮ ಮನೆ ಮುಂದೆ ಆಚರಿಸಬೇಡಿ. ನಮ್ಮ ಮನಸ್ಸು ನೋಯಿಸಬೇಡಿ ಎಂದು ಶಿವಪ್ಪ ಕನಾಳ ಮತ್ತು ಕುಟುಂಬದವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಗೋವಾದಲ್ಲಿ ಗಾಂಜಾ ಬೆಳೆಯಲು ಅನುಮತಿ!
ಇದಕ್ಕೆ ಕುಪಿತರಾದ ಚಂದ್ರಕಾಂತ ಬೆಂಬಲಿಗರು ಶಿವಪ್ಪ ಕನಾಳ, ರಾಯಪ್ಪ ಕನಾಳ ಶ್ರೀಶೈಲ ಕನಾಳ, ಪುತಳಾಬಾಯಿ ಕನಾಳ ಮತ್ತು ಭೀಮಕ್ಕ ಕನಾಳ ಅವರ ಮೇಲೆ ಹಲ್ಲೆ ನಡೆಸಿದ್ದರು. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೂಡಲೇ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗ್ರಾಮಾಯಣ ಫಲಿತಾಂಶದ ಬೆನ್ನಲ್ಲೇ ಕೈ-ಕೈ ಮಿಲಾಯಿಸಿದ್ರು ವಿಜೇತ-ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
