ಬೆಂಗಳೂರು: ‘ಹಿಂದೂ’ ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ವಿರುದ್ಧ ಕೇಸರಿಪಡೆ ಕೆರಳಿದೆ. ಇದಕ್ಕೆ ಪ್ರತಿಯಾಗಿ “ನಾನು ಸ್ವಾಭಿಮಾನಿ ಹಿಂದು” ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಶುರುವಾಗಿದೆ. ‘ನಾನು ಸ್ವಾಭಿಮಾನಿ ಹಿಂದು’ ಎಂದು ಸರಣಿ ಟ್ವೀಟ್​ ಮಾಡಿರುವ ಸಚಿವ ವಿ.ಸುನಿಲ್ ಕುಮಾರ್​, ಕಾಂಗ್ರೆಸ್​ ವಿರುದ್ಧ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ. ಹಿಂದು, ಹಿಂದುತ್ವ ಹಾಗೂ ಹಿಂದು ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೇ ಬಂದಿದೆ. ಸತೀಶ್ ಜಾರಕಿಹೊಳಿ ಈ ಪರಂಪರೆಯ ಭಾಗ ಎಂದು ಸುನಿಲ್​ ಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.– ಸತೀಶ್ ಜಾರಕಿಹೊಳಿಗೆ ಹಿಂದು ಶಬ್ದ ಅಶ್ಲೀಲ.– ಸಿದ್ದರಾಮಯ್ಯ ಅವರಿಗೆ ಕೇಸರಿ-ತಿಲಕ ಕಂಡರೆ ಭಯ.– ಬಿ.ಟಿ.ಲಲಿತಾನಾಯಕರಿಗೆ ದೈವಾರಾಧನೆ ಹಾಗೂ ತೀರ್ಥ ವಾಕರಿ ತರಿಸುತ್ತದೆ.– ಡಿ.ಕೆ.ಶಿವಕುಮಾರ್​ಗೆ ಮುಸ್ಲಿಮರು ಸೋದರರು.– ಎಂ.ಬಿ.ಪಾಟೀಲರಿಗೆ ಹಿಂದು ಧರ್ಮದ ಅಖಂಡತೆ ಒಡೆಯುವ ಯೋಚನೆ.– ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್​ಗೆ ಭಗವದ್ಗೀತೆ ಜಿಹಾದ್ ಆಗಿ ಕಾಣುತ್ತದೆ.ಇವೆಲ್ಲವೂ ಕಾಂಗ್ರೆಸ್ ಒಳ ಮನಸ್ಸಿನಲ್ಲಿರುವ ಹಿಂದು ವಿರೋಧಿ ಭಾವಗಳು ಎಂದು ಟೀಕಿಸಿದ್ದಾರೆ.
ನಾನು ಸ್ವಾಭಿಮಾನಿ ಹಿಂದು…– ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ.– ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ.– ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ.
ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ..pic.twitter.com/dYiRk2DqjQ
— Sunil Kumar Karkala (@karkalasunil)November 8, 2022

‘ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ರಾಹುಲ್ ಗಾಂಧಿ ನಡೆಸಿದ ಪಾದಯಾತ್ರೆಯ ಬಳಿಕ ಕಾಂಗ್ರೆಸ್ ನಾಯಕರ ಹಿಂದು ವಿರೋಧಿ ಹೇಳಿಕೆಗಳು ಮಿತಿಮೀರಿದೆ. ಕಾಂಗ್ರೆಸ್ ನಡೆಸುವ ಎಲ್ಲ ಯಾತ್ರೆ, ಅಭಿಯಾನದ ಹಿಂದಿರುವುದು ಹಿಂದು ದ್ವೇಷ. ಕಾಂಗ್ರೆಸ್ ಅಧಿನಾಯಕರ ಭಾವನೆಗಳಿಗೆ ಸತೀಶ್ ಜಾರಕಿಹೊಳಿ ಮಾತಿನ ರೂಪ ಕೊಟ್ಟಿದ್ದಾರೆ. ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ‘ಇದು ವೈಯಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ನಾಟಕ ಬೇಡ ಮಾನ್ಯ ಸುರ್ಜೇವಾಲಾ ಅವರೇ. ಭಾರತೀಯತೆಗೆ ಅಪಮಾನ ಮಾಡುವ ನಿಮ್ಮ ನಾಟಕಕ್ಕೆ ಕ್ಷಮೆ ಇಲ್ಲ’ ಎಂದು ಸುನಿಲ್ ಕುಮಾರ್​ ಆಕ್ರೋಶ ಹೊರಹಾಕಿದ್ದಾರೆ.
– ನಾನು ಸ್ವಾಭಿಮಾನಿ ಹಿಂದು….– ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ.– ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ.– ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ.– ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ…– ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ.– ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ‌ ಇದೆ.– ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.– ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ.– ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ.– ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ.ಎಂದು ಜಾಲತಾಣದಲ್ಲಿ ಸುನಿಲ್ ಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸತೀಶ್​ ಜಾರಕಿಹೊಳಿ ವಿರುದ್ಧ ನಡೆಸುತ್ತಿರುವ “ಸ್ವಾಭಿಮಾನಿ ಹಿಂದು ಅಭಿಯಾನ”ದಲ್ಲಿ ಈ ಮಾತುಗಳು ಪ್ರತಿಧ್ವನಿಸುತ್ತಿವೆ.
ಭವ್ಯ ಭಾರತದ ಬೇರು ಸನಾತನ ಹಿಂದೂ ಧರ್ಮದಲ್ಲಿ ಅಡಗಿದೆ. ಶ್ರೀಮಂತ ಸಂಸ್ಕೃತಿ, ಆಚಾರ, ವಿಚಾರ, ರೂಢಿ, ಸಂಪ್ರದಾಯವನ್ನೊಳಗೊಂಡ ಹಿಂದೂ ಧರ್ಮದಲ್ಲಿ ಜನಿಸಿ, ಅನುಸರಿಸುತ್ತಿರುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆ.
ನನ್ನ ಧರ್ಮ, ನನ್ನ ದೇಶಕ್ಕೆ ಧಕ್ಕೆ ತರುವ ಯಾವೊಂದು ಅಂಶವನ್ನೂ ಸಹಿಸಲಾರೆನು.#ನಾನುಸ್ವಾಭಿಮಾನಿಹಿಂದೂ
— Dr. Ashwathnarayan C. N. (@drashwathcn)November 8, 2022

ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ​ ನಾರಾಯಣ್​ ಕೂಡ ‘ನಾನು ಸ್ವಾಭಿಮಾನಿ ಹಿಂದು’ ಅಭಿಯಾನಕ್ಕೆ ಸಾಥ್​ ಕೊಟ್ಟಿದ್ದಾರೆ. ‘ಭವ್ಯ ಭಾರತದ ಬೇರು ಸನಾತನ ಹಿಂದೂ ಧರ್ಮದಲ್ಲಿ ಅಡಗಿದೆ. ಶ್ರೀಮಂತ ಸಂಸ್ಕೃತಿ, ಆಚಾರ, ವಿಚಾರ, ರೂಢಿ, ಸಂಪ್ರದಾಯವನ್ನೊಳಗೊಂಡ ಹಿಂದೂ ಧರ್ಮದಲ್ಲಿ ಜನಿಸಿ, ಅನುಸರಿಸುತ್ತಿರುವುದಕ್ಕೆ ನನಗೆ ಅಪಾರ ಹೆಮ್ಮೆಯಿದೆ. ನನ್ನ ಧರ್ಮ, ನನ್ನ ದೇಶಕ್ಕೆ ಧಕ್ಕೆ ತರುವ ಯಾವೊಂದು ಅಂಶವನ್ನೂ ಸಹಿಸಲಾರೆನು’ ಎಂದು ಟ್ವೀಟ್​ ಮಾಡಿದ್ದಾರೆ.
‘ಸಿದ್ದರಾಮಯ್ಯಗೆ ಸಂಕಷ್ಟದ ದಿನಗಳು ಶುರುವಾಗಿದೆ.. ಪಾಠ ಕಲಿಸಲು ಖರ್ಗೆ ಸಜ್ಜಾಗಿದ್ದಾರೆ…’

ಚಂದ್ರು ಸಾವಿನ ಪ್ರಕರಣ: ಗೌರಿಗದ್ದೆ ಆಶ್ರಮಕ್ಕೆ ತನಿಖಾ ತಂಡ ಭೇಟಿ, ವಿನಯ್​ ಗುರೂಜಿಯನ್ನೂ ವಿಚಾರಣೆ ನಡೆಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − two =
Remember me
