ಬೆಂಗಳೂರು:‘ತೋಟಗಾರಿಕೆ ಸಚಿವ ನಾರಾಯಣ್​ ಗೌಡರನ್ನು ಇನ್ಮುಂದೆ ಮಾತನಾಡಿಸಲ್ಲ’ ಎಂದು ಕಡೂರು ಕ್ಷೇತ್ರದ ಬಿಜೆಪಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದ್ದಾರೆ.
ವಿಧಾನಸಭೆಯ ಮೊಗಸಾಲೆಯ ಮುಂದೆಯೇ ಸೋಮವಾರ ಮಧ್ಯಾಹ್ನ ಬೆಳ್ಳಿಪ್ರಕಾಶ್​ ಮತ್ತು ನಾರಾಯಣ್​ಗೌಡ ಕಿತ್ತಾಡಿಕೊಂಡಿದ್ದರು. ಈ ಬಗ್ಗೆದಿಗ್ವಿಜಯ ನ್ಯೂಸ್​ಗೆ ಇವರಿಬ್ಬರೂ ಪ್ರತ್ಯೇಕವಾಗಿ ಪ್ರತಿಕ್ರಿಯಿಸಿದ್ದಾರೆ. ‘ವರ್ಗಾವಣೆ ವಿಚಾರವಾಗಿ‌ ನಾನು ಹೇಳಿದ ಕೆಲಸ ಮಾಡಿಲ್ಲ. ಈ ವಿಚಾರವಾಗಿ ಸಚಿವರ ಜತೆ ಮಾತಿನ ಚಕಮಕಿ ನಡೆದದ್ದು ನಿಜ. ಆದರೆ ಹಲ್ಲೆ ಮಾಡಿಲ್ಲ. ಬೇರೆಲ್ಲ ಸಚಿವರು ಹೇಳಿದ ಕೆಲಸ ಮಾಡಿಕೊಟ್ಟಿದ್ದಾರೆ. ನಾರಾಯಣ್​ ಗೌಡ ಮಾತ್ರ ಕೆಲಸ ಮಾಡಿಕೊಟ್ಟಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.ಇದನ್ನೂ ಓದಿರಿಸರ್ಕಾರದ ವಿರುದ್ಧ ಸಿಡಿದೆದ್ದ ರೈತರು… ಮಳೆಯಲ್ಲೇ ಬೃಹತ್​ ಪ್ರತಿಭಟನೆ
‘ಇನ್ಮುಂದೆ ನಾನು ನಾರಾಯಣಗೌಡ ಹತ್ತಿರ ಕೆಲಸ ಮಾಡಿಕೊಡಿ ಅಂತಾ ಕೇಳುವುದಿಲ್ಲ. ಮಾಡಿದರೆ ಮಾಡಲಿ, ಇಲ್ಲಾಂದ್ರೆ ಬಿಡಲಿ’ ಎಂದು ಬೇಸರದಿಂದ ನುಡಿದ ಬೆಳ್ಳಿಪ್ರಕಾಶ್​, ‘ಈ ಬಗ್ಗೆ ಈಗಾಗಲೇ ಸಿಎಂ ಗಮನಕ್ಕೆ ಬಂದಿದೆ’ ಎಂದರು.
ನಾರಾಯಣ್​ಗೌಡ ಮಾತನಾಡಿ, ‘ಬೆಳ್ಳಿಪ್ರಕಾಶ್​ರ ಕೆಲಸ ಪೆಂಡಿಂಗ್ ಇಟ್ಟಿಲ್ಲ. ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಿದ್ದೇವೆ. ಆದರೂ ಈ ವಿಚಾರವಾಗಿ ನನ್ನ ವಿರುದ್ಧ ಏಕವಚನ ಬಳಸಿದ್ರು. ಅವರು ಮಾತನಾಡುವುದೇ ರಫ್ ಅಂತ ಹೇಳ್ತಾರೆ. ಅದು ಮಾಡಬೇಡಿ ಅಂತ ಹೇಳಿದ್ದೇನೆ. ಅವರಿಗೆ ನನ್ನ ಇಲಾಖೆಯಿಂದ ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಮ್ಮಿಬ್ಬರ ಮಾತಿನ ಚಕಮಕಿ ಮೂಲ ವಲಸಿಗ ಸಮಸ್ಯೆ ಅಲ್ಲ. ಇದರಲ್ಲಿ ತಪ್ಪು ಹುಡುಕುವುದು ಬೇಡ. ನನ್ನ ಮೇಲೆ ಹಲ್ಲೆ ಮಾಡಿಲ್ಲ’ ಎಂದರು.
ವಿಧಾನಸಭೆಯ ಕ್ಯಾಂಟೀನ್​ನಲ್ಲಿ ಕಿತ್ತಾಡಿಕೊಂಡು ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ!

‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − sixteen =
Remember me
