ಬೆಂಗಳೂರು:ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ಮಾಹಿತಿ ಶಿಕ್ಷಣ ಚಟುವಟಿಕೆ(ಐಇಸಿ)ನಡೆಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ.
ನರೇಗಾ ಜಾರಿಗೆ ಬಂದು 15 ವರ್ಷ ಕಳೆದರೂ ಇಂದಿಗೂ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಗ್ರಾಮೀಣ ಜನರಲ್ಲಿ ಅರಿವು ಇಲ್ಲ. ಯೋಜನೆಗೆ ಸಂಬಂಧಿಸಿದ ಐಇಸಿ ಚಟುವಟಿಕೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದಾಗಿ ಯೋಜನೆಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಗ್ರಾಮೀಣ ಜನರಿಗೆ ತಲುಪುತ್ತಿಲ್ಲ. ಆದ್ದರಿಂದ ಯೋಜನೆಯ ಕುರಿತು ವ್ಯಾಪಕ ಮತ್ತು ಸಮರ್ಪಕವಾಗಿ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ತಾಲ್ಲೂಕು ಐಇಸಿ ಸಂಯೋಜಕರು ಕಡ್ಡಾಯವಾಗಿ ಪ್ರತಿದಿನ ಒಂದು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ರೋಜ್‌ಗಾರ್ ದಿನಾಚರಣೆ ಆಚರಿಸಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಆದರೆ ಪ್ರತಿ ದಿನ ಪಂಚಾಯಿತಿ ಭೇಟಿ ಮಾಡಿದರೆ ತಾ.ಪಂ. ಹಾಗೂ ಜಿ.ಪಂ.ನಿಂದ ತಿಳಿಸುವ ಯಾವುದೇ ಕೆಲಸ ಮಾಡಲು ಅಸಾಧ್ಯ. ಅದರ ಜತೆಗೆ ಎಲ್ಲ ದಿನವೂ ಪಂಚಾಯಿತಿ ಭೇಟಿ ಮಾಡುವುದು ಮತ್ತು ರೋಜಗಾರ್ ದಿನಾಚರಣೆ ಮಾಡಲು ಪ್ರಯಾಣ ವೆಚ್ಚ ಮತ್ತು ಕಾರ್ಯಕ್ರಮದ ವೆಚ್ಚ ತಿಳಿಸದಿರುವುದರ ಬಗ್ಗೆ ಐಇಸಿ ಸಂಯೋಜಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರೋಜಗಾರ್ ದಿನಾಚರಣೆಯನ್ನು ಕಾಮಗಾರಿ ಸ್ಥಳದಲ್ಲಿ ಆಚರಿಸತಕ್ಕದ್ದಲ್ಲ. ಬದಲಾಗಿ ಇದುವರೆಗೂ ಯೋಜನೆಯ ಸೌಲಭ್ಯ ಪಡೆದುಕೊಳ್ಳದೇ ಇರುವ ಜನರನ್ನು ಗುರುತಿಸಿ ಅವರುಗಳನ್ನು ಒಂದೆಡೆ ಸೇರಿಸಿ ಯೋಜನೆಯಡಿ ದೊರೆಯುವ ಸೌಲಭ್ಯಗಳು, ಕೂಲಿಕಾರರ ಹಕ್ಕುಗಳುಮುಂತಾದ ವಿಷಯಗಳ ಕುರಿತು ಅರಿವು ಮೂಡಿಸಿ, ಯೋಜನೆಯ ಕಾಮಗಾರಿಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕೆಲಸದ ಬೇಡಿಕೆ ಸಂಗ್ರಹಐಇಸಿ ಸಂಯೋಜಕರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮನೆಗಳಿಗೆ ಭೇಟಿ ನೀಡಿ ಕೆಲಸದ ಬೇಡಿಕೆ ಸಂಗ್ರಹಿಸಬೇಕು ಮತ್ತು ವೈಯುಕ್ತಿಕ ಕಾಮಗಾರಿಗಳ ಬೇಡಿಕೆಗಳನ್ನು ಪಡೆದುಕೊಂಡು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು. ಕೂಲಿಕಾರರು ಗ್ರಾಮ ಪಂಚಾಯತಿಗೆ ಸಲ್ಲಿಸಿದ ಕೆಲಸ ಬೇಡಿಕೆಯನ್ನುರಿಜಿಸ್ಟ್ರಾರ್ ನಲ್ಲಿ ದಾಖಲಿಸಬೇಕು.
ಜಿಲ್ಲಾ ಐಇಸಿ ಸಂಯೋಜಕರು ಪ್ರತಿನಿತ್ಯ ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಆಯೋಜಿಸಲಾದ ರೋಜ್‌ಗಾರ್ ದಿನಾಚರಣೆಗಳ ಸಂಖ್ಯೆ, ಕೆಲಸದ ಬೇಡಿಕೆ ಸಂಗ್ರಹಿಸಲಾದ ನಮೂನೆ ಮತ್ತು ಕೂಲಿಕಾರರ ಸಂಖ್ಯೆ ಮತ್ತು ವೈಯುಕ್ತಿಕ ಕಾಮಗಾರಿಗಳ ಬೇಡಿಕೆ ಸಂಖ್ಯೆಯನ್ನು ಪ್ರತಿದಿನ ರಾಜ್ಯ ಐಇಸಿ ಸಂಯೋಜಕರಿಗೆ ಸಲ್ಲಿಸಬೇಕು. ರಾಜ್ಯ ಐಇಸಿ ಸಂಯೋಜಕರು ಈ ವಿವರಗಳನ್ನು ಕ್ರೋಢೀಕರಿಸಿ ಉಸ್ತುವಾರಿ ಅಧಿಕಾರಿಯವರಿಗೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ರಾಜ್ಯದ ಎಲ್ಲ ಜಿ.ಪಂ. ಸಿಇಒಗಳಿಗೆ ನಿರ್ದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 15 =
Remember me
