ಬೆಂಗಳೂರು:ಸಿಡಿ ಲೇಡಿ ಹಾಗೂ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋ ಬಹಿರಂಗವಾದ ಮೇಲೆ ಹೆಚ್ಚಾಗಿ ಕೇಳಿಬಂದಿದ್ದ ಇನ್ನೆರಡು ಹೆಸರುಗಳೆಂದರೆ ಬಿ.ಎಂ. ನರೇಶ್​ ಗೌಡ ಹಾಗೂ ಶ್ರವಣ್​. ಇವರಿಬ್ಬರು ಈ ಸಿಡಿ ಇಟ್ಟುಕೊಂಡು ರಮೇಶ್​ ಜಾರಕಿಹೊಳಿ ಅವರನ್ನು ಬ್ಲ್ಯಾಕ್​ಮೇಲ್​ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪವಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಇವರಿಬ್ಬರೂ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದರು. ಕೊನೆಗೂ ಇವರಿಗೆ ಇಂದು ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ನರೇಶ್​ ಗೌಡ ಮತ್ತು ಶ್ರವಣ್​ ಇಬ್ಬರೂ ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುವ ಸಲುವಾಗಿ ಬ್ಲ್ಯಾಕ್​ಮೇಲ್​ಗೆ ಯತ್ನಿಸಿದ್ದರು ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳದ ಪೊಲೀಸರು ಇವರ ಶೋಧದಲ್ಲಿದ್ದರು. ಮತ್ತೊಂದೆಡೆ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದ ಇವರಿಬ್ಬರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಕೊವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್ ಲಸಿಕೆ ಬೆಸ್ಟ್ ಅಂತೆ!; ಯಾಕೆ ಅಂತ ಹೇಳುತ್ತೆ ಈ ಅಧ್ಯಯನ…
ಇವರು ಸಲ್ಲಿಸಿದ್ದ ಜಾಮೀನು ಅರ್ಜಿ ಸಂಬಂಧ ಕಳೆದ ಬುಧವಾರ ವಿಚಾರಣೆ ನಡೆದಿದ್ದು, ಆರೋಪಿಗಳ ಪರವಾಗಿ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ವಾದ ಮಂಡಿಸಿದ್ದರು. ಆದರೆ ಎಸ್​ಐಟಿ ಪರ ಹಿರಿಯ ವಕೀಲ ಕಿರಣ್​ ಜವಳಿ ಅವರು ಜಾಮೀನು ನೀಡದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ನ್ಯಾಯಾಧೀಶರಾದ ಲಕ್ಷ್ಮಿನಾರಾಯಣ್‌ ಭಟ್‌ ಅವರು ತೀರ್ಪು ಕಾಯ್ದಿರಿಸಿದ್ದರು.
‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!

ರಾಜ್ಯದಲ್ಲಿ ಇಳಿಯುತ್ತಿದ್ದ ಸೋಂಕು ಮತ್ತೆ ಏರಿತು!; ಆತಂಕ ಹುಟ್ಟಿಸಿದ ಪಾಸಿಟಿವಿಟಿ ರೇಟ್…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 5 =
Remember me
