ಬೆಂಗಳೂರು:ಅಮೆರಿಕದಲ್ಲಿ ಕರೊನಾ ಪ್ರಕರಣಗಳ ನಿರ್ವಹಣೆಗೆ ವೆಂಟಿಲೇಟರ್ ಕೊರತೆ ಉಂಟಾಗಿದ್ದು, ಇದನ್ನು ನೀಗಿಸಲು ಬೆಂಗಳೂರಿನ ಸಂಸ್ಥೆಯೊಂದು ಸಹಕಾರ ನೀಡಲಿದೆ.
ಅಮೆರಿಕದಲ್ಲಿ ಊಹೆಗೂ ಮೀರಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ವೆಂಟಿಲೇಟರ್​ಗಳ ಕೊರತೆ ಕಾಡುತ್ತಿರುವ ಕಾರಣಕ್ಕೆ ಅಲ್ಲಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕೇವಲ 37 ದಿನದಲ್ಲೆ ವೆಂಟಿಲೇಟರ್ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ವೈಟಲ್ (ವೆಂಟರ್ ಇಂಟರ್​ವೆನ್ಷನ್ ಟೆಕ್ನಾಲಜಿ ಎಕ್ಸಿಸೆಬಲ್ ಲೋಕಲಿ) ಎಂದು ಹೆಸರಿಟ್ಟಿದೆ. ಸಾಮಾನ್ಯ ಸೋಂಕಿತರನ್ನು ವೈಟಲ್ ವೆಂಟಿಲೇಟರ್ ಮೂಲಕ ಉಪಚರಿಸಿ, ಸಾಂಪ್ರದಾಯಿಕ ವೆಂಟಿಲೇಟರ್​ಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು. ನಾಸಾದ ವಿನ್ಯಾಸಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ(ಎಫ್​ಡಿಎ) ಅನುಮತಿ ನೀಡಿದೆ.
ಈ ವಿನ್ಯಾಸವನ್ನು ಬಳಸಿ ವೆಂಟಿಲೇಟರ್ ಉತ್ಪಾದನೆಗೆ ಅಮೆರಿಕದಲ್ಲಿ ಅನೇಕ ಸಂಸ್ಥೆಗಳಿಗೆ ತಂತ್ರಜ್ಞಾನವನ್ನು ನಾಸಾ ಹಸ್ತಾಂತರಿಸಿದೆ. ಭಾರತದ ಮೂರು ಸಂಸ್ಥೆಗಳಿಗೂ ಉತ್ಪಾದನೆಗೆ ಸಮ್ಮತಿ ಸೂಚಿಸಿದ್ದು, ಅದರಲ್ಲಿ ಬೆಂಗಳೂರಿನ ಆಲ್ಪಾ ಡಿಸೈನ್ ಟೆಕ್ನಾಲಜೀಸ್ ಸಹ ಸೇರಿದೆ.
ಇದನ್ನೂ ಓದಿ:ಧೋನಿ ಜತೆ ಜಗಳವಾಡೋದು ಎಂದರೆ ಇವರೊಬ್ಬರೇ ಅಂತೆ!
ಡಿಆರ್​ಡಿಒ ಜತೆಗೆ ಕಾರ್ಯ:ಬೆಂಗಳೂರಿನ ಆಲ್ಪಾ ಸಂಸ್ಥೆ ಜತೆಗೆ ಪುಣೆಯ ಭಾರತ್ ಫೋರ್ಜ್ ಹಾಗೂ ಹೈದರಾಬಾದ್​ನ ಮೇಧಾ ಸವೋ ಡ್ರೖೆವ್ಸ್ ಸಂಸ್ಥೆಗಳು ನಾಸಾದಿಂದ ತಂತ್ರಜ್ಞಾನವನ್ನು ಉಚಿತವಾಗಿ ಪಡೆದು ವೆಂಟಿಲೇಟರ್ ಉತ್ಪಾದಿಸಲಿವೆ. ಆಲ್ಪಾ ಸಂಸ್ಥೆ ಅನೇಕ ವರ್ಷಗಳಿಂದಲೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್​ಡಿಒ) ಉತ್ಪನ್ನಗಳನ್ನು ತಯಾರಿಸಿ ಕೊಡುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಲ್ಪಾ ಡಿಸೈನ್ ಸಂಸ್ಥೆಯ ಸಿಎಂಡಿ ಕ(ನಿ) ಎಚ್.ಎಸ್. ಶಂಕರ್, ನಾಸಾದವರು ವೆಂಟಿಲೇಟರ್​ನ ತಂತ್ರಾಂಶ, ಡ್ರಾಯಿಂಗ್​ಗಳು ಹಾಗೂ ಎಲ್ಲ ದಾಖಲೆಗಳನ್ನೂ ಒಳಗೊಂಡಂತೆ ಉಚಿತವಾಗಿ ತಂತ್ರಜ್ಞಾನ ಹಸ್ತಾಂತರ ಮಾಡಲಿದ್ದಾರೆ. ಈಗಾಗಲೆ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ ಎಂದಿದ್ದಾರೆ.
ಭಾರತದಲ್ಲೂ ಅವಕಾಶ:ಅಮೆರಿಕದ ನಾಸಾ ನೀಡುವ ತಂತ್ರಜ್ಞಾನ ಬಳಸಿ 5 ವೆಂಟಿಲೇಟರ್​ಗಳನ್ನು ಉತ್ಪಾದಿಸಿ ಅಲ್ಲಿನ ಎಫ್​ಡಿಎಗೆ ಅನುಮತಿಗಾಗಿ ಕಳಿಸಿಕೊಡಬೇಕು. ಅನುಮತಿ ಸಿಕ್ಕ ನಂತರ ಅಮೆರಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಸಿಗಲಿದೆ. ಐದು ವೆಂಟಿಲೇಟರ್ ತಯಾರಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ(ಐಸಿಎಂಆರ್) ಕಳಿಸಿಕೊಡಬೇಕು. ಅದರ ಅನುಮತಿ ದೊರೆತ ನಂತರ ಭಾರತದ ಮಾರುಕಟ್ಟೆಯಲ್ಲೂ ಮಾರಾಟ ನಡೆಸಬಹುದು. ಇಲ್ಲಿವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಉತ್ಪನ್ನ ಇದು ಎಂದು ಶಂಕರ್ ಹೇಳಿದ್ದಾರೆ.
ಕರೊನಾ ರೋಗಿಯ ಅಂತ್ಯಕ್ರಿಯೆ ಮಾಡಿದ್ದ ಕುಟುಂಬಕ್ಕೆ ಮರುದಿನವೇ ಆತ ಬದುಕಿದ್ದಾನೆಂಬ ಸುದ್ದಿ ಬಂತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 20 =
Remember me
