ಬೆಳಗಾವಿ:ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಎನ್​ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯ ಅಕಾಡೆಮಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ವಿಶೇಷ ಅಕಾಡೆಮಿಗೆ ತಕ್ಕಂತೆ ಪಠ್ಯಕ್ರಮ ಅಳವಡಿಸಲು ಯೋಜನೆ ಸಿದ್ಧಪಡಿಸಲಾಗುವುದು. ಬೆಳಗಾವಿಯಲ್ಲಿ ಅನೇಕ ರಕ್ಷಣಾ ಸಂಸ್ಥೆಗಳಿದ್ದು, ಇಲ್ಲಿನ ಮಾನವ ಸಂಪನ್ಮೂಲ ಬಳಸಿಕೊಳ್ಳಲು ಈ ನಗರ ಆಯ್ಕೆ ಮಾಡಿಕೊಳ್ಳಲಾಗಿದೆ. ಆರು ತಿಂಗಳಲ್ಲಿ ಅಕಾಡೆಮಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಇಲಾಖೆಗೆ ಸೇರುವ ಸಿಬ್ಬಂದಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ಐಪಿಎಸ್ ಅಧಿಕಾರಿಗಳಿಗೂ ತರಬೇತಿ ಆಗಿರುತ್ತದೆ. ಆದರೆ, ಮಧ್ಯಮ ಹಂತದ ಅಧಿಕಾರಿಗಳು ತರಬೇತಿ ಪಡೆದು ಬಹಳ ವರ್ಷಗಳೇ ಆಗಿರುತ್ತದೆ. ಮಹತ್ವದ ಹುದ್ದೆಗಳಲ್ಲಿರುವ ಮತ್ತು ಬಹುತೇಕ ಸ್ಥಳೀಯರೇ ಆಗಿರುವ ಅವರಿಗೆ ಕೌಶಲ ವೃದ್ಧಿಸುವ ಅಗತ್ಯವಿದೆ. ಅದಕ್ಕಾಗಿ ಮಿಲಿಟರಿ ಅಧಿಕಾರಿಗಳ ಮಾದರಿಯಲ್ಲಿಯೇ ಅವರನ್ನು ಸಜ್ಜುಗೊಳಿಸಲಾಗುವುದು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 3 =
Remember me
