ಬೆಂಗಳೂರು:ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸುವ ಸಂಬಂಧ ರಚನೆಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದ ಕಾರ್ಯಪಡೆಯು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿಧಾನಸೌಧದಲ್ಲಿ ಈ ವರದಿ ಸ್ವೀಕರಿಸಿದರು.
ಅಶ್ವತ್ಥ ನಾರಾಯಣ ಮಾತನಾಡಿ, ಕರ್ನಾಟಕ ಶಿಕ್ಷಣ ಆಯೋಗ ಸ್ಥಾಪಿಸಬೇಕು, ಪ್ರಾಥಮಿಕ-ಪ್ರೌಢ ಹಾಗೂ ಉನ್ನತ ಶಿಕ್ಷಣ ಇವೆರಡೂ ಈ ಆಯೋಗದಡಿ ಕೆಲಸ ಮಾಡಬೇಕು. ಈ ಆಯೋಗಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ವರ್ಷಕ್ಕೆ ಕನಿಷ್ಠ 2 ಸಲ ಸಭೆಗಳನ್ನು ನಡೆಸಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಬೇಕು, ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು ಇದರ ಉಪಾಧ್ಯಕ್ಷರಾಗಿರಬೇಕು ಎಂಬುದು ಸೇರಿ ಹಲವು ಪ್ರಮುಖ ಕ್ರಮಕೈಗೊಳ್ಳುವ ಕುರಿತು ವರದಿಯಲ್ಲಿ ಸಲಹೆ ನೀಡಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಇದ್ದರು.
ಧನಸಹಾಯಕ್ಕೆ ಕಾರ್ಯಪಡೆ
ಕರ್ನಾಟಕ ಶಾಲಾ ಶಿಕ್ಷಣ ಮಂಡಲಿ ಶಾಲಾ ಶಿಕ್ಷಣ ಹಾಗೂ ಸರ್ಕಾರದೊಂದಿಗೆ ಸಂಬಂಧವುಳ್ಳ ವಿವಿಧ ಇಲಾಖೆಗಳು ಹಾಗೂ ಅಂಗಸಂಸ್ಥೆಗಳ ನಡುವೆ ಸಮನ್ವಯ, ಸಂಪರ್ಕದೊಂದಿಗೆ ಕಾರ್ಯನಿರ್ವಹಿಸಬೇಕು. ಶಾಲಾ ಶಿಕ್ಷಣಕ್ಕೆ ಸಾರ್ವಜನಿಕ ಧನಸಹಾಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಹೇಗೆ ಎಂಬ ಪ್ರಯತ್ನದಲ್ಲಿ ಒಂದು ಕಾರ್ಯಪಡೆಯನ್ನು ಸ್ಥಾಪಿಸಬೇಕು.
ವರದಿಯಲ್ಲಿರುವ ಪ್ರಮುಖ ಸಲಹೆಗಳು
ಉನ್ನತ ಶಿಕ್ಷಣ ಹಂತಕ್ಕೆ ನಿರ್ದಿಷ್ಟ ಕ್ರಮಗಳು
ಶಾಲಾ ಹಂತಕ್ಕೆ ನಿರ್ದಿಷ್ಟ ಕ್ರಮಗಳು
ಪಠ್ಯದ ಹೊರೆ ಕಡಿಮೆಗೆ ಸಲಹೆ
ಪಠ್ಯಕ್ರಮದ ಸುಧಾರಣೆಯು ಶಾಲಾ ಶಿಕ್ಷಣದ ಹಾಲಿ ಇರುವ ರಚನೆಯನ್ನು 5+3+3+4ರ (ಬುನಾದಿ, ಸಿದ್ಧತಾ, ಮಾಧ್ಯಮಿಕ ಹಾಗೂ ಪ್ರೌಢ ಹಂತ) ರಚನೆಗೆ ಪರಿವರ್ತಿಸಲು ಚಾಲನೆ ನೀಡಬೇಕು. ಒಂದೆಡೆ ಹನ್ನೊಂದು ಮತ್ತು ಹನ್ನೆರಡನೆಯ ತರಗತಿಗಳನ್ನು ಪ್ರೌಢ ಹಂತದೊಂದಿಗೆ ಸಮನ್ವಯಗೊಳಿಸುವ ಆಶಯವಿದ್ದರೆ ಮತ್ತೊಂದೆಡೆ ಆರಂಭಿಕ ವರ್ಷಗಳ ಶಾಖೆಯು 5 ವರ್ಷದ ಸಮಗ್ರ ಪಠ್ಯಕ್ರಮದ ಮೇಲೆ ಕೆಲಸ ಪ್ರಾರಂಭಿಸಬೇಕು. ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್​ಇಆರ್​ಟಿ) ಪಠ್ಯಕ್ರಮವನ್ನು ಪರಿಷ್ಕರಿಸಬೇಕು. ನಿರ್ದಿಷ್ಟವಾಗಿ ಆರಂಭಿಕ ಹಾಗೂ ಸಿದ್ಧತಾ ಹಂತಗಳನ್ನು ಪರಿಷ್ಕರಿಸಿ ಹಾಲಿ ಇರುವ ಪಠ್ಯಕ್ರಮದ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದೆ.
ಸದ್ಯಕ್ಕೆ ಶಾಲೆ ಆರಂಭ ಬೇಡ
ಬೆಂಗಳೂರು‘ ಶಾಲೆ ತೆರೆಯುವಂತೆ ಶಿಕ್ಷಣ ತಜ್ಞರು ಆಗ್ರಹಿಸುತ್ತಿರುವ ನಡುವೆಯೇ, ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ಸರ್ಕಾರಕ್ಕೆ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮನವಿ ಮಾಡಿದೆ. ಶಾಲೆಗಳನ್ನು ತೆರೆಯುವುದಕ್ಕೆ ಅವಸರ ಇಲ್ಲ. ಕರೊನಾ ಸೋಂಕು ಇಳಿಮುಖವಾದ ನಂತರ ಅಥವಾ ಕನಿಷ್ಠ ಒಂದು ತಿಂಗಳ ನಂತರ ಶಾಲೆ ತೆರೆಯುವುದು ಸೂಕ್ತ. ಹಂತ-ಹಂತವಾಗಿ ಶಾಲೆ ಪ್ರಾರಂಭಿಸಿ ಮತ್ತು ಮುಂದಿನ ಪರಿಸ್ಥಿತಿ ನೋಡಿ ಮುಂದುವರಿಸಲಿ ಮಕ್ಕಳ ಮೇಲೆ ಪ್ರಯೋಗ ಬೇಡ ಎಂದು ಅಭಿಪ್ರಾಯಪಟ್ಟಿದೆ. ಆನ್​ಲೈನ್ ಶಿಕ್ಷಣ ಪರ್ಯಾಯ ಮಾರ್ಗವಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಹಂತಗಳಲ್ಲಿ ಆನ್​ಲೈನ್ ಶಿಕ್ಷಣ ಬೋಧಿಸುವುದು ನಿಲ್ಲಿಸಬೇಕು. ಶಾಲೆ ಆರಂಭವಾಗುವ ಮೊದಲ ಎರಡು ದಿನ ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಬೇಕು. ಎಂಬ ಶಿಫಾರಸುಗಳನ್ನು ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ರಾಜ್ಯ ಸಂಚಾಲಕ ವಾಸುದೇವ ಶರ್ಮಾ ಸಚಿವ ಸುರೇಶ್ ಕುಮಾರ್​ಗೆ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
